Yogaraj Bhat: ಯೋಗರಾಜ್ ಭಟ್ರ ಎಣ್ಣೆ ಹಾಡು ಜೊತೆ ಬ್ರೇಕಪ್ ಮೂಡ್ | | ACTPnews

Yogaraj Bhat Bayarike Kannada Video Song Released


ಭಗ್ನ ಪ್ರೇಮ…

ಯೋಗರಾಜ್ ಭಟ್ರು ಎಣ್ಣೆ ಹಾಡು ಮಸ್ತ್ ಆಗಿಯೇ ಬರೆಯುತ್ತಾರೆ. ಈ ಸಲ ‘ಬಾಯಾರಿಕೆಗೆ’ ಅಂತಲೇ ಶುರು ಮಾಡಿದ್ದಾರೆ. ಈ ಬಾಯಾರಿಕೆಗೆ ಏನು ಕಾರಣ ಅಂತಲೇ ಕೇಳ್ತಾ ಹೋಗ್ತಾರೆ.
ಯೋಗರಾಜ್ ಭಟ್ರ ಎಣ್ಣೆ ಹಾಡು; ಇಲ್ಲೂ ಇದೆ ಭಗ್ನ ಪ್ರೇಮದ ಕತೆ!

(ಚಿತ್ರ ಕೃಪೆ: ಅಮೋಲ್ ಪಾಟೀಲ್ ಡೈರೆಕ್ಟರ್)

ಆದರೆ, ಈ ಬಾಯಾರಿಕೆ ಅಂದ್ರೆ ಎಣ್ಣೆಯ ಬಾಯಾರಿಕೆ ಇದಲ್ಲ. ಇದು ಪ್ರೀತಿಯ ಬಾಯಾರಿಕೆ ಅಂತಲೂ ಫೀಲ್ ಆಗ್ತಾ ಹೋಗುತ್ತದೆ. ಹಾಡನ್ನ ನೋಡ್ತಾ ಹೋದ್ರೆ ಇಡೀ ಹಾಡಿನ ಒಳಗೆ ಇರೋ ಭಗ್ನ ಪ್ರೀತಿಯ ಚಿತ್ರಣ ಮನಸ್ಸಿಗೆ ಇಳಿಯುತ್ತದೆ.

ಅಮಲು….

ಈ ಒಂದು ಹಾಡಿನಲ್ಲಿ ಅಮಲಿನ ವಿಚಾರವು ಬರುತ್ತದೆ. ಆದರೆ, ಈ ಅಮಲು ಎಣ್ಣೆಯ ಅಮಲಲ್ಲ. ಇದು ಪ್ರೀತಿಯ ಮತ್ತು ಅವಳ ಮೇಲಿನ ಒಲವಿನ ಅಮಲಿನ ಕತೆ ಹೇಳುತ್ತದೆ.

ಪ್ರೀತಿ ಕೂಡ ಅಮಲು ಅಲ್ಲವೇ ಅಂತಲೂ ಹೇಳಿರೋದು ಇದೆ. ಇದರಲ್ಲಿ ಒಂದು ಸಾಲಿದೆ. ಅದು ಅಷ್ಟೆ ಅದ್ಭುತವಾಗಿಯೇ ಇದೆ.

Yogaraj Bhat Bayarike Kannada Video Song Released

ನಿನ್ನ ಅಮಲಿನಲ್ಲಿ…

(ಚಿತ್ರ ಕೃಪೆ: ಅಮೋಲ್ ಪಾಟೀಲ್ ಡೈರೆಕ್ಟರ್)

ನೀ ಇರದ ಊರಿನಲ್ಲಿ..

ಈ ಸಾಲಿನ ಮುಂದೆ ಇನ್ನು ಎರಡು ಸಾಲು ಬರುತ್ತವೆ. ನೀ ಇರದ ಊರಿನಲಿ.. ನೆರಳಿರದ ದಾರಿಯಲ್ಲಿ .. ಕೊನೆಗೊಂದು ಬಾರಿರಲಿ.. ಅನ್ನೋದೇ ಈ ಸಾಲಾಗಿದೆ.

ಇದನ್ನ ನೋಡ್ತಾ ಹೋದ್ರೆ ಪ್ರೀತಿಯ ಅಮಲಿನಲ್ಲಿರೋ ಪ್ರೇಮಿಯ ಆಸೆಗಳು ಅದೆಷ್ಟು ನೋಡಿ ಅನಿಸುತ್ತದೆ. ನೀ ಇರದ ಊರಿನಲ್ಲಿ ನೆರಳೂ ಇರದ ದಾರಿಯಲ್ಲಿ ಕೊನೆಗೊಂದು ಬಾರು ಇರಲಿ ಅಂತ ಕೇಳುವುದು ವಿಷಾದದ ಉತ್ತುಂಗ ಅನಿಸುತ್ತದೆ.

ನಿನ್ನ ಅಮಲಿನಲ್ಲಿ..

ಈ ಹಾಡಿನಲ್ಲಿ ಬರೂ ನಾಯಕಿಯ ಹೆಸರು ಅಮಲಾ ಅಂತಲೇ ಇದೆ. ಈ ಅಮಲಾಳ ಅಮಲಿನಲ್ಲಿಯೇ ಇರೋ ಪ್ರೇಮಿ ಒಂದು ಮಾತು ಹೇಳ್ತಾನೆ. ಸದಾ ನಿನ್ನ ಅಮಲಿನಲ್ಲಿಯೇ ಇರೋಕೆ ಇಷ್ಟ ಪಡುತ್ತೇನೆ.

ಈ ಅಮಲಿನಿಂದ ಹೊರಗೆ ಬಂದ್ರೆ ಬೇಸರ ಆಗುತ್ತದೆ ಅನ್ನುವ ಅರ್ಥದಲ್ಲಿಯೇ ಒಂದು ಲೈನ್ ಕೂಡ ಬರುತ್ತದೆ. ಅಂದ್ಹಾಗೆ ಈ ಹಾಡಿನಲ್ಲಿ ಪ್ರಜ್ವಲ್ ಶೆಟ್ಟಿ ಬಂಬ್ರಾಣ, ವೆನ್ಸಿಟಾ ಡಯಾಸ್, ದೀಕ್ಷಾ ಭೀಸೆ ಇವರೆಲ್ಲ ಅಭಿನಯಿಸಿದ್ದಾರೆ. ಇಡೀ ಹಾಡಿನಲ್ಲಿ ಇವರೇ ಹೈಲೈಟ್ ನೋಡಿ.

ವಾಸುಕಿ ವೈಭವ್

ಗಜಲ್ ರೀತಿನೆ ಫೀಲ್ ಆಗುವ ಈ ಹಾಡನ್ನ ವಾಸುಕಿ ವೈಭವ್ ಹಾಡಿದ್ದಾರೆ. ಯೋಗಾಜ್ ಭಟ್ ಬರೆದಿದ್ದಾರೆ. ಚೇತನ್ ಸೋಸ್ಕಾ ಮ್ಯೂಸಿಕ್ ಮಾಡಿದ್ದಾರೆ.

ಭಟ್ರ ಶಿಷ್ಯ ಅಮೋಲ್ ಪಾಟೀಲ್ ಈ ಹಾಡನ್ನ ಡೈರೆಕ್ಷನ್ ಮಾಡಿದ್ದಾರೆ. ಇನ್ನುಳಿದಂತೆ ಈ ವಿಡಿಯೋ ಸಾಂಗ್ ಹೃದಯ ತಟ್ಟುತ್ತದೆ. ಜನರ ಪ್ರೀತಿಯನ್ನು ತನ್ನದೇ ರೀತಿಯಲ್ಲಿ ಗೆಲ್ಲುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed