Last Updated:
ಚಿನ್ನಾಭರಣ ಮತ್ತು ಕಾರುಗಳ ಡೀಲಿಂಗ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ ಎಂದು ಈ ಹಿಂದೆ ದೂರು ನೀಡಿದ್ದ ನಿರ್ಮಾಪಕರಿಗೆ, ಇದೀಗ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸ್ಯಾಂಡಲ್ವುಡ್ ನಿರ್ಮಾಪಕ (Sandalwood Producer) ಪ್ರಶಾಂತ್ ಕೊಡಗೆದಾರ್ (Prashant Kodagedar) ನೀಡಿರುವ ದೂರಿನ ಆಧಾರದಲ್ಲಿ ಇದೀಗ ಚೀಟಿಂಗ್ ಗ್ಯಾಂಗ್ ವಿರುದ್ಧದ ಆರೋಪಗಳು ಮುನ್ನೆಲೆಗೆ ಬಂದಿವೆ. ಚಿನ್ನಾಭರಣ ಮತ್ತು ಕಾರುಗಳ ಡೀಲಿಂಗ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ ಎಂದು ಈ ಹಿಂದೆ ದೂರು ನೀಡಿದ್ದ ನಿರ್ಮಾಪಕರಿಗೆ, ಇದೀಗ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಹಾಗೂ ವಿವಿಧ ರೀತಿಯಲ್ಲಿ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಶಾಂತ್ ಆರೋಪಿಸಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.














