Last Updated:
ಶಾಂತಕುಮಾರನ್ ನಾಯರ್ ಅವರು ಎಲ್ಐಸಿಯ ನಿವೃತ್ತ ವಲಯ ವ್ಯವಸ್ಥಾಪಕರಾಗಿದ್ದರು. ಅವರು ಪತ್ನಿ ಟಿ.ಎನ್. ಸಾವಿತ್ರಿದೇವಿ ಮತ್ತು ನಾಲ್ವರು ಮಕ್ಕಳಾದ ದೀಪು, ನಿವೇದಿತಾ, ದಿವ್ಯ ಮತ್ತು ಶ್ರೀಶಾಂತ್ ಅವರನ್ನ ಅಗಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ (S Sreesanth) ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ಅವರ ತಂದೆ ವಿ. ಶಾಂತಕುಮಾರನ್ ನಾಯರ್ (V Santhakumaran Nair) 89 ನೇ ವಯಸ್ಸಿನಲ್ಲಿ ನಿಧನರಾದರು. ಶುಕ್ರವಾರ (ಸೆಪ್ಟೆಂಬರ್ 11) ರಾತ್ರಿ 10 ಗಂಟೆ ಸುಮಾರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಶ್ರೀಶಾಂತ್ ಅವರ ತಂದೆ ಕಳೆದ ಕೆಲವು ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಶುಕ್ರವಾರ ರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾನುವಾರ ಅವರ ಹುಟ್ಟೂರು ಕೋತಮಂಗಲಂಗೆ ಕೊಂಡೊಯ್ಯಲಾಗುವುದು, ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.














