Sad News: ಕಾಶ್ಮೀರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಓರ್ವ ಸಾವು, 5 ಬಿಎಸ್‌ಎಫ್ ಸಿಬ್ಬಂದಿ ಸೇರಿ 10 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಶ್ರೀನಗರದಿಂದ ಜಮ್ಮು ಕಡೆಗೆ ಪ್ರಯಾಣಿಸುತ್ತಿದ್ದ ಬಿಎಸ್‌ಎಫ್ ಬೆಂಗಾವಲಿನ ಭಾಗವಾಗಿದ್ದ ಟ್ರಕ್, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್ 44) ರಂಬನ್ ಜಿಲ್ಲೆಯ ಸೆರಿ ಬಳಿ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

News18
News18

ಜಮ್ಮು: ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಂಬನ್ ಮತ್ತು ದೋಡಾ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದು, ಐವರು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಮತ್ತು ಐದು ನಾಗರಿಕರು ಗಾಯಗೊಂಡಿದ್ದಾರೆ.

ಶ್ರೀನಗರದಿಂದ ಜಮ್ಮು ಕಡೆಗೆ ಪ್ರಯಾಣಿಸುತ್ತಿದ್ದ ಬಿಎಸ್‌ಎಫ್ ಬೆಂಗಾವಲಿನ ಭಾಗವಾಗಿದ್ದ ಟ್ರಕ್, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್ 44) ರಂಬನ್ ಜಿಲ್ಲೆಯ ಸೆರಿ ಬಳಿ ಪಲ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಬಿಎಸ್‌ಎಫ್ ಸಿಬ್ಬಂದಿಯನ್ನು ಜಮ್ಮುವಿನ ರಮೇಶ್ ಲಾಲ್ ಅವರ ಪುತ್ರ 35 ವರ್ಷದ ಕಾನ್‌ಸ್ಟೆಬಲ್ ಸುನಿಲ್ ಕುಮಾರ್, ಜಮ್ಮುವಿನ ಪಾರ್ತಮ್ ಚಂದ್ ಅವರ ಪುತ್ರ 36 ವರ್ಷದ ಕಾನ್‌ಸ್ಟೆಬಲ್ ಪುರುಷೋತ್ತಮ್ ಕುಮಾರ್, ಬಂಗಾಳದ ರವೀಂದರ್ ಯಾದವ್ ಅವರ ಪುತ್ರ 38 ವರ್ಷದ ಕಾನ್‌ಸ್ಟೆಬಲ್ ಚಂದನ್ ಯಾದವ್, ಕಾಶ್ಮೀರದ ಕರ್ನಾಹ್‌ನ ಅಬ್ದುಲ್ ಕಯೂಮ್ ಅವರ ಪುತ್ರ 38 ವರ್ಷದ ಚಾಲಕ ಶಮೀಮ್ ಅಹ್ಮದ್ ಮತ್ತು ಜಮ್ಮುವಿನ ಮೇಲಾ ರಾಮ್ ಅವರ ಪುತ್ರ ಸಬ್-ಇನ್‌ಸ್ಪೆಕ್ಟರ್ ಘರ್ ಸಿಂಗ್ ಎಂದು ಗುರುತಿಸಲಾಗಿದೆ.

ರಾಂಬನ್ ಜಿಲ್ಲಾ ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಮೊಹಮ್ಮದ್ ರಫಿ, ಎಲ್ಲಾ ಗಾಯಾಳು ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ. ಅಗತ್ಯವಿದ್ದರೆ, ಯಾವುದೇ ಗಾಯಾಳುಗಳನ್ನು ಉನ್ನತ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.

ಮೃತರನ್ನು ಕಲ್ಹೋಟಾ ಮರ್ಮತ್ ನಿವಾಸಿ ಗುಲ್ಜಾರ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಪವನ್ ಕುಮಾರ್, ಅಶ್ವಿನ್ ಸಿಂಗ್, ಬಲ್ಬೀರ್ ಸಿಂಗ್, ಕಲ್ಯಾಣ್ ಸಿಂಗ್ ಮತ್ತು ಪಿಂಕು ಕುಮಾರ್ ಸೇರಿದ್ದಾರೆ.

ಎರಡೂ ಘಟನೆಗಳಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಅಪಘಾತಗಳಿಗೆ ಕಾರಣವೇನೆಂದು ತಿಳಿಯಲು ತನಿಖೆ ಆರಂಭಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed