Shah Rukh Khan: ಗಂಡನಿಗಿಂತ ಹೆಚ್ಚಾಗಿ ಶಾರುಖ್ ಖಾನ್‌ನೇ ಪ್ರೀತಿಸ್ತಾರಂತೆ! ಕಿಂಗ್ ಖಾನ್‌ಗೆ ಕ್ರೇಜಿ ಫ್ಯಾನ್ ಪ್ರಪೋಸ್! | | ACTPnews

ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್!


Last Updated:

ಶಾರುಖ್ ಖಾನ್ ಅಭಿಮಾನಿ ಒಬ್ಬರು ಐ ಲವ್ ಯುವ ಅಂತ ನೇರವಾಗಿಯೇ ಹೇಳಿದ್ದಾರೆ. ಪಕ್ಕದಲ್ಲಿಯೇ ಇರೋ ನನ್ನ ಗಂಡನಿಗಿಂತಲೂ ಹೆಚ್ಚು ನಿಮ್ಮನ್ನ ಪ್ರೀತಿಸ್ತೀನಿ ಅಂತಲೂ ಹೇಳಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ…

ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್!
ನಾನು ನಿಮ್ಮನ್ನ ನನ್ನ ಗಂಡನಿಗಿಂತಲೂ ಹೆಚ್ಚು ಪ್ರೀತಿಸ್ತಿನಿ: ಕ್ರೇಜಿ ಫ್ಯಾನ್ ಪ್ರಪೋಸ್!

ಶಾರುಖ್ ಖಾನ್ (Shah Rukh Khan) ಕಂಡು ಆ ಯುವತಿ ತುಂಬಾನೆ ಖುಷಿ ಆಗಿದ್ದರು. ಪಕ್ಕದಲ್ಲಿ ಗಂಡ (Husband) ಕೂಡ ಇದ್ದರು. ಆದರೂ ಶಾರುಖ್ ಖಾನ್ (Shah Rukh Khan) ಅಂದ್ರೆ ತುಂಬಾನೇ ಇಷ್ಟ ಅಂತ ಹೇಳಿಯೇ ಬಿಟ್ಟರು. ಅಷ್ಟೆ ಆಗಿದ್ದರೆ ಏನು ವಿಶೇಷ ಅನಿಸ್ತಾನೇ ಇರಲಿಲ್ಲ. ಆದರೆ, ಈ ಯುವತಿ ಇನ್ನೂ ಒಂದು ಮಾತು ಹೇಳಿದರು. “ನನ್ನ ಗಂಡನಿಗಿಂತಲೂ ನಿಮ್ಮನ್ನ ಹೆಚ್ಚು ಪ್ರೀತಿಸುತ್ತೇನೆ” ಅಂತಲೇ ಹೇಳಿದರು. ಇದರಿಂದ ಎದುರಿಗೆ ಇರೋರೆಲ್ಲ ಅಷ್ಟೆ ನಕ್ಕು ಬಿಟ್ಟರು. ಶಾರುಖ್ ಖಾನ್ ಮೊಗದಲ್ಲೂ ಮಂದಹಾಸ ಮೂಡ್ತು. ಆದರೆ, ಶಾರುಖ್ ಖಾನ್ ಏನು ಹೇಳಿದರು ಅನ್ನೋದು ಮುಂದೆ ಓದಿ.

ನಾನು ನಿಮ್ಮನ್ನ ಪ್ರೀತಿಸುತ್ತೇನೆ..

ಶಾರುಖ್ ಖಾನ್ ಐ ಲವ್ ಯು ಅಂತ ಮದುವೆ ಆದ ಆ ಯುವತಿ ಮೈಕ್ ಹಿಡಿದು ಕೂಗ್ತಾನೇ ಇದ್ದರು. ಎತ್ತರ ಸಾಲೋದಿಲ್ಲ ಅಂತ ಮೇಲೆ ಹತ್ತಿ ನಿಂತರು.
Shah Rukh Khan Crazy Fans Proposed at event at Rohan Corporation Event

ಆ ಯುವತಿ ಕೇಳಿದ ಪ್ರಶ್ನೆ ಏನು

ಆಗ ಶಾರುಖ್ ಖಾನ್‌ಗೆ ಈ ಯುವತಿ ಕಣ್ಣಿಗೆ ಬಿದ್ದರು. ನಾನು ನಿಮ್ಮನ್ನ ತುಂಬಾನೆ ಪ್ರೀತಿಸುತ್ತೇನೆ. ನನ್ನ ಗಂಡ ಇಲ್ಲಿಯೇ ಇದ್ದಾರೆ. ಅವರಿಗಿಂತಲೂ ಜಾಸ್ತಿ ನಿಮ್ಮನ್ನ ಲವ್ ಮಾಡ್ತೀನಿ ಅಂತಲೇ ಹೇಳಿದರು.

ಇದನ್ನ ಕೇಳಿದ ಶಾರುಖ್ ಏನಂದ್ರು

ಶಾರುಖ್ ಖಾನ್ ಶಾಕ್ ಆದ್ರು. ಏನಿದು ಹೀಗೆ ಅನ್ನುವ ಫೀಲ್ ಕೂಡ ಬಂದಂತೆ ಇತ್ತು. ಎರಡು ಸೆಕೆಂಡ್ ಸೈಲೆಟ್ ಆದರು. ನಿಮ್ಮ ಪ್ರೀತಿಯನ್ನ ಹೀಗೆ ನಿಮ್ಮ ಗಂಡನ ಮುಂದೆ ಹೇಳಿದರೆ ಹೇಗೆ? ಪರ್ಸನಲ್ ಆಗಿ ಸಿಕ್ಕಾಗ ಹೇಳು ಬೇಕು ಅಲ್ವೇ?

ಓಕೆ..ನಾನು ನಿಮ್ಮನ್ನೂ ಪ್ರೀತಿಸುತ್ತೇನೆ. ನಿಮ್ಮ ಗಂಡನನ್ನು ಪ್ರೀತಿಸುತ್ತೇನೆ. ಇಲ್ಲಿರೋ ಅಷ್ಟು ಜನರನ್ನು ಅಷ್ಟೆ ಹೆಚ್ಚಾಗಿ ಪ್ರೀತಿಸುತ್ತೇನೆ ಅಂತಲೂ ಶಾರುಖ್ ಖಾನ್ ಹೇಳಿದರು.

ನಾನು ಒಂದು ಕ್ವಶ್ಚನ್ ಕೇಳ್ಬೇಕು..

ಹೌದು, ಮದುವೆ ಆದ ಯುವತಿಗೆ ಕ್ವಶ್ಚನ್ ಕೇಳಲು ಇಲ್ಲಿ ಮೈಕ್ ಕೊಟ್ಟಿದ್ದರು. ಪ್ರಶ್ನೆ ಮಾಡುವುದನ್ನು ಬಿಟ್ಟು ಲವ್ ಯುವ ಅಂತಲೇ ಆ ಯುವತಿ ಹೇಳಿದ್ದರು.

Shah Rukh Khan Crazy Fans Proposed at event at Rohan Corporation Event

ನಾನು ಒಂದು ಕ್ವಶ್ಚನ್ ಕೇಳ್ಬೇಕು..

ನಾನು ಈಗ ಒಂದು ಪ್ರಶ್ನೆ ಕೇಳ್ಬೇಕು ಅಂತಲೇ ಶಾರುಖ್ ಖಾನ್‌ಗೆ ಹೇಳಿದರು. ಇದಕ್ಕೆ ಶಾರುಖ್ ಖಾನ್ ಒಂದು ಮಾತು ಹೇಳಿದರು. ಹಾ…ಇಲ್ಲಿವರೆಗೂ ಪ್ರಪೋಸ್ ಮಾಡಿದ್ದು ಆಯಿತು ಅಲ್ವೇ? ಈಗ ಕೇಳಿ ಪ್ರಶ್ನೆ ಅಂತಲೇ ಹೇಳಿದರು.

ಆ ಯುವತಿ ಕೇಳಿದ ಪ್ರಶ್ನೆ ಏನು

ಆ ಯುವತಿ ಕೇಳಿದ ಪ್ರಶ್ನೆ ಇಂಟ್ರಸ್ಟಿಂಗ್ ಆಗಿದೆ. ನಾವು ನಿಮ್ಮ ತರ ಎತ್ತರಕ್ಕೆ ಬೆಳೆಯಬೇಕು ಅಂದ್ರೆ ಏನ್‌ ಮಾಡ್ಬೇಕು. ಹೇಗೆ ಬೆಳೆಯಬೇಕು ಅಂತಲೇ ಪ್ರಶ್ನೆ ಮಾಡ್ತಾರೆ.

ರೋಹನ್ ಕಾರ್ಪೊರೇಷನ್ ಕಾರ್ಯಕ್ರಮ

ಮಂಗಳೂರಿನಲ್ಲಿ ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್ ಅನ್ನುವ ಕಾರ್ಯಕ್ರಮ ಕೂಡ ಇತ್ತು. ಇಲ್ಲಿ ಆಹ್ವಾನಿತರಿಗೆ ಮಾತ್ರ ಪ್ರವೇಶ ಇತ್ತು. ಇದರ ಹೊರತಾಗಿ ಇಲ್ಲಿ ರೋಹನ್ ಕಾರ್ಪೋರೇಷನ್ 32 ನೇ ಸಂಭ್ರಮಾಚರಣೆ ಇತ್ತು.

ಈ ಒಂದು ಕಾರ್ಯಕ್ರಮದಲ್ಲಿಯೇ ಆ ಯುವತಿ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಶಾರುಖ್ ಉತ್ತರ ಕೊಟ್ಟಿದ್ದರು. ಐ ಲವ್ ಯು ಅಂತ ಹೇಳಿದಕ್ಕೆ ತಮಾಷೆಯಾಗಿಯೇ ಲವ್ ಯು ಟು ಅಂತಲೂ ಶಾರುಖ್ ಆ ಯುವತಿಗೆ ಹೇಳಿದ್ದರು. ಈ ಒಂದು ಕ್ಷಣದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed