Last Updated:
Satluj: ಒಟಿಟಿಯಲ್ಲಿ ಸ್ಟ್ರೀಮಿಂಗ್ ಶುರು ಮಾಡಿ ಎರಡನೇ ದಿನದಲ್ಲಿ ಡಿಲೀಟ್ ಮಾಡಿದ್ದೇಕೆ ಸಿನಿಮಾ? ಇದರ ಹಿಂದಿನ ಕಾರಣವೇನು ಗೊತ್ತಾ?
ಬಾಲಿವುಡ್ (Bollywood) ನಟ ದಿಲ್ಜಿತ್ ದೋಸಾಂಜ್ ಅವರ ‘ಸತ್ಲುಜ್’ ಚಿತ್ರವನ್ನು (Movie) ಭಾರತದ ಒಟಿಟಿ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ. ‘ಸತ್ಲುಜ್’ ಸಿನಿಮಾ 1990 ರ ದಶಕದಲ್ಲಿ ಪಂಜಾಬ್ನಲ್ಲಿ (Punjab) ನಡೆದ ಹತ್ಯೆಗಳು ಮತ್ತು ಮಾನವ ಹಕ್ಕುಗಳ (Human Rights) ಉಲ್ಲಂಘನೆಯನ್ನು ಬಹಿರಂಗಪಡಿಸಿದ ಜಸ್ವಂತ್ ಸಿಂಗ್ ಕಲ್ರಾ ಅವರ ನೈಜ ಘಟನೆಯನ್ನು (Real Incident) ಆಧರಿಸಿದ ಚಿತ್ರವಾಗಿದೆ.
ಈ ಚಿತ್ರಕ್ಕೆ ಆರಂಭದಲ್ಲಿ ‘ಘಲ್ಲುಗಾರ’ ಮತ್ತು ನಂತರ ‘ಪಂಜಾಬ್ ’95’ ಎಂದು ಹೆಸರಿಡಲಾಯಿತು. ಚಲನಚಿತ್ರ ಸೆನ್ಸಾರ್ ಮಂಡಳಿಯ ಶಿಫಾರಸಿನ ನಂತರ ಚಿತ್ರದ ಶೀರ್ಷಿಕೆಯನ್ನು ‘ಸತ್ಲುಜ್’ ಎಂದು ಬದಲಾಯಿಸಲಾಯಿತು.
ಇದಲ್ಲದೆ, ಚಿತ್ರದಿಂದ ಐತಿಹಾಸಿಕ ಉಲ್ಲೇಖಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ತೀವ್ರ ವಿರೋಧ ವ್ಯಕ್ತವಾದ ಕಾರಣ ಚಿತ್ರದ ಬಿಡುಗಡೆ ವಿಳಂಬವಾಯಿತು. 3 ವರ್ಷಗಳ ಕಾನೂನು ಹೋರಾಟದ ನಂತರ, ಹಲವು ಪ್ರತಿಭಟನೆಗಳ ಹೊರತಾಗಿಯೂ, ಚಿತ್ರವನ್ನು 3 ನೇ ತಾರೀಖಿನಂದು OTT ವೇದಿಕೆ ‘Zee5’ ನಲ್ಲಿ ‘ಸತ್ಲುಜ್’ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದ 48 ಗಂಟೆಗಳಲ್ಲಿ ಭಾರತದಲ್ಲಿ OTT ಪ್ಲಾಟ್ಫಾರ್ಮ್ಗಳಿಂದ ಚಿತ್ರವನ್ನು ತೆಗೆದುಹಾಕಲಾಯಿತು. ಸಂಬಂಧಪಟ್ಟ OTT ಕಂಪನಿಯು ‘ಸತ್ಲುಜ್’ ಸಿನಿಮಾವನ್ನು ಭಾರತದಲ್ಲಿ ರೀ-ಸ್ಟ್ರೀಮ್ ಮಾಡಲು ಲೀಗಲ್ ಆಗಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ವಾಸ್ತವವಾಗಿ, ದಿಲ್ಜಿತ್ ದೋಸಾಂಜ್ ಅವರ “ಸತ್ಲುಜ್” ಚಿತ್ರವನ್ನು OTT ಪ್ಲಾಟ್ಫಾರ್ಮ್ ZEE5 ನಿಂದ ತೆಗೆದುಹಾಕುವ ನಿರ್ಧಾರದ ಹಿಂದಿನ ಕಾರಣ ನೋಡಿದರೆ ಕಂಟೆಂಟ್ ವಿವಾದ ಎನ್ನಲಾಗಿದೆ. “ಸತ್ಲುಜ್” ಚಿತ್ರದ ಕೆಲವು ಅಂಶಗಳನ್ನು ಭಾರತ ವಿರೋಧಿಯಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.
“ಸತ್ಲುಜ್” ಚಿತ್ರವನ್ನು ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಅದನ್ನು ಅನುಮೋದಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ನಂತರ ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಮೂಲಗಳ ಪ್ರಕಾರ, ಒಟಿಟಿ ಬಿಡುಗಡೆಯ ನಂತರ ಚಿತ್ರದ ಕೆಲವು ಭಾಗಗಳ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಆಗ ಅಧಿಕಾರಿಗಳು ಅದನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವಂತೆ ಕೇಳಿಕೊಂಡರು.
ಪ್ರಸ್ತುತ ನಿಯಮಗಳ ಅಡಿಯಲ್ಲಿ, OTT ಪ್ಲಾಟ್ಫಾರ್ಮ್ಗಳಲ್ಲಿ ನೇರವಾಗಿ ಬಿಡುಗಡೆ ಮಾಡಲಾದ ಕಂಟೆಂಟ್ಗೆ ಪೂರ್ವ ಪ್ರಮಾಣೀಕರಣದ ಅಗತ್ಯವಿಲ್ಲ. ಆದಾಗ್ಯೂ, ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಕೆಲವು ನಿಯಮಗಳಡಿ ಕಾರ್ಯನಿರ್ವಹಿಸುತ್ತವೆ. ಸೂಕ್ಷ್ಮ ಅಥವಾ ಸಂಭಾವ್ಯ ಹಾನಿಕಾರಕ ಕಂಟೆಂಟ್ ಇದ್ದಾಗ ಸರ್ಕಾರದ ಕಣ್ಗಾವಲಿನಲ್ಲಿರುತ್ತವೆ.
Bangalore,Karnataka













