Last Updated:
ಬೆಂಗಳೂರು ಮಹಿಳೆ 10 ವರ್ಷಗಳಿಂದ ಪುರಸಭೆ ಕಾರ್ಮಿಕರಿಗೆ ಚಹಾ, ತಿಂಡಿ ನೀಡುತ್ತಾ, ಪ್ರಾಣಿಗಳು, ಮಾರಾಟಗಾರರಿಗೂ ಸಹಾಯ, ಜಗದೀಶ್ ನಡನಳ್ಳಿ ವಿಡಿಯೋ ವೈರಲ್, ನೆಟ್ಟಿಗರಿಂದ ಪ್ರಶಂಸೆ
ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸಣ್ಣ ಸಹಾಯ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಶೋ-ಆಫ್ ಮಾಡುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಬೆಂಗಳೂರಿನ (Bengaluru Women) ಮಹಿಳೆ, ಕಳೆದ ಒಂದು ದಶಕದಿಂದ (Decade) ಯಾರ ಕಣ್ಣಿಗೂ ಬೀಳದಂತೆ, ಯಾವುದೇ ಪ್ರಚಾರದ ಬಯಕೆಯಿಲ್ಲದೆ ಮಾಡುತ್ತಿರುವ ಸೇವೆ (Selfless Service) ಮಾತ್ರ ನಿಜಕ್ಕೂ ಅದ್ಭುತ.
ಈ ಮಹಿಳೆ ಪ್ರತಿದಿನ ತಮ್ಮ ಮನೆಯ ಮುಂದೆ ಬರುವ ಪುರಸಭೆ ಕಾರ್ಮಿಕರಿಗೆ ಚಹಾ, ಕಾಫಿ, ಬ್ರೆಡ್, ಬಿಸ್ಕತ್ತು ಮತ್ತು ಬಾಳೆಹಣ್ಣುಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದು ಕೇವಲ ಅವತ್ತಿನ ಕೆಲಸವಲ್ಲ, ಕಳೆದ ಹತ್ತು ವರ್ಷಗಳಿಂದ ಅವರು ಇದನ್ನು ಒಂದು ದಿನವೂ ಮರೆಯದೆ ಪಾಲಿಸುತ್ತಿದ್ದಾರೆ. ಅವರ ನೆರೆಯವರಾದ ಜಗದೀಶ್ ನಡನಳ್ಳಿ ಅವರು ಈ ಶಾಂತಿಯುತ ಕಾಯಕವನ್ನು ಗಮನಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಇವರ ನಿಸ್ವಾರ್ಥ ಸೇವೆ ಬೆಳಕಿಗೆ ಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸ್ವತಃ ಆ ಮಹಿಳೆಯ ಮಗಳೇ ಪ್ರತಿಕ್ರಿಯಿಸಿ, “ನನ್ನ ತಾಯಿಯ ಮೌನ ಸೇವೆಯನ್ನು ಗುರುತಿಸಿ, ಇದನ್ನು ಇಷ್ಟು ಸುಂದರವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ನಡನಳ್ಳಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆಯ ಬಗ್ಗೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ. “ಇಂತಹವರು ಇರುವುದರಿಂದಲೇ ಜಗತ್ತು ಇನ್ನೂ ಬದುಕಲು ಯೋಗ್ಯವಾಗಿದೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಸೇವೆ ಮಾಡುವ ಇಂತಹ ಮನಸ್ಸುಗಳಿಗೆ ನಮ್ಮದೊಂದು ಸಲಾಂ.
(Source: NDTV)
Bangalore [Bangalore],Bangalore,Karnataka













