Last Updated:
Shah Rukh Khan-Deepika Padukone: ವಕೀಲರೊಬ್ಬರು ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು ಖರೀದಿಸಿದ್ದಾರೆ. ಆದರೆ ಸ್ವಲ್ಪ ದಿನದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ ಮೇಲೆ ಕೇಸ್ ಹಾಕಿದ್ದಾರಂತೆ!
ರಾಜಸ್ಥಾನ: ವಕೀಲರೊಬ್ಬರು (lawyer) ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಹ್ಯುಂಡೈ ಕಂಪನಿಯ ಕಾರು (Hyundai car) ಖರೀದಿಸಿದ್ದಾರೆ. ಆದರೆ ಸ್ವಲ್ಪ ದಿನದಲ್ಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಮೇಲೆ ಕೇಸ್ ಹಾಕಿದ್ದಾರಂತೆ! ಜೊತೆಗೆ ಹ್ಯುಂಡೈ ಕಂಪನಿ ಮೇಲೂ ವಕೀಲರು ಕೇಸ್ ಜಡಿದಿದ್ದಾರೆ. ಸದ್ಯ ರಾಜಸ್ಥಾನದಲ್ಲಿ (Rajasthan) ಈ ಪ್ರಕರಣ ನಡೆದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ. ಈ ಬಗ್ಗೆ ಜನರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ರಾಜಸ್ಥಾನದಲ್ಲಿ ವಕೀಲರಾಗಿರುವ ಕೀರ್ತಿ ಸಿಂಗ್ ಎಂಬುವರು ಸುಮಾರು 24 ಲಕ್ಷ ರೂಪಾಯಿ ಬೆಲೆಯ ಹ್ಯುಂಡೈ ಅಲ್ಕಝಾರ್ ಎಸ್‌ಯುವಿ ಕಾರು ಒಂದನ್ನು ಖರೀದಿ ಮಾಡಿದ್ದಾರೆ. ಆದರೆ ಹೊಸ ಕಾರು ತಂದ ನಂತರ ಅವರಿಗೆ ಬಹಳ ತೊಂದರೆಗಳು ಎದುರಾದವು. ಕಾರಿನ ಎಂಜಿನ್‌ನಲ್ಲಿ ವೈಬ್ರೇಷನ್ ಇತ್ತು. ವೇಗವಾಗಿ ಓಡಿಸುವಾಗ ಪವರ್ ಕಡಿಮೆಯಾಗುತ್ತಿತ್ತು. ಇತರ ಕಾರುಗಳನ್ನು ಓವರ್‌ಟೇಕ್ ಮಾಡುವಾಗ ಸಹ ಸಮಸ್ಯೆಗಳು ಬರುತ್ತಿದ್ದವು. ಇದರಿಂದಾಗಿ ರಸ್ತೆಯಲ್ಲಿ ಅಪಾಯವಾಗಬಹುದು ಎಂದು ಅವರು ಭಾವಿಸಿದ್ದಾರೆ.
ಏಕೆಂದರೆ ಈ ಇಬ್ಬರು ಬಾಲಿವುಡ್ ನಟ, ನಟಿಯರು ಈ ಹ್ಯುಂಡೈ ಕಾರಿನ ಬ್ರ್ಯಾಂಡ್ ಅಂಬಾಸಡರ್‌ಗಳಾಗಿದ್ದಾರೆ. ಪ್ರಖ್ಯಾತಿ ಪಡೆದ ಜಾಹೀರಾತುಗಳಲ್ಲಿ ಅವರು ಕಾರಿನ ಬಗ್ಗೆ ಪ್ರಚಾರ ಮಾಡಿದ್ದಾರೆ. ಹೀಗಾಗಿ ಹ್ಯುಂಡೈ ಕಂಪನಿ ಜೊತೆ ಇವರಿಬ್ಬರನ್ನೂ ಈ ಕೇಸ್‌ನಲ್ಲಿ ಸೇರಿಸಿ, ವಕೀಲ ಕೀರ್ತಿ ಸಿಂಗ್ ದೂರು ನೀಡಿದ್ದಾರೆ ಅಂತ ನ್ಯೂಸ್18 ಇಂಗ್ಲಿಷ್ ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಬಹಳ ಚರ್ಚೆಗೆ ಒಳಗಾಗಿದೆ. ಒಬ್ಬ ಯೂಸರ್ ಪ್ರತಿಕ್ರಿಯಿಸುತ್ತಾ, “ಬ್ರ್ಯಾಂಡ್ ಅಂಬಾಸಡರ್‌ಗಳ ಮೇಲೆ ಕೇಸು ಹಾಕುವುದು ಒಳ್ಳೆಯ ಐಡಿಯಾ ಆದರೆ, ಕೋರ್ಟ್ ಅದನ್ನು ಅಂಗೀಕರಿಸುತ್ತದೆಯೋ ಇಲ್ಲವೋ ಅನುಮಾನ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಕಾರು ಕೊಂಡು ಶಾರುಖ್ ಖಾನ್ ಮತ್ತು ದೀಪಿಕಾ ಅವರೊಂದಿಗೆ ಕಾನೂನು ಹೋರಾಟಕ್ಕೆ ಇಳಿಯುವುದು? ಇದು ಓನರ್ ಮ್ಯಾನುವಲ್‌ನಲ್ಲಿ ಇಲ್ಲ!” ಎಂದು ಹಾಸ್ಯ ಮಾಡಿದ್ದಾರೆ.
ಕೆಲವರು ಈ ಕ್ರಮವನ್ನು ಕಂಪನಿಯ ಮೇಲೆ ಒತ್ತಡ ಹೇರಲು ಮಾಡಿದ್ದು ಎಂದು ಹೇಳಿದ್ದಾರೆ. ಕೆಲವೊಮ್ಮೆ ಸರಳವಾಗಿ ಪರಿಹಾರ ಸಿಗದಿದ್ದರೆ, ತಿರುಗು ಬಾಣ ಬಳಸಬೇಕು ಎಂದು ಕೆಲವರು ಸಮರ್ಥನೆ ನೀಡಿದ್ದಾರೆ. ಆದರೆ ಕೆಲವರು ಈ ಆರೋಪಗಳನ್ನು ಸುಳ್ಳು ಎಂದು ಟೀಕಿಸುತ್ತಿದ್ದಾರೆ. “ಎಂಜಿನ್ ವೈಬ್ರೇಷನ್ ಮತ್ತು ಪವರ್ ಲಾಸ್ ಇದು ಕಾರಿನ ಸಮಸ್ಯೆಗಳು. ವಕೀಲರಿಗೆ ಕೇಸುಗಳು ಇಲ್ಲದಿದ್ದರೆ ಯಾರ ಮೇಲಾದರೂ ಕೇಸು ಹಾಕುತ್ತಾರೆ” ಎಂದು ಕೆಲವರು ವ್ಯಂಗ್ಯವಾಡುತ್ತಾರೆ.













