Last Updated:
ಸ್ಯಾಂಡಲ್ವುಡ್ ಅಲ್ಲಿ ಕಳೆದ ವರ್ಷ ಜುಲೈ ತಿಂಗಳು ಲಕ್ಕಿ ಆಗಿತ್ತು. ಸು ಫ್ರಮ್ ಸೋ ಬಂದು ಹೊಸ ಉತ್ಸಾಹ ತುಂಬಿತ್ತು. ಈ ಲಕ್ಕಿ ಡೇನೇ ಕನ್ನಡದ ಕರಾವಳಿ ಚಿತ್ರ ಬರ್ತಿದೆ. ಇದರೊಟ್ಟಿಗೆ ಇನ್ನೂ ಒಂದು ಚಿತ್ರವೂ ಇದೆ. ಅದ್ಯಾವುದು ಅನ್ನೋದು ಇಲ್ಲಿದೆ ಓದಿ.
ಕನ್ನಡ ಚಿತ್ರರಂಗಕ್ಕೆ (Kannada Film Industry) ಜುಲೈ ತಿಂಗಳು ಕಳೆದ ವರ್ಷ ಲಕ್ಕಿ ಆಗಿತ್ತು. ಸಣ್ಣ ಬಜೆಟ್ನ ಸು ಫ್ರಮ್ ಸೋ (Su from So) ದೊಡ್ಡ ದಾಖಲೆ ಮಾಡಿತು. ಅಷ್ಟೆ ಅಲ್ಲ, ಕನ್ನಡ ಸಿನಿಮಾರಂಗಕ್ಕೆ ಇದು ಹೊಸ ಬೆಳಕು ನೀಡಿತ್ತು. ಇದರ ಗೆಲುವು ಕಂಡು ನಿರ್ಮಾಪಕರಿಗೂ ಹೊಸ ಉತ್ಸಾಹ ಬಂದಿತ್ತು. ನಿರ್ದೇಶಕರಿಗೂ ಬೇರೆ ಬೇರೆ ಪ್ಲಾನ್ ಮಾಡೋಕೆ ಸ್ಪೂರ್ತಿ ಆಗಿತ್ತು. ಸು ಫ್ರಮ್ ಸೋ ಅಷ್ಟೊಂದು ದೊಡ್ಡ ಸಕ್ಸಸ್ ಕಂಡಿತ್ತು. ಸುಮಾರು 5 ರಿಂದ 6 ಕೋಟಿ ಬಜೆಟ್ ಅಲ್ಲಿಯೇ ಈ ಚಿತ್ರ ತಯಾರಾಗಿತ್ತು. ಆದರೆ, ಬಾಕ್ಸ್ ಆಫೀಸ್ (Box Office) ಅಲ್ಲಿ ಇದು ದೊಡ್ಡ ದಾಖಲೆ ಮಾಡ್ತು. ಹಾಗಾಗಿಯೇ ಜುಲೈ-25 ಲಕ್ಕಿ ಡೇ ಅನ್ನುವ ನಂಬಿಕೆ ಇದೆ. ಈ ನಂಬಿಕೆ ಮೇಲೆ ಒಂದು ಚಿತ್ರ ಬರ್ತಿದೆ. ಇದರ ಹೆಸರು ಕರಾವಳಿ (Karavali) ಅನ್ನೋದು ಗೊತ್ತೇ ಇದೆ. ಇದರ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಕರಾವಳಿಗೆ ಲಕ್ಕಿ ಆಗುತ್ತಾ
(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್ಸ್ಟಾಗ್ರಾಮ್)
ಇಂತಹ ಚಿತ್ರ ಒಂದು ಇದೆ ಅನ್ನೊದು ಗೊತ್ತಿರಲಿಲ್ಲ. ಸು ಫ್ರಮ್ ಸೋ ಅಂತ ನೆನಪು ಕೂಡ ಉಳಿತಿರಲಿಲ್ಲ. ಆ ರೀತಿನೇ ಈ ಚಿತ್ರದ ಟೈಟಲ್ ಇತ್ತು. ಚಿತ್ರ ತಂಡ ಒಂದೇ ಒಂದು ಪ್ರೆಸ್ ಮೀಟ್ ಮಾಡ್ತು. ಅಷ್ಟೆ ನೋಡಿ, ಆ ಮೇಲೆ ಒಂದು ಪೇಡ್ ಪ್ರೀಮಿಯರ್ ಮಾಡಿದರು. ಗೆಲುವಿನ ಸೂಚನೆ ಆಗಲೇ ಸಿಕ್ಕಿತ್ತು.
ಸು ಫ್ರಮ್ ಸೋ ಕೇವಲ ಐದಾರು ಕೋಟಿ ಬಜೆಟ್ ಅಲ್ಲಿ ತಯಾರಾದ ಚಿತ್ರವಾಗಿದೆ. ಆದರೆ, ಇದರ ಗೆಲುವು ನಿಜಕ್ಕೂ ಆಶ್ಚರ್ಯ ಮೂಡಿಸಿತ್ತು. ಮೌತ್ ಪಬ್ಲಿಸಿಟಿ ಅಂತೂ ಜಾಸ್ತಿನೇ ಆಯಿತು.
ಇದರಿಂದ ಗೆಲುವಿಗೆ ಹೆಚ್ಚು ಅನುಕೂಲ ಆಯಿತು. ಅತಿ ವೇಗದಲ್ಲಿಯೇ ಇದು ಕೋಟಿ ಕೋಟಿ ಕಲೆಕ್ಷನ್ ಮಾಡ್ತು. ಕೊನೆಗೆ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ 125 ಕೋಟಿ ಕಲೆಕ್ಷನ್ ಮಾಡ್ತು. ಅಂತಹ ಈ ಚಿತ್ರ ಬಂದ ದಿನವೇ ಕರಾವಳಿ ಚಿತ್ರ ರಿಲೀಸ್ ಆಗುತ್ತಿದೆ.
ಕಳೆದ ವರ್ಷ ಜುಲೈ-25 ಶುಕ್ರವಾರ ಬಂದಿತ್ತು. ಈ ವರ್ಷ ಶುಕ್ರವಾರ ಜುಲೈ-24 ಆಗುತ್ತದೆ. ಹಾಗಾಗಿಯೇ ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ.
ಮದರ್ ಪ್ರಾಮಿಸ್ ಸಿನಿಮಾ
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್ಸ್ಟಾಗ್ರಾಮ್)
ಈ ಚಿತ್ರದ ಪ್ರಮೋಷನ್ ಹಾಗೇ ಆಗುತ್ತಿದೆ. ಇದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಅಂದು ಜುಲೈ-25 ರಂದು ಸು ಫ್ರಮ್ ಸೋ ಬಂದಿತ್ತು. ಈ ಸಲ ನಮ್ಮ ಕರಾವಳಿ ಚಿತ್ರ ಬರ್ತಿದೆ ಅಂತಲೇ ಸಿನಿಮಾ ತಂಡ ಹೇಳಿಕೊಳ್ಳುತ್ತಿದೆ. ತಮ್ಮ ಚಿತ್ರದಲ್ಲಿ ವಿಷಯ ಇದೆ ಅನ್ನೋದನ್ನು ಈ ರೀತಿ ಹೇಳಿಕೊಂಡಿದೆ.
ಜುಲೈ-10 ರಂದು ಮದರ್ ಪ್ರಾಮಿಸ್ ಚಿತ್ರ ಬರ್ತಿದೆ. ಈ ಒಂದು ಚಿತ್ರದ ಬಗ್ಗೆನೂ ನೀರಿಕ್ಷೆ ಇದೆ. ಪ್ರಚಾರವೂ ಜೋರಾಗಿದೆ. ಡಾಲಿ ಧನಂಜಯ್ ಈ ಚಿತ್ರ ನಾಯಕರಾಗಿದ್ದಾರೆ.
ಡಾಲಿ ಗೆಳೆಯ ಪೂರ್ಣ ಮೈಸೂರು ಈ ಚಿತ್ರ ಡೈರೆಕ್ಷನ್ ಮಾಡಿದ್ದಾರೆ. ಇದರಲ್ಲಿ ಹಾಸ್ಯದ ಕಿಕ್ ಇದೆ. ಮದರ್ ಸೆಂಟಿಮೆಂಟ್ಸ್ ಕೂಡ ಇದೆ. ಈ ಎಲ್ಲವು ಇರೋ ಈ ಚಿತ್ರದ ಹೊಸ ಭರವಸೆ ಮೂಡಿಸಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













