Sathish Ninasam Movie: ‘ದಿ ರೈಸ್ ಆಫ್ ಅಶೋಕ’ ಒಟಿಟಿಗೆ ಬರೋದು ಪಕ್ಕಾ; ಯಾವಾಗ, ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews

sathish ninasam sapthami gowda the rise of ashoka movie streaming soon on sunnxt


ದಿ ರೈಸ್ ಆಫ್ ಅಶೋಕ

ದಿ ರೈಸ್ ಆಫಸ್ ಅಶೋಕ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದ ಕಳೆದ ಫೆಬ್ರವರಿ ತಿಂಗಳ 27 ರಂದು ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿಯೇ ಇದು ತೆರೆ ಕಂಡಿತ್ತು.

ದಿ ರೈಸ್ ಆಫ್ ಅಶೋಕ
ಸಪ್ತಮಿ ಗೌಡ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಸಪ್ತಮಿ ಗೌಡ ಅವರ ಆಗಮನದಿಂದ ಚಿತ್ರಕ್ಕೆ ಒಂದು ಹೊಸ ಹೊಳಪು ಬಂತು ಅಂತಲೂ ಚಿತ್ರದ ನಾಯಕ ಸತೀಶ್ ನೀನಾಸಂ ಹೇಳಿದ್ದರು.
ವಿನೋದ್ ವಿ. ಧೋಂಡಾಲೆ ಡೈರೆಕ್ಷನ್

ದಿ ರೈಸ್ ಆಫ್ ಅಶೋಕ ಚಿತ್ರವನ್ನ ವಿನೋದ್ ವಿ. ಧೋಂಡಾಲೆ ಡೈರೆಕ್ಷನ್ ಮಾಡಿದ್ದಾರೆ. ಆದರೆ ಈ ಚಿತ್ರದ ಅರ್ಧ ಕೆಲಸ ಆಗಿತ್ತು. ಆಗಲೇ ಇವರು ನಿಧನರಾದರು.

ಸನ್‌ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್

ಕನ್ನಡದ ದಿ ರೈಸ್ ಆಫ್ ಅಶೋಕ ಚಿತ್ರ ಕನ್ನಡದಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲು ಇದು ಪ್ರಸಾರ ಆಗುತ್ತಿದೆ.

ಮುಂಬರುವ ಜೂನ್-5 ರಂದು ಇದು ಸ್ಟ್ರೀಮಿಂಗ್ ಆಗುತ್ತಿದೆ. ಈ ವಿಷಯವನ್ನ ಸನ್‌ನೆಕ್ಸ್ಟ್ ತನ್ನ ಇನ್‌ಸ್ಟಾಗ್ರಾಮ್‌ನ ಪೇಜ್ ಅಲ್ಲಿಯೇ ಹಂಚಿಕೊಂಡಿದೆ. ಹಾಗೆ ಈ ಸಿನಿಮಾ ಒಟಿಟಿಯಲ್ಲಿ ಯಾವ ರೀತಿ ಕಮಾಲ್ ಮಾಡುತ್ತದೆ ಅನ್ನುವ ಕುತೂಹಲವೂ ಹೆಚ್ಚಾಗಿದೆ.

sathish ninasam sapthami gowda the rise of ashoka movie streaming soon on sunnxt

ಸನ್‌ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್

(ಚಿತ್ರ ಕೃಪೆ: ಸನ್‌ನೆಕ್ಸ್ಟ್ ಇನ್‌ಸ್ಟಾಗ್ರಾಮ್)

ಚಿತ್ರದ ಇತರ ಮಾಹಿತಿ

ದಿ ರೈಸ್ ಆಫ್ ಅಶೋಕ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಸತೀಶ್ ನೀನಾಸಂ ಈ ಚಿತ್ರದಲ್ಲಿ ಅಶೋಕ ಅನ್ನುವ ಪಾತ್ರ ಮಾಡಿದ್ದಾರೆ.

ಸಪ್ತಮಿ ಗೌಡ ಇಲ್ಲಿ ಅಂಬಿಕಾ ಅನ್ನುವ ಪಾತ್ರ ಮಾಡಿದ್ದಾರೆ. ಸತೀಶ್ ನೀನಾಸಂ ಅವರಿಗೆ ಜೋಡಿ ಆಗಿದ್ದಾರೆ. ಚಿತ್ರದಲ್ಲಿ ಬಿ.ಸುರೇಶ್ ನಟಿಸಿದ್ದಾರೆ. ರವಿಶಂಕರ್ ಅಭಿನಯಿಸಿದ್ದಾರೆ. ಸಂಪತ್ ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸತೀಶ್ ಸಿನಿಮಾಗಳು

ಸತೀಶ್ ನೀನಾಸಂ ಚಿತ್ರಗಳಲ್ಲಿ ದಿ ರೈಸ್ ಆಫ್ ಅಶೋಕ ಬಂದು ಹೋಗಿದೆ. ಇದಾದ್ಮೇಲೆ ಇನ್ನು ಬರಬೇಕಿರೋ ಚಿತ್ರದಲ್ಲಿ ಅಯೋಗ್ಯ-2 ಚಿತ್ರ ಇನ್ನಷ್ಟೆ ರಿಲೀಸ್ ಆಗಬೇಕಿದೆ.

ಅಯೋಗ್ಯ-2 ಯಾವಾಗ ರಿಲೀಸ್

ಅಯೋಗ್ಯ-2 ಸಿನಿಮಾದ ಚಿತ್ರೀಕರಣ ಪೂರ್ಣ ಆಗಿದೆ. ಚಿತ್ರೀಕರಣದ ನಂತರ ಕೆಲಸ ನಡಿಯುತ್ತಿದೆ. ಇದೇ ವರ್ಷ ಮಳೆಗಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ.

ಡೈರೆಕ್ಟರ್ ಮಹೇಶ್ ಕುಮಾರ್ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನಾಯಕಿ ರಚಿತಾ ರಾಮ್ ಅವರು ಈ ಚಿತ್ರದಲ್ಲು ನಾಯಕ ನಟ ಸತೀಶ್ ನೀನಾಸಂ ಅವರಿಗೆ ಜೋಡಿ ಆಗಿದ್ದಾರೆ. ಇವರ ಈ ಜೋಡಿ ಇಲ್ಲೂ ಮೋಡಿ ಮಾಡುವ ಸಾಧ್ಯತೆ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed