Salman Khan: ನಟ ಸಲ್ಮಾನ್ ಖಾನ್ ಮನೆಗೆ ಇದ್ದಕಿದ್ದ ಹಾಗೆ ವಿಶೇಷ ಅತಿಥಿ ಆಗಮನ! ಗಾಬರಿಯಾದ ಅಭಿಮಾನಿಗಳು! | | ACTPnews

ಸಲ್ಮಾನ್ ಖಾನ್


Last Updated:

Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ( ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ಸುದ್ದಿ ಕೇಳಿ ನಿವಾಸಿಗಳಲ್ಲಿ ಸ್ವಲ್ಪ ಸಮಯದವರೆಗೆ ಭಯಭೀತರಾಗಿದ್ದು,ಬಳಿಕ ಆ ಹಾವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ಸುದ್ದಿ ಕೇಳಿ ನಿವಾಸಿಗಳಲ್ಲಿ ಸ್ವಲ್ಪ ಸಮಯದವರೆಗೆ ಭಯಭೀತರಾಗಿದ್ದು,ಬಳಿಕ ಆ ಹಾವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಪಾರ್ಟ್‌ಮೆಂಟ್‌ನ ಬಳಿ ಹಾವು (Snake) ಕಾಣಿಸಿಕೊಂಡ ಕೂಡಲೇ ಅಲ್ಲಿದ್ದ ಜನ ಭದ್ರತಾ ಸಿಬ್ಬಂದಿಯು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಹಾವು ಹಿಡಿಯುವ ತಜ್ಞರು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದ್ದ ಘಟನೆಯಿಂದಾಗಿ , ಈ ಬಾರಿ ಕೂಡಾ ಜನ ಸ್ವಲ್ಪ ಭಯಭೀತರಾಗಿದ್ದರು. ಬಾಂದ್ರಾ ಪ್ರದೇಶದ ನಿವಾಸಿಗಳಿಗೆ ಸಂಜೆಯ ವೇಳೆಯಲ್ಲಿ ಏಕಾಏಕಿ ಅಪಾರ್ಟ್‌ಮೆಂಟ್ ನೆಲ ಮಹಡಿಯಲ್ಲಿ ಹಾವು ಕಾಣಿಸಿಕೊಂಡಿರುವ ಮಾಹಿತಿ ದೊರೆಯಿತು.

ಹಾವು ಕಂಡ ಕ್ಷಣದಲ್ಲಿ ಕೆಲವು ನಿವಾಸಿಗಳು ಆತಂಕಗೊಂಡು ಭದ್ರತಾ ಸಿಬ್ಬಂದಿಗೆ ತಿಳಿಸಿದರು. ಮಳೆಗಾಲದ ಆರಂಭದ ಸಮಯದಲ್ಲಿ ಹಾವುಗಳು ಮನುಷ್ಯ ವಾಸಿಸುವ ಪ್ರದೇಶಗಳಿಗೆ ಪ್ರವೇಶಿಸುವ ಸಂಭವ ಹೆಚ್ಚಾಗಿರುವುದರಿಂದ, ಈ ಘಟನೆ ಕೂಡ ಅದೇ ಕಾರಣಕ್ಕೆ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Actress: ನಟ ಪ್ರಭಾಸ್ ಜೊತೆಗೆ ಫ್ಲಾಪ್ ಸಿನಿಮಾ ಮಾಡಿದ್ದ ಈ ನಟಿ ಈಗ ಸಾವಿರ ಕೋಟಿ ಒಡತಿ! ಯಾರು ಈ ಚೆಲುವೆ ಗೊತ್ತಾ?

ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮನೋಜ್ ಕಟ್ಟೆ ಅವರು ಕಾರು ಪಾರ್ಕಿಂಗ್ ಪ್ರದೇಶದ ಶಟರ್ ಬಳಿ ಹಾವು ಇರುವುದು ಗಮನಿಸಿದ ತಕ್ಷಣ, ‘ಸ್ನೇಕ್ ದೋಸ್ತ್’ ಎಂದು ಪರಿಚಿತರಾಗಿರುವ ಹಾವು ರಕ್ಷಣಾ ತಜ್ಞ ವಿಕಿ ದುಬೆ ಅವರಿಗೆ ಮಾಹಿತಿ ನೀಡಿದರು. ದುಬೆ ಸ್ಥಳಕ್ಕೆ ತಲುಪಿದ ನಂತರ, ತುಂಬಾ ಎಚ್ಚರಿಕೆಯಿಂದ ಹಾವನ್ನು ಹಿಡಿಯುವ ಪ್ರಕ್ರಿಯೆಯನ್ನು ಕೈಗೊಂಡರು. ಹಾವು ಸುಮಾರು 5 ಅಡಿ ಉದ್ದವಾಗಿದ್ದು, ಅದು ವಿಷಕಾರಿಯಲ್ಲವೆಂಬುದು ದೃಢಪಟ್ಟ ನಂತರ ನಿವಾಸಿಗಳು ನಿಟ್ಟುಸಿರೆಳೆದರು.ಇನ್ನು ಘಟನೆಯ ನಂತರ ನಗರ ಪ್ರದೇಶಗಳಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುವುದರಿಂದ, ಸರಿಯಾದ ದಾಖಲಾತಿ ಮತ್ತು ಮುಂದಿನ ಕ್ರಮಗಳು ಅತ್ಯಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಹಾವು ಸೆರೆಹಿಡಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಮೊದಲು ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದ ಘಟನೆಯನ್ನು ಫ್ಯಾನ್ಸ್ ಈಗ ಮತ್ತೆ ನೆನಪಿಸಿಕೊಂಡಿದ್ದಾರೆ.ಈ ಹಿಂದೆ 2021ರಲ್ಲಿ ಪನ್ವೇಲ್‌ ಫಾರ್ಮ್‌ ಹೌಸ್‌ನಲ್ಲಿದ್ದಾಗ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿತ್ತು. ಆ ಸಮಯದಲ್ಲಿ ಅವರಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಮತ್ತೆ ಸಲ್ಮಾನ್ ಮನೆ ಬಳಿ ಹಾವು ಪತ್ತೆಯಾಗಿದ್ದರಿಂದ ಅಭಿಮಾನಿಗಳು ಗಾಬರಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed