Last Updated:
ಹೆರಿಗೆಯ ನಂತರ ದೇಹದಲ್ಲಿ ಕಾಣಿಸಿಕೊಂಡಿರುವ ಸಹಜ ಬದಲಾವಣೆಗಳ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕತ್ರಿನಾ ಅವರನ್ನು ಟೀಕಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ನಟಿಯ ಬೆಂಬಲಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ನಿಂತಿರುವುದು ಗಮನ ಸೆಳೆದಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಇತ್ತೀಚೆಗೆ ಪತಿ ವಿಕ್ಕಿ ಕೌಶಲ್ (Vicky Kaushal) ಜೊತೆ ಖಾಸಗಿ ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ ಧರಿಸಿದ್ದ ಉಡುಪು ಹಾಗೂ ಹೆರಿಗೆಯ ನಂತರ ದೇಹದಲ್ಲಿ ಕಾಣಿಸಿಕೊಂಡಿರುವ ಸಹಜ ಬದಲಾವಣೆಗಳ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕತ್ರಿನಾ ಅವರನ್ನು ಟೀಕಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ನಟಿಯ ಬೆಂಬಲಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ನಿಂತಿರುವುದು ಗಮನ ಸೆಳೆದಿದೆ.
ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದ ಕತ್ರಿನಾ ಕೈಫ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ನಟಿಯ ದೇಹದ ತೂಕದ ಕುರಿತು ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಹೆರಿಗೆಯ ಬಳಿಕ ದೇಹದಲ್ಲಿ ಆಗುವ ಬದಲಾವಣೆಗಳನ್ನು ಮುಂದಿಟ್ಟುಕೊಂಡು ಕತ್ರಿನಾನ ಗುರಿಯಾಗಿಸಿ ಕೆಲವರು ಬಾಡಿ ಶೇಮಿಂಗ್ ಮಾಡಿದ್ದಾರೆ.
ಈ ವಿವಾದದ ನಡುವೆ ಕತ್ರಿನಾ ಕೈಫ್ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್‌ಗೆ ನಟ ಹೃತಿಕ್ ರೋಷನ್ ಲೈಕ್ ಮಾಡಿರುವುದು ಗಮನ ಸೆಳೆದಿದೆ. ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ಈ ಹಿಂದೆ ಬ್ಯಾಂಗ್ ಬ್ಯಾಂಗ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.
ಹರ್ಷವೀರ್ ಜೈನ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಕತ್ರಿನಾ ಕೈಫ್ ಅವರನ್ನು ಬೆಂಬಲಿಸಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ತಾನು ಕತ್ರಿನಾ ಅವರ ಅಭಿಮಾನಿಯಾಗಿದ್ದು, ಹೆರಿಗೆಯ ನಂತರ ದೇಹದ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಟಿಯನ್ನು ಟ್ರೋಲ್ ಮಾಡುತ್ತಿರುವವರ ನಡೆಯನ್ನು ಪ್ರಶ್ನಿಸಿದ್ದಾರೆ.
ಕತ್ರಿನಾ ವೃತ್ತಿಜೀವನ ಮತ್ತು ಸಾಧನೆಗಳಿಗೆ ಇಂತಹ ಸಾಮಾಜಿಕ ಜಾಲತಾಣದ ಕಾಮೆಂಟ್‌ಗಳು ಯಾವುದೇ ಧಕ್ಕೆ ತರಲು ಸಾಧ್ಯವಿಲ್ಲ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಆಗುವ ಬದಲಾವಣೆಗಳು ಸಹಜವಾಗಿದ್ದು, ಅದನ್ನು ಟೀಕಿಸುವ ಬದಲು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಈ ಪೋಸ್ಟ್ ಒಳಗೊಂಡಿದೆ.
ದೇಹದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಕಾಳಜಿ ವಹಿಸುವುದು ಸವಾಲಾಗಿತ್ತು ಎಂದು ಕತ್ರಿನಾ ತಮ್ಮ ಅನುಭವ ಹಂಚಿಕೊಂಡಿದ್ದರು. ದೇಹಕ್ಕೆ ವಿಶ್ರಾಂತಿ ಮತ್ತು ಆರೈಕೆ ನೀಡುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದರು.
ಕತ್ರಿನಾ ಕೈಫ್ ಇತ್ತೀಚಿನ ಚಿತ್ರಗಳ ಕುರಿತು ಆರಂಭವಾದ ಚರ್ಚೆ ಇದೀಗ ಬಾಡಿ ಶೇಮಿಂಗ್ ಮತ್ತು ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಆಗುವ ಬದಲಾವಣೆಗಳತ್ತ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ನಟಿಯ ಪರವಾಗಿ ನಿಂತಿದ್ದು, ಹೃತಿಕ್ ರೋಷನ್ ಅವರ ಪೋಸ್ಟ್ ಲೈಕ್ ಕೂಡ ಗಮನ ಸೆಳೆದಿದೆ.














