Last Updated:
Salman Khan: ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ ಈ ಪೋಸ್ಟ್ ಬಗ್ಗೆ ಈಗ ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ ಈ ಪೋಸ್ಟ್ ಬಗ್ಗೆ ಈಗ ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನಕ್ಕೆ ಇದಕ್ಕೇನೂ ಸಂಬಂಧವಿಲ್ಲ ಎಂದು ಹೇಳಿ, ಹಬ್ಬಿರುವ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಸಲ್ಮಾನ್ ಖಾನ್ ಹೇಳುವ ಪ್ರಕಾರ, ತಮ್ಮ ಪೋಸ್ಟ್‌ನ್ನು ಅನಗತ್ಯವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾದ್ರೆ ಸಲ್ಲು ಹೇಳಿದ್ದೇನು ಅಂದ್ರೆ ಅರೆ ಯಾರ್, ನಾನು ನನ್ನ ಬಗ್ಗೆ ಮಾತನಾಡಿದ್ದಲ್ಲ. ನನಗೆ ಇಷ್ಟೊಂದು ದೊಡ್ಡ ಕುಟುಂಬ ಮತ್ತು ಸ್ನೇಹಿತರು ಇದ್ದಾಗ ನಾನು ಹೇಗೆ ಒಂಟಿಯಾಗಿರಲು ಸಾಧ್ಯ? ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ನನ್ನೊಂದಿಗೆ ಇರುವಾಗ ಒಂಟಿತನವೇನು? ಕೆಲವೊಮ್ಮೆ ಜನರ ನಡುವೆಯೇ ಇರುವುದಕ್ಕೆ ಬೋರ್ ಆಗುತ್ತದೆ.
ಈ ಬಾರಿ ಪೋಸ್ಟ್ ಬೆಳಗಾಗೋದ್ರಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟಿತು. ಅಮ್ಮ “ಕ್ಯಾ ಹುವಾ ಬೇಟಾ?” ಅಂತೆ ಕೇಳಿದ್ದು ಚಮತ್ಕಾರವಾಗಿಬಿಟ್ಟಿತು. ಚಿಲ್ ಮಾರೋ ಯಾರ್ ಎಂದು ಸಲ್ಮಾನ್ ಖಾನ್ ಪೋಸ್ಟ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಹೇಳಿಕೆಗಳ ಮೂಲಕ, ತಮ್ಮ ಪೋಸ್ಟ್ ಭಾವನಾತ್ಮಕ ಅಥವಾ ವೈಯಕ್ತಿಕ ಸಮಸ್ಯೆಯನ್ನು ಸೂಚಿಸುವುದಿಲ್ಲ ಎಂದು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ
ಸಲ್ಮಾನ್ ಖಾನ್ ಇತ್ತೀಚೆಗೆ ಹಂಚಿಕೊಂಡಿದ್ದ ಪೋಸ್ಟ್ ನಲ್ಲಿ ಅವರು ಈ ರೀತಿಯ ಬರೆದುಕೊಂಡಿದ್ದರು, By I me myself. You have two ways of being yourself. Alone and Lonely. Alone, by choice. Loneliness happens when no one wants to be with you. Figure out what you want. (‘ಬೈ ಐ ಮಿ ಮೈಸೆಲ್ಫ್. ನೀವು ನಿಮ್ಮಂತಿರಲು ಎರಡು ಮಾರ್ಗಗಳು. ಅಲೋನ್ ಮತ್ತು ಲೋನ್ಲಿ. ಅಲೋನ್, ಬೈ ಛಾಯ್ಸ್ನಿಂದ. ಲೋನ್ಲಿನೆಸ್, ಯಾರೂ ನಿಮ್ಮೊಂದಿಗೆ ಇರಲು ಬಯಸದಿದ್ದಾಗ ಆಗುತ್ತದೆ. ನೀವೀಗ ಏನು ಮಾಡಬೇಕೆಂಬುದನ್ನು ಫಿಗರ್ ಔಟ್ ಮಾಡಿ)
ಇನ್ನು ನಟ ಸಲ್ಮಾನ್ ಖಾನ್ ನಟಿಸಲಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ ಮಾತೃಭೂಮಿ. ನಿರ್ದೇಶಕ ಅಪೂರ್ವ ಲಖಿಯಾ ಮಾಡುತ್ತಿರುವ ಈ ವಾರ್ ಡ್ರಾಮಾ 2020ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ನಡೆದ ಘರ್ಷಣೆಯನ್ನಾಧರಿಸಿದೆ. ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್ ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಾಷ್ಟ್ರಭಕ್ತಿಯ ತೀವ್ರ ಭಾವನೆಯನ್ನು ಹೊಂದಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
Bangalore [Bangalore],Bangalore,Karnataka
















