S Janaki: ಹಾಡು ನಿಲ್ಲಿಸಿದ ‘ಗಾನಕೋಗಿಲೆ’! ಮೊಮ್ಮಗಳಿಂದ ಅಗ್ನಿಸ್ಪರ್ಶ, ಅಭಿಮಾನಿಗಳಿಂದ ಅಂತಿಮ ನಮನ! ಜಾನಕಮ್ಮ ಯುಗಾಂತ್ಯ | | ACTPnews

ಜಾನಕಮ್ಮ ಯುಗಾಂತ್ಯ


Last Updated:

ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಗಾನಕೋಗಿಲೆ ಎಸ್‌ ಜಾನಕಿ ಬದುಕಿನ ಪಯಣ ಮುಗಿಸಿದ್ದಾರೆ. ಮೆಲೋಡಿ ಕ್ವೀನ್‌ ಜಾನಕಿ ಅವರ ನಿಧನ ಭಾರತ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಜಾನಕಮ್ಮ ಯುಗಾಂತ್ಯ
ಜಾನಕಮ್ಮ ಯುಗಾಂತ್ಯ

ಮೈಸೂರು: ಮಂತ್ರ ಮುಗ್ಧಗೊಳಿಸುವ ಧ್ವನಿ.. ಸ್ವರ ಸರಸ್ವತಿ.. ಚಿತ್ರರಂಗದಲ್ಲಿ ಸುಮಾರು 65 ವರ್ಷಗಳ ಸಂಗೀತ ಪಯಣ. ಹಿಂದೆ ಯಾರೂ ಮಾಡಿರದ, ಮುಂದೆ ನೋಡಲು ಅಸಾಧ್ಯವಾದ ಕಂಠಸಿರಿಯ ಯುಗಾಂತ್ಯ ಆಗಿದೆ. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಗಾನಕೋಗಿಲೆ ಎಸ್‌ ಜಾನಕಿ ಬದುಕಿನ ಪಯಣ ಮುಗಿಸಿದ್ದಾರೆ. ಮೆಲೋಡಿ ಕ್ವೀನ್‌ ಜಾನಕಿ ಅವರ ನಿಧನ ಭಾರತ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಎಸ್​ ಜಾನಕಿ ಅವರು ತಮ್ಮ 92ನೇ ವಯಸ್ಸಿನಲ್ಲಿ ಜುಲೈ 11ರಂದು ಸಂಜೆ ಮೈಸೂರಿನಲ್ಲಿ ನಿಧನರಾದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎಸ್​ ಜಾನಕಿ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರಿನ ಮಹಾರಾಜ ಗ್ರೌಂಡ್‌ನಿಂದ ಹೆಚ್‌ಡಿ ಕೋಟೆಗೆ ಮೃತದೇಹವನ್ನ ಸ್ಥಳಾಂತರಿಸಲಾಯ್ತು. ನಾಲ್ಕು ವರ್ಷದ ಹಿಂದೆ ಖರೀದಿಸಿದ್ದ ಕಣಿಯನಹುಂಡಿ ತೋಟದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು. ಇದೇ ಜಾಗದಲ್ಲೇ ತಮ್ಮ ಅಂತ್ಯಕ್ರಿಯೆ ನೆರವೇರಿಸ್ಬೇಕು ಅಂತಾನೂ ತಮ್ಮ ಕೊನೇ ಆಸೆಯನ್ನ ಹೇಳ್ಕೊಂಡಿದ್ದರಂತೆ. ಹೀಗಾಗಿ ಕಣಿಯನಹುಂಡಿ ಜಮೀನಿನಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಮೊಮ್ಮಗಳು

ಕಣಿಯನಹುಂಡಿ ಬಳಿಯ ಫಾರ್ಮ್ ಹೌಸ್​ನಲ್ಲಿ ಎಸ್​ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತಿಮ ವಿಧಿ ವಿಧಾನ ನೆರವೇರಿಸಿದ್ರು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೊಮ್ಮಗಳು ಅಪ್ಸರಾ ಎಸ್​​ ಜಾನಕಿ ಅವರ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿ ವಿದಾಯ ಹೇಳಿದರು. ಇನ್ನೂ, ಅಂತ್ಯಸಂಸ್ಕಾರದ ವೇಳೆ ಎಸ್​​ ಜಾನಕಿ ಅವರ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ರಾಜಕೀಯ ಗಣ್ಯರು, ಚಲಚಿತ್ರರಂಗದವರು ಸೇರಿದಂತೆ ನೂರಾರೂ ಜನರು ಅಂತಿಮ ನಮನ ಸಲ್ಲಿಸಿದ್ರು. ಕರ್ನಾಟಕ ಸರ್ಕಾರದಿಂದ ಅಂತಿಮ ಗೌರವ ಸಲ್ಲಿಸಲಾಯ್ತು. ಪೊಲೀಸರು 3 ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಲಾಯಿತು.

ಎಸ್‌ ಜಾನಕಿ ತಮ್ಮ ಇಡೀ ಬದುಕನ್ನೇ ಸಂಗೀತ ಲೋಕಕ್ಕೆ ಮೀಸಲಿಟ್ಟಿದ್ರು. ಅದ್ರಲ್ಲೂ ಕನ್ನಡ ಸಿನಿಮಾ ರಂಗವನ್ನೇ ತಮ್ಮ ಆಪ್ತ ಬಳಗ ಅಂದ್ಕೊಂಡಿದ್ದರು. 20 ಭಾಷೆಗಳಲ್ಲಿ ಹಾಡು ಹಾಡಿದ್ದ ಜಾನಕಮ್ಮ, ಅತಿ ಹೆಚ್ಚು ಹಾಡು ಹಾಡಿದ್ದು ಕನ್ನಡದಲ್ಲೇ. ಹೀಗಾಗಿಯೇ ಜಾನಕಮ್ಮರ ಜೊತೆ ಕರುನಾಡಿನ ಬಾಂಧವ್ಯ ಬೆಸೆದುಕೊಂಡಿತ್ತು. ಕನ್ನಡ ಚಿತ್ರರಂಗದ ಬಹುತೇಕ ಗಾಯನ ಗಾರುಡಿಗಳು ಜಾನಕಿಯವ್ರನ್ನ ಅಮ್ಮಾ ಅಂತಾನೇ ಕರೆಯುತ್ತಿದ್ದದ್ದು. ಇದೇ ಕಾರಣಕ್ಕೆ ಅಗಲಿದ ಚೇತನಕ್ಕೆ ನಮನ ಸಲ್ಲಿಸಲು ಓಡೋಡಿ ಬಂದಿದ್ರು. ಕನ್ನಡ ಸಿನಿಮಾ ರಂಗದ ನಟ ನಟಿಯರ ಜೊತೆಗೆ ಗಾಯಕ, ಗಾಯಕಿಯರು ಅಂತಿಮ ನಮನ ಸಲ್ಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed