Last Updated:
ಅಯೋಗ್ಯ-2 ಚಿತ್ರದ ಸುಬ್ಬಲಕ್ಷ್ಮಿ ಹಾಡು ಬೇರೆ ವಿಚಾರಕ್ಕೆ ಸದ್ದು ಮಾಡ್ತಿದೆ. ಹಾಡಿನ ರಿಲೀಸ್ ಇವೆಂಟ್ ಅಲ್ಲಿಯೇ ಈ ಹಾಡಿನ ಬಗೆಗಿನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ಮೊದಲ ಹಾಡೇನೋ ರಿಲೀಸ್ ಆಗಿದೆ. ಆದರೆ, ರಿಲೀಸ್ ಇವೆಂಟ್ ಅಲ್ಲಿಯೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಪತ್ರಕರ್ತರ ಪ್ರಶ್ನೆಗಳಿಗೂ ಅಷ್ಟೆ ಸ್ಟ್ರಾಂಗ್ ಆಗಿಯೇ ತೂರಿ ಬಂದಿವೆ. ಅಯೋಗ್ಯ ಚಿತ್ರದ ಮುಂದುವರೆದ ಭಾಗ ಅಂತೀರಾ? ಆದರೆ, ಮೊದಲ ಭಾಗದಲ್ಲಿ ಹಾಡಿರೋ ವಿಜಯ್ ಪ್ರಕಾಶ್ (Vijay Prakash) ಅವರು ಇಲ್ಲಿ ಏನಮ್ಮಿ ರೀತಿಯ ಹಾಡನ್ನೆ ಹಾಡಿಲ್ವೇ? ನೀನಾಸಂ ಸತೀಶ್ (Ninasam Sathish) ಅವರಿಗೆ ಸೂಟೇ ಆಗೋದಿಲ್ಲ. ಆ ರೀತಿಯ ವಾಯ್ಸ್ ಸುಬ್ಬಲಕ್ಷ್ಮಿ ಹಾಡಿಗೆ ಬಳಕೆ ಆಗಿದೆ. ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ. ಇನ್ನು ಚೆನ್ನಾಗಿ ಇರ್ತಾ ಇತ್ತು ಅನ್ನೋದೇ ಇಲ್ಲಿ ಪ್ರಶ್ನೆಗಳು ಬಂದಿವೆ. ಆದರೆ, ಇದಕ್ಕೆ ಸಿನಿಮಾ ನಾಯಕ ಏನಂದ್ರು? ಡೈರೆಕ್ಟರ್ ಮಹೇಶ್ (Director Mahesh) ಹೇಳಿರೋದು ಏನು? ಎಲ್ಲವೂ ಇಲ್ಲಿದೆ ಓದಿ.
ಸತೀಶ್ ಏನ್ ಹೇಳ್ತಾರೆ
ಅದು ಅಷ್ಟೆ ರೀಚ್ ಕೂಡ ಆಗಿತ್ತು. ಆದರೆ, ಸುಬ್ಬಲಕ್ಷ್ಮಿ ಹಾಡು ಕೇಳಿದಾಗ ಆದ ಫೀಲ್ ಬೇರೇನೆ ಇದೆ. ಸಿದ್ ಶ್ರೀರಾಮ್ ಅವರ ವಾಯ್ಸ್ ಅದ್ಯಾಕೋ ನೀನಾಸಂ ಸತೀಶ್ ಅವರಿಗೆ ಸೂಟ್ ಆಗ್ತಾನೇ ಇಲ್ಲ. ಈ ರೀತಿಯ ಅಭಿಪ್ರಾಯಗಳು ಪತ್ರಕರ್ತರಿಂದಲೇ ರಿಲೀಸ್ ಇವೆಂಟ್ ಅಲ್ಲಿಯೇ ಬಂದಿವೆ.
ಸತೀಶ್ ನೀನಾಸಂ ಅವರು ತಮಗೆ ಸರಿ ಅನಿಸಿದನ್ನ ಹೇಳ್ತಾರೆ. ಅರ್ಜುನ್ ಜನ್ಯ ಅವರು ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗೆ ಕೆಲವೊಮ್ಮೆ ಕೆಲವು ಪ್ರಯೋಗಗಳನ್ನು ಮಾಡ್ತಾರೆ.
ಹಾಗಾಗಿಯೇ ಈ ಒಂದು ಹಾಡಿನಲ್ಲಿ ಸಿದ್ ಶ್ರೀರಾಮ್ ಅವರ ವಾಯ್ಸ್ ಅನ್ನ ಇಲ್ಲಿ ಬಳಸಿದ್ದಾರೆ. ಅಷ್ಟೆ, ವಿಜಯ್ ಪ್ರಕಾಶ್ ಅವರು ಈ ಚಿತ್ರದಲ್ಲಿ ಬೇರೆ ಹಾಡು ಹಾಡಿದ್ದಾರೆ ಅಂತ ನೀನಾಸಂ ಸತೀಶ್ ಹೇಳಿದ್ದಾರೆ. ಡೈರೆಕ್ಟರ್ ಮಹೇಶ್ ಕುಮಾರ್ ಕೂಡ ಇದೇ ಮಾತನ್ನೆ ಹೇಳಿದ್ದಾರೆ.
ರಚಿತಾ ರಾಮ್ ಅವರು ಇಲ್ಲಿ ಇನ್ನೂ ಒಂದು ಕೆಲಸ ಮಾಡಿದ್ದಾರೆ. ವೇದಿಕೆ ಮೇಲೆ ಇದ್ದ ರಚಿತಾ ರಾಮ್ ಅವರು ಕಳೆಗೆ ಇಳಿದು ಬಂದ್ರು. ಬಂದು ಪ್ರಶ್ನೆ ಕೇಳ್ತಾ ಇದ್ದ ಪತ್ರಕರ್ತೆಗೆ ಮೈಕ್ ಕೂಡ ಕೊಟ್ಟರು.
ಅಯೋಗ್ಯ-2 ಸುಬ್ಬಲಕ್ಷ್ಮಿ ಹಾಡನ್ನ ವಿಜಯ್ ಪ್ರಕಾಶ್ ಯಾಕ್ ಹಾಡ್ಲಿಲ್ಲ? ಸತೀಶ್ ಹೇಳೋದೇನು?
ಕೇಳುವ ಪ್ರಶ್ನೆಗಳು ಸರಿಯಾಗಿಯೇ ಕೇಳಲಿ ಅನ್ನುವ ಅರ್ಥದಲ್ಲಿಯೇ ಈ ಮೈಕ್ ಕೊಟ್ಟಿದ್ದಾರೆ ಅಂತಲೂ ಹೇಳಬಹುದು. ಅಯೋಗ್ಯ ಚಿತ್ರದಲ್ಲಿ ಏನಮ್ಮಿ ಹಾಡನ್ನ ಎಲ್ಲರೂ ಮೆಚ್ಚಿದ್ದರು. ಅಯೋಗ್ಯ-2 ಚಿತ್ರದಲ್ಲೂ ಅಂತಹದ್ದೇ ಒಂದು ನಿರೀಕ್ಷೆ ಇತ್ತು. ಆದರೆ, ಈಗ ಅದು ಸುಳ್ಳಾಗಿದೆ. ಸುಬ್ಬಲಕ್ಷ್ಮಿ ಹಾಡು ಬೇರೆ ತರವೇ ಇದೆ.
ನಾವು ಈ ಚಿತ್ರದಲ್ಲಿ ಏನಮ್ಮಿ ಹಾಡನ್ನ ರೀ-ಕ್ರಿಯೇಟ್ ಮಾಡಿಲ್ಲ. ಬದಲಾಗಿ ಇಲ್ಲಿ ಬೇರೆ ಹಾಡನ್ನ ಕೊಟ್ಟಿದ್ದೇವೆ. ಹಾಗಾಗಿಯೇ ಇಲ್ಲಿ ಸಿದ್ ಶ್ರೀರಾಮ್ ವಾಯ್ಸ್ ಬಂದಿದೆ.
ಆಗಸ್ಟ್-14 ರಂದು ಅಯೋಗ್ಯ- 2 ಚಿತ್ರ ರಿಲೀಸ್ ಆಗುತ್ತಿದೆ. ಈ ಡೇಟ್ ಅನ್ನ ಸುಬ್ಬಲಕ್ಷ್ಮಿ ಹಾಡಿನ ಮೂಲಕವೇ ರಿವೀಲ್ ಮಾಡಲಾಗಿದೆ. ಇನ್ನುಳಿದಂತೆ ಅಯೋಗ್ಯ-2 ಚಿತ್ರ ತನ್ನದೇ ರೀತಿಯಲ್ಲಿಯೇ ಗಮನ ಸೆಳೆಯುವ ಪ್ರಯತ್ನ ಮಾಡ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













