Last Updated:
actor: ವರದಿಯ ಪ್ರಕಾರ ಯೋಗೇಶ್ ಸೆಟ್ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಬಳಿಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಇತ್ತೀಚೆಗೆ ಭೋಜ್ಪುರಿ ನಟ ಸುದೀಪ್ ಪಾಂಡೆ ಅವರು ಹೃದಯಘಾತದಿಂದ ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ನಿಧನರಾಗಿದ್ದಾರೆ. ಕಿರುತೆರೆ ನಟ ಯೋಗೇಶ್ ಮಹಾಜನ್ (Yogesh Mahajan) ಅವರು ಜನವರಿ 19, 2025 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ (Heart attack) ಎಂದು ವರದಿಯಾಗಿದೆ. ಶಿವ ಶಕ್ತಿ-ತಪ, ‘ತ್ಯಾಗ’, ‘ತಾಂಡವ್’, ‘ಆದಿ ಶಂಕರಾಚಾರ್ಯ’, ‘ಶ್ರೀಮದ್ ರಾಮಾಯಣ’ ರೀತಿಯ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಉಮರ್‌ಗಾಂವ್‌ನಲ್ಲಿರುವ ಅವರ ಫ್ಲಾಟ್‌ನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಯೋಗೇಶ್ ಸೆಟ್ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಬಳಿಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ ಯೋಗೇಶ್ ಮಹಾಜನ್ ಅವರು ಮುಂಬೈಚೆ ಶಹಾನೆ ಮತ್ತು ಸಂಸಾರಾಚಿ ಮಾಯಾ ಮುಂತಾದ ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
ದೂರದರ್ಶನ ಮತ್ತು ಚಲನಚಿತ್ರಗಳೆರಡರಲ್ಲೂ ಅವರ ಅಭಿನಯಕ್ಕಾಗಿ ಅವರು ಅಭಿಮಾನಿಗಳನ್ನು ಹೊಂದಿದ್ದರು ಮತ್ತು ಅವರ ಅಕಾಲಿಕ ಮರಣವು ಅವರ ಅನೇಕ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ದುಃಖವನ್ನುಂಟುಮಾಡಿದೆ. ಯೋಗೇಶ್ ಅವರ ಪತ್ನಿ ಮತ್ತು ಅವರ ಏಳು ವರ್ಷದ ಮಗನನ್ನು ಅಗಲಿದ್ದಾರೆ.
ಇಂದು (ಜನವರಿ 19) ಅವರ ಅಂತ್ಯಸಂಸ್ಕಾರ ನೆರವೇರಿದೆ. ಮುಂಬೈನಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ಈ ಬಗ್ಗೆ ನಟಿ ಅಕಂಗ್ಶಾ ರಾವತ್, “ಅವರು ತುಂಬಾ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿ.
ಒಂದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ಶೂಟಿಂಗ್ ಮಾಡುತ್ತಿದ್ದೇವೆ. ಈ ಸಮಯದಲ್ಲಿ, ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ”ಎಂದು ಮಾಧ್ಯಮದ ಜೊತೆ ಹೇಳಿಕೊಂಡಿದ್ದಾರೆ.













