WPL 2027 ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಆರ್​ಸಿಬಿ ರಣತಂತ್ರ: 13 ಪ್ಲೇಯರ್ಸ್​​ ರಿಟೇನ್, ನಾಲ್ವರು ರಿಲೀಸ್ | ಕ್ರೀಡಾ ಸುದ್ದಿ | ACTPnews

ಆರ್​ಸಿಬಿ (PTI Photo)


Last Updated:


ವೈಯಕ್ತಿಕ ಕಾರಣಗಳಿಂದಾಗಿ ಕಳೆದ 2026ರ ಟ್ರೋಫಿ ಗೆದ್ದ ಆವೃತ್ತಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲಿಸ್ ಪೆರ್ರಿ ಮುಂಬರುವ ಸೀಸನ್‌ಗೆ ತಂಡಕ್ಕೆ ಮರಳಿದ್ದಾರೆ.

 ಆರ್​ಸಿಬಿ (PTI Photo)
ಆರ್​ಸಿಬಿ (PTI Photo)

ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಐದನೇ ಆವೃತ್ತಿಯ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು 13 ಆಟಗಾರ್ತಿಯರ ರಿಟೇನ್ ಮಾಡಿಕೊಂಡಿದೆ. ಆದರೆ ಸ್ಫೋಟಕ ಆಟಗಾರ್ತಿ ಗ್ರೇಸ್​ ಹ್ಯಾರಿಸ್ ಸೇರಿ 4 ಪ್ಲೇಯರ್​ಗಳನ್ನ ರಿಲೀಸ್ ಮಾಡಿದೆ. 2026ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು, ತನ್ನ ಪ್ರಮುಖ ಕೋರ್ ಬಳಗವನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಾರಿಯ ನಿಯಮಾವಳಿಗಳ ಪ್ರಕಾರ ತಂಡವು 13 ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಂಡಿದೆ.

ಎಲಿಸ್ ಪೆರ್ರಿ ಕಮ್​ಬ್ಯಾಕ್

ವೈಯಕ್ತಿಕ ಕಾರಣಗಳಿಂದಾಗಿ ಕಳೆದ 2026ರ ಟ್ರೋಫಿ ಗೆದ್ದ ಆವೃತ್ತಿಯಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲಿಸ್ ಪೆರ್ರಿ ಮುಂಬರುವ ಸೀಸನ್‌ಗೆ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ. ಆಗಸ್ಟ್‌ನಲ್ಲೇ ಅವರು ತಂಡಕ್ಕೆ ಲಭ್ಯವಿರುವ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದು, ಫ್ರಾಂಚೈಸಿಯು ಅವರನ್ನು ಪ್ರಮುಖ ಆಟಗಾರ್ತಿಯಾಗಿ ರಿಟೇನ್ ಮಾಡಿಕೊಂಡಿದೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಮುಖ್ಯ ಕೋಚ್ ಮಾಲೋಲನ್ ರಂಗರಾಜನ್ ಅವರ ನೇತೃತ್ವದಲ್ಲಿ ಸುದೀರ್ಘ ಚರ್ಚೆ ನಡೆಸಿ ಈ ರಿಟೆಂಷನ್ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರ್ತಿಯರ ಸಂಪೂರ್ಣ ವಿವರ

ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ಸಯಾಲಿ ಸತ್ಗರೆ, ಎಲಿಸ್ ಪೆರ್ರಿ, ಜಾರ್ಜಿಯಾ ವೊಲ್, ಲಾರೆನ್ ಬೆಲ್, ನಡೀನ್ ಡಿ ಕ್ಲರ್ಕ್

ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ್ತಿಯರು

ಮುಂದಿನ ಹರಾಜಿನಲ್ಲಿ ಮತ್ತಷ್ಟು ಸಮತೋಲಿತ ತಂಡವನ್ನು ನಿರ್ಮಿಸುವ ತಂತ್ರದ ಭಾಗವಾಗಿ ಆರ್‌ಸಿಬಿ ಬಿಗ್ ಹಿಟ್ಟರ್ ಗ್ರೇಸ್ ಹ್ಯಾರಿಸ್ ಸೇರಿದಂತೆ ಇಬ್ಬರು ವಿದೇಶಿ ಹಾಗೂ ಇಬ್ಬರು ಭಾರತೀಯ ಆಟಗಾರ್ತಿಯರನ್ನು ರಿಲೀಸ್ ಮಾಡಿದೆ. ತಂಡದ ಎರಡನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಆಟಗಾರ್ತಿಯರ ಶ್ರಮ ಮತ್ತು ಬದ್ಧತೆಗೆ ಆರ್​ಸಿಬಿ ಧನ್ಯವಾದ ಅರ್ಪಿಸಿದೆ.

* ಗ್ರೇಸ್ ಹ್ಯಾರಿಸ್ (ಆಸ್ಟ್ರೇಲಿಯಾ)

* ಲಿನ್ಸೆ ಸ್ಮಿತ್ (ಇಂಗ್ಲೆಂಡ್)

* ಡಿ. ಹೇಮಲತಾ (ಭಾರತ)

* ಗೌತಮಿ ನಾಯ್ಕ್ (ಭಾರತ)

ಮಿನಿ ಹರಾಜಿಗೆ ಬಾಕಿ ಉಳಿದಿರುವ ಸ್ಲಾಟ್‌ಗಳು

ನಾಲ್ವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ ಆರ್‌ಸಿಬಿ ಮುಂದಿನ ಸೀಸನ್‌ಗಾಗಿ ತನ್ನ ತಂಡದಲ್ಲಿ ನಾಲ್ಕು ಸ್ಥಾನಗಳನ್ನು (ಖಾಲಿ ಸ್ಲಾಟ್) ಬಾಕಿ ಉಳಿಸಿಕೊಂಡಿದೆ. ಮುಂಬರುವ ಮಿನಿ ಹರಾಜಿನಲ್ಲಿ ಕೇವಲ ₹1.45 ಕೋಟಿ ರೂಪಾಯಿ ಪರ್ಸ್ ಬ್ಯಾಲೆನ್ಸ್ ಹೊಂದಿರುವ ಬೆಂಗಳೂರು ತಂಡವು ಲಭ್ಯವಿರುವ ಬಜೆಟ್‌ ಒಳಗೆ ಅತ್ಯುತ್ತಮ ದೇಶಿ ಅಥವಾ ವಿದೇಶಿ ಪ್ರತಿಭೆಗಳನ್ನು ಹುಡುಕುವ ಸವಾಲನ್ನು ಎದುರಿಸಲಿದೆ. ಮುಂಬರುವ ಡಬ್ಲ್ಯುಪಿಎಲ್ ಸೀಸನ್ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ ಎಂದು ಮಂಡಳಿ ಪ್ರಕಟಿಸಿದೆ.

ಗ್ರೇಸ್ ಹ್ಯಾರಿಸ್ ಕೈಬಿಟ್ಟಿದ್ದೇಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಸ್ಟ್ರೇಲಿಕಾದ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಅವರನ್ನು ಕೈಬಿಟ್ಟಿರುವುದು ಶಾಕಿಂಗ್ ನಿರ್ಧಾರವಾಗಿದೆ. ಹ್ಯಾರಿಸ್ ಅವರನ್ನು ರಿಲೀಸ್ ಮಾಡಲು ಪ್ರಮುಖ ಕಾರಣ ಎಲಿಸ್ ಪೆರ್ರಿ ಅವರ ವಾಪಸಾತಿ ಮತ್ತು ವಿದೇಶಿ ಆಟಗಾರ್ತಿಯರ ಕೋಟಾದ ಸಮತೋಲನ ಎಂದು ತಿಳಿದುಬಂದಿದೆ. ಪೆರ್ರಿ, ಲಾರೆನ್ ಬೆಲ್ ಹಾಗೂ ಜಾರ್ಜಿಯಾ ವೋಲ್ ಮೂವರು ತಂಡದಲ್ಲಿ ಖಾಯಂ ಆಗಿ ಆಡಲಿದ್ದಾರೆ.  ನಡೀನ್ ಡಿ ಕ್ಲರ್ಕ್ ಕಳೆದ ವರ್ಷ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರಿಂದ ತಂಡದಲ್ಲಿ ಗ್ರೇಸ್​ ಹ್ಯಾರಿಸ್​ಗೆ ಅವಕಾಸ ಸಿಗುವ ಸಾಧ್ಯರೆ ಕಡಿಮೆ. ಹಾಗಾಗಿ ಆರ್​ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed