IND vs ENG: ಭಾರತದ ಕೈಯಿಂದ ಗೆಲುವು ಕಸಿದುಕೊಂಡ ಬೆಥೆಲ್! 2ನೇ ಟಿ20ಯಲ್ಲಿ ಇಂಗ್ಲೆಂಡ್​​ಗೆ 4 ವಿಕೆಟ್​​ಗಳ ಭರ್ಜರಿ ಜಯ | ಕ್ರೀಡಾ ಸುದ್ದಿ | ACTPnews

ಭಾರತಕ್ಕೆ ಸೋಲುಣಿಸಿದ ಜೇಕಬ್ ಬೆಥೆಲ್


Last Updated:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​​ಗಳಿಸಿತ್ತು. ನಂತರ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಭಾರತಕ್ಕೆ ಸೋಲುಣಿಸಿದ ಜೇಕಬ್ ಬೆಥೆಲ್
ಭಾರತಕ್ಕೆ ಸೋಲುಣಿಸಿದ ಜೇಕಬ್ ಬೆಥೆಲ್

22 ವರ್ಷದ ಯುವ ಆಟಗಾರ ಜೇಕಬ್ ಬೆಥೆಲ್ ಸಿಡಿಸಿದ ಅಜೇಯ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್​​ಗಳಿಸಿತ್ತು. ನಂತರ ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

191 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕರಾದ ಫಿಲ್​ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಅರ್ಷದೀಪ್ ಎಸೆದ ಮೊದಲ ಓವರ್​ನಲ್ಲಿಯೇ ಡಕ್ ಔಟ್ ಆದರು. ಇಂಗ್ಲೆಂಡ್ ಖಾತೆ ತೆರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ನಾಯಕ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆಥೆಲ್ ಕೇವಲ 24 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್​​ಗೆ ಕಮ್​ಬ್ಯಾಕ್ ನೀಡಿದರು.

ಹ್ಯಾರಿ ಬ್ರೂಕ್ 15 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 39 ರನ್​ಗಳಿಸಿ 5ನೇ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಟಾಮ್ ಬ್ಯಾಂಟನ್ 4ನೇ ಜೊತೆಯಾಟದಲ್ಲಿ ಬೆಥೆಲ್​​ ಜೊತೆಗೂಡಿ 67 ರನ್​ಗಳ ಮಹತ್ವದ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ತಮ್ಮ ಸೆಕೆಂಡ್ ಸ್ಪೆಲ್ ಮಾಡಲು ಬಂದ ಅರ್ಷದೀಪ್ 32 ಎಸೆತಗಳಲ್ಲಿ 39 ರನ್​ಗಳಿಸಿದ್ದ ಬ್ಯಾಂಟನ್​ ವಿಕೆಟ್ ಪಡೆದು ಪಂದ್ಯವನ್ನ ಭಾರತದ ಕಡೆಗೆ ವಾಲಿಸಿದರು.

ಇಂಗ್ಲೆಂಡ್ 15.2 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್​ಗಳಿಸಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್​ಗೆ 28 ಎಸೆತಗಳಲ್ಲಿ 59 ರನ್​ಗಳ ಅಗತ್ಯವಿತ್ತು. 16ನೇ ಓವರ್​​ ಅಂತ್ಯವಾದಾಗ 4 ಓವರ್​ಗಳಲ್ಲಿ 49 ರನ್​ಗಳ ಅಗತ್ಯವಿತ್ತು. ಆದರೆ 17ನೇ ಓವರ್​​​​ ಎಸೆಯಲು ಬಂದ ರವಿ ಬಿಷ್ಣೋಯ್​ ಭಾರತಕ್ಕೆ ವಿಲನ್ ಆದರು. ಆ ಓವರ್​​ನಲ್ಲಿ 2 ನೋ ಬಾಲ್ ಎಸೆದರು. ಪರಿಣಾಮ ಫ್ರಿ ಹಿಟ್​​​ನಲ್ಲಿ ಬೆಥೆಲ್ 2 ಸಿಕ್ಸರ್ ಸಿಡಿಸಿದರು. ಒಟ್ಟಾರೆ ಆ ಓವರ್​​ನಲ್ಲಿ 3 ಸಿಕ್ಸರ್, 1 ಬೌಂಡರಿ, 2 ಟೂಡಿ ಸೇರಿ ಬರೋಬ್ಬರಿ 29 ರನ್​ ಬಿಟ್ಟುಕೊಟ್ಟರು. 4 ಓವರ್​ಗಳಲ್ಲಿ 49 ರನ್​ಗಳ ಅಗತ್ಯವಿತ್ತು ಇಂಗ್ಲೆಂಡ್​ಗೆ ಕೊನೆಯ 3 ಓವರ್​ಗಳಲ್ಲಿ ಕೇವಲ 20 ರನ್​ಗಳು ಮಾತ್ರ ಉಳಿದುಕೊಂಡಿತು.

ಆದರೆ ಇಂಗ್ಲೆಂಡ್ 19 ಓವರ್​​ನಲ್ಲೇ ಚೇಸಿಂಗ್ ಮುಗಿಸಿತು. ತಂಡದ ಮೊತ್ತ ಕೇವಲ 1ಕ್ಕೆ2 ಇದ್ದಾಗ ಮೊದಲ ಓವರ್​​ನಲ್ಲಿ ಕ್ರೀಸ್​ಗೆ ಬಂದ ಬೆಥೆಲ್ ಆಕರ್ಷಕ ಬ್ಯಾಟಿಂಗ್ ಮಾಡಿ ಪಂದ್ಯವನ್ನ ಭಾರತದ ಕೈಯಿಂದ ಕಸಿದುಕೊಂಡರು. 46 ಎಸೆತಗಳನ್ನಾಡಿದ ಬೆಥೆಲ್ ತಲಾ 5 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 76 ರನ್​ಗಳಿಸಿ ಗೆಲುವಿನ ರೂವಾರಿಯಾದರು. ವಿಲ್ ಜಾಕ್ಸ್​ 9, ಸ್ಯಾಮ್ ಕರ್ರನ್ 7 ಹಾಗೂ ಜೋಫ್ರಾ ಆರ್ಚರ್ ಅಜೇಯ 10 ರನ್​ಗಳಿಸಿದರು.

ಭಾರತದ ಪರ ಅರ್ಷದೀಪ್ ಸಿಂಗ್ 40ಕ್ಕೆ3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 20ಕ್ಕೆ1, ವರುಣ್ ಚಕ್ರವರ್ತಿ 37ಕ್ಕೆ1, ಹರ್ಷಿತ್ ರಾಣಾ 30ಕ್ಕೆ1 ವಿಕೆಟ್ ಪಡೆದರು. ರವಿ ಬಿಷ್ಣೋಯ್ 4 ಓವರ್​ಗಳಲ್ಲಿ 60 ರನ್​ ಬಿಟ್ಟುಕೊಟ್ಟು ದುಬಾರಿಯಾದರಲ್ಲದೆ, ಸೋಲಿಗೂ ಕಾರಣರಾದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports