S Janaki: ಮೈಸೂರಲ್ಲಿ ಜಾನಕಿ ಅವರಿಗಿದ್ದ ಒಬ್ಬನೇ ಒಬ್ಬ ಬಾಯ್​ಫ್ರೆಂಡ್, ಯಾರದು ಗೊತ್ತಾ? | s janaki speaks about boyfriend in mysore | | ACTPnews

ಎಸ್ ಜಾನಕಿ


Last Updated:

S Janaki: ಖ್ಯಾತ ಗಾಯಕಿ ಎಸ್ ಜಾನಕಿ ಅವರಿಗೆ ಮೈಸೂರಿನಲ್ಲಿ ಬಾಯ್​ಫ್ರೆಂಡ್ ಇದ್ದ ವಿಚಾರ ನಿಮಗೆ ಗೊತ್ತಾ? ಯಾರದು?

ಎಸ್ ಜಾನಕಿ
ಎಸ್ ಜಾನಕಿ

ಗಾನ ಕೋಗಿಲೆ ಹಾಡು ನಿಲ್ಲಿಸಿಯಾಗಿದೆ. ಭಾರತೀಯ ಸಂಗೀಯ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಬಹು ಭಾಷೆಗಳಲ್ಲಿ ಹಾಡಿ ಸಂಗೀತ ಪ್ರಿಯರ ಕಣ್ಮಣಿಯಾಗಿದ್ದ ಎಸ್ ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಈಗ ಅವರ ಹಳೆಯ ಸಂದರ್ಶನ ವಿಡಿಯೋಗಳು ವೈರಲ್ ಆಗುತ್ತಿವೆ. ಹಿಂದೊಮ್ಮೆ ಅವರು ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ್ದು ನಿಮಗೆ ಗೊತ್ತಾ?

ಹಿಂದೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಅಭಿಮಾನಿ ಬಗ್ಗೆ ಮಾತನಾಡಿದ್ದರು. ಅವರ ಅಭಿಮಾನಿ ಪ್ರಕಾಶ್ ತಮ್ಮ ಹಾಡಿನ ಕ್ಯಾಸೆಟ್ ಕಳುಹಿಸುತ್ತಿದ್ದರು. ನಾನೇ ಮರೆತ ಹಾಡು ನೆನಪಿಸುತ್ತಿದ್ದರು ಎಂದಿದ್ದಾರೆ. ಜಾನಕಿ ಅವರ ಮೈಸೂರಿನ ಅಭಿಮಾನಿ ಅವರಿಗೆ ಹಾಡಿನ ಕ್ಯಾಸೆಟ್ ಕಳಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು.

ನನ್ನ ಬಾಯ್​ಫ್ರೆಂಡ್

ನನಗೆ ಮೈಸೂರಿನಲ್ಲಿ ಒಬ್ಬ ಬಾಯ್​​​ಫ್ರೆಂಡ್ ಇದ್ದಾನೆ. ಕಿಶನ್ ಬಾ ಎಂದು ಜಾನಕಿ ಅವರು ಯುವಕನನ್ನು ಕರೆಯುತ್ತಾರೆ. ನನಗೆ ಕೃಷ್ಣ ಅಂದ್ರೆ ತುಂಬಾ ಇಷ್ಟ. ಅದಿಕ್ಕೆ ಕಿಶನ್ ಅನ್ನೋನು ನನಗೆ ಬಾಯ್​ಫ್ರೆಂಡ್ ಆಗಿ ಬಂದಿದ್ದಾನೆ ಎಂದಿದ್ದಾರೆ.

ನನ್ನ ಮಗ ಮುರಳಿ ಕೃಷ್ಣ. ಒಬ್ಬನೇ ಮಗ. ಬಾಯ್​ಫ್ರೆಂಡ್ ಕಿಶನ್. ಇವನೂ ಮೈಸೂರೇ. ಚೆನ್ನಾಗಿ ಹಾಡ್ತಾನೆ. ಎಷ್ಟೋ ಜನರು ನನಗೆ ಮೈಸೂರಿನಲ್ಲಿ ಪ್ರಿಯರಿದ್ದಾರೆ. ಕೃಷ್ಣ ಅಂದ್ರೆ ತುಂಬಾ ಪ್ರೀತಿ ಎಂದಿದ್ದಾರೆ.

ನಾನು ಗರ್ಭಿಣಿಯಾಗಿದ್ದಾಗ 9 ತಿಂಗಳಿದ್ದಾಗ, ತುಂಬಾ ಆಮಿಟ್ ಮಾಡ್ತಿದೆ. ಅವನು ಹುಟ್ಟುವ ಮೊದಲು ರಘುಪತಿ ರಾಘವ ಅನ್ನೋ ಹಾಡು ಹಾಡಿದ್ದೆ. ನೆಕ್ಸ್ಟ್ ಡೇ ನನಗೆ ಹೆರಿಗೆ ನೋವು ಶುರುವಾಯ್ತು. ನೆಕ್ಸ್ಟ್ ಡೇ ಅವನು ಹುಟ್ಟಿದ. ಗರ್ಭಿಣಿಯಾಗಿದ್ದಾಗ ಕೃಷ್ಣ ನೀನೇ ಹುಟ್ಟಬೇಕು ಎಂದುಕೊಳ್ಳುತ್ತಿದೆ. ಅದರಂತೆ ಗಂಡು ಮಗ ಹುಟ್ಟಿದ. ಅದಕ್ಕೆ ನಾನು ಮುರಳಿ ಕೃಷ್ಣ ಅಂತ ಹೆಸರಿಟ್ಟೆ. ಆ ಕೃಷ್ಣ ಅವನೇ ಹುಟ್ಟಿದ ಅನ್ನೋ ಭಾವನೆ ಎಂದಿದ್ದಾರೆ.

ನಮ್ಮವರಿಲ್ಲಂದ್ರೆ ಇಷ್ಟು ದೂರ ಬರೋಕೆ ಸಾಧ್ಯವಿರಲಿಲ್ಲ. ಎಲ್ಲ ಅವರೇ ಮಾಡುತ್ತಿದ್ದರು ಎಂದು ಪತಿಯನ್ನೂ ನೆನಪಿಸಿಕೊಂಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed