Last Updated:
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಮಾಡಲು ದಕ್ಷಿಣ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಬರಲಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd International Airport) ಸಂಬಂಧಿಸಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕೆಂಪೇಗೌಡ ವಿಮಾನ ನಿಲ್ದಾಣದ (Kempegowda International Airport) ಮೇಲೆ ನಿರಂತರವಾಗಿ ಹೆಚ್ಚಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ನಗರದ ದಕ್ಷಿಣ ಭಾಗದಲ್ಲಿಯೇ ಹೊಸ ವಿಮಾನ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ಡಿಕೆ ಶಿವಕುಮಾರ್ (CM DK Shivakumar) ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಪೂರ್ಣ ಡಿಪಿಆರ್ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಗೆ ಕಡಿಮೆ ಬೆಲೆ ಇರುವ ಪ್ರದೇಶಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಯೋಜನೆ ವೆಚ್ಚ ಭಾರ ಸರ್ಕಾರದ ಮೇಲೆ ಬೀಳದಂತೆ ಅನುಕೂಲಕರ ಪ್ರದೇಶಗಳನ್ನು ಆಯ್ಕೆ ಮಾಡಲು ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಪ್ರಾಜೆಕ್ಟ್ ನಿರ್ಮಾಣದಿಂದ ಸ್ಥಳೀಯರು ಹಾಗೂ ರೈತರು ನಿರಾಶ್ರಿತರು ಆಗದಂತೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಇರುವ ಸ್ಥಳಗಳನ್ನು ಮಾತ್ರ ಗುರುತಿಸಲು ಸಿಎಂ ಅವರು ಹೇಳಿದ್ದಾರೆ.
ಪ್ರಸ್ತಾವಿತ ವಿಮಾನ ನಿಲ್ದಾಣದ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಡಿ.ಕೆ. ಶಿವಕುಮಾರ್ ವಿಶೇಷ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದರು. ಈ ಹಿಂದೆ ಪ್ರಾಜೆಕ್ಟ್ ಬಗ್ಗೆ ನಡೆದ ವಿವರಗಳ ಬಗ್ಗೆ ಪರಿಶೀಲನೆ ನಡೆಸಿದರು. ಎಲ್ಲಿಯೇ ಆದರೂ ಯೋಜನೆಯಿಂದ ಮನೆಗಳು ತೆರವು ಮಾಡಬೇಕು ಎಂದರೇ, ಇದಕ್ಕೆ ಪರ್ಯಾಯವಾಗಿ ಪರಿಹಾರ ನೀಡಲಾಗುವುದು, ಇದಕ್ಕಾಗಿ ನೂರಾರು ಮನೆಗಳಿರುವ ಗ್ರಾಮಗಳನ್ನು ಶಿಫ್ಟ್ ಮಾಡಬಾರದು ಎಂದು ಆದೇಶ ನೀಡಿದ್ದಾರೆ.
ಈ ಯೋಜನೆಗಾಗಿ ಈಗಾಗಲೇ ಮೂರು ಪ್ರಮುಖ ಪ್ರದೇಶಗಳನ್ನು ಎಎಇ ಉನ್ನತ ಅಧಿಕಾರಿಗಳು ಪ್ರಾಥಮಿಕ ಸರ್ವೆ ನಡೆಸಿ ಗುರುತಿಸಿದ್ದಾರೆ. ಅಧಿಕಾರಿಗಳು ಬೆಂಗಳೂರು ದಕ್ಷಿಣ ಭಾಗದ ಬಗ್ಗೆಯೇ ಒಲವು ತೋರಿಸಿದ್ದಾರೆ. ಸರ್ಕಾರ ಅಂತಿಮ ಪರಿಶೀಲನೆಯಲ್ಲಿ ಮೂರು ಪ್ರದೇಶಗಳನ್ನು ಅಂತಿಮ ಮಾಡಿದ್ದು, ಬೆಂಗಳೂರು-ಕನಕಪುರ ಮಾರ್ಗದ ಹಾರೋಹಳ್ಳಿ, ಬೆಂಗಳೂರು-ಹಾಸನ ರಸ್ತೆ ನಡುವಿನ ಕುಣಿಗಲ್ ಅಥವಾ ನೆಲಮಂಗಲ ಹೊರ ಭಾಗದಲ್ಲಿ ವಿಮಾನ ನಿಲ್ದಾಣ ಮಾಡಲು ಪ್ರಸ್ತಾವನೆ ಮಾಡಿದ್ದಾರೆ.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿಯೇ ಮೂರನೇ ಅತ್ಯಂತ ಬ್ಯುಸಿಯೆಸ್ಟ್ ಏರ್ಪೋರ್ಟ್ ಆಗಿದೆ. ಈ ವಿಮಾನ ನಿಲ್ದಾಣದ ಮೇಲೆ ಪ್ರಯಾಣಿಕರ ಒತ್ತಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆಯಿದೆ ಎಂದು ಸ್ಪಷ್ಟಪಡಿಸಿದ್ದರು. ಡಿಕೆ ಶಿವಕುಮಾರ್ ಇದಕ್ಕಾಗಿ ಒತ್ತಾಯಿಸುತ್ತಿದ್ದಾರೆ, ಈ ವರ್ಷವೇ ಕೆಲಸ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ನ್ಯೂಸ್18 ಇಂಗ್ಲೀಷ್ ವರದಿ ಮಾಡಿದೆ.
Bangalore [Bangalore],Bangalore,Karnataka














