Rukmini Vasanth: ತಲೈವಾ ಹೊಸ ಸಿನಿಮಾಗೆ ಸ್ಯಾಂಡಲ್‌‌ವುಡ್‌ ಚೆಲುವೆ! ರಜನಿಕಾಂತ್‌‌ ಚಿತ್ರದಲ್ಲಿ ಕಾಂತಾರ ಬ್ಯೂಟಿ? | | ACTPnews

ರುಕ್ಕಿಣಿ ವಸಂತ್


Last Updated:

ಧರ್ಮನ್ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ರುಕ್ಕಿಣಿ ವಸಂತ್ ಅವರನ್ನು ಚಿತ್ರತಂಡ ಈಗಾಗಲೇ ಸಂಪರ್ಕಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ನಟಿಯೊಂದಿಗೆ ಮೊದಲ ಹಂತದ ಮಾತುಕತೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ.

ರುಕ್ಕಿಣಿ ವಸಂತ್
ರುಕ್ಕಿಣಿ ವಸಂತ್

ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಅವರ ಮುಂದಿನ ಸಿನಿಮಾ ಧರ್ಮನ್ (Dharman) ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಡ್ರಾಗನ್ ಹಾಗೂ ಓ ಮೈ ಕಡವುಳೇ ಖ್ಯಾತಿಯ ನಿರ್ದೇಶಕ ಅಶ್ವಥ್ ಮಾರಿಮುತ್ತು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಕಮಲ್ ಹಾಸನ್ (Kamal Haasan) ನಿರ್ಮಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ನಮ್ಮ ಕನ್ನಡದ ನಟಿ ರುಕ್ಮಿಣಿ ವಸಂತ್ (Rukmini Vasanth) ನಟಿಸಲಿದ್ದಾರೆ ಎಂಬ ಮಾತುಗಳು ಬಲು ಜೋರಾಗಿಯೇ ಕೇಳಿಬರುತ್ತಿದೆ.

ಮಾಹಿತಿಯ ಪ್ರಕಾರ, ಧರ್ಮನ್ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ರುಕ್ಕಿಣಿ ವಸಂತ್ ಅವರನ್ನು ಚಿತ್ರತಂಡ ಈಗಾಗಲೇ ಸಂಪರ್ಕಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ನಟಿಯೊಂದಿಗೆ ಮೊದಲ ಹಂತದ ಮಾತುಕತೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಚಿತ್ರತಂಡ ಅಥವಾ ರುಕ್ಕಿಣಿ ವಸಂತ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಈ ಸುದ್ದಿ ಅಧಿಕೃತ ಘೋಷಣೆ ಹೊರಬರುವವರೆಗೆ ಊಹಾಪೋಹಗಳ ಹಂತದಲ್ಲಿದೆ.

ಧರ್ಮನ್ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದೆ. ರಜಿನಿಕಾಂತ್ ಮತ್ತು ಕಮಲ್ ಹಾಸನ್ ಅವರ ಈ ಅಪರೂಪದ ಕಾಂಬಿನೇಷನ್ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.

ಚಿತ್ರದಲ್ಲಿ ಸಿಮ್ರಾನ್, ರಾಶಿ ಖನ್ನಾ ಹಾಗೂ ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಸಂಗೀತದ ಮೇಲೂ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ.

ಈಗ ಧರ್ಮನ್ ಸಿನಿಮಾದ ಮಾತುಕತೆ ಯಶಸ್ವಿಯಾದರೆ, ರುಕ್ಕಿಣಿ ವಸಂತ್ ಮತ್ತೊಂದು ದೊಡ್ಡ ತಮಿಳು ಸಿನಿಮಾದ ಭಾಗವಾಗಲಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆಯಿದೆ.

ಹಾಗೆಯೇ ರುಕ್ಕಿಣಿ ವಸಂತ್ ಈಗಾಗಲೇ ಯಶ್ ಅಭಿನಯದ ಟಾಕ್ಸಿಕ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ಡ್ರಾಗನ್ ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಮೇಲೂ ಭಾರೀ ನಿರೀಕ್ಷೆ ಇದೆ.

ಸದ್ಯಕ್ಕೆ ಧರ್ಮನ್ ಸಿನಿಮಾದಲ್ಲಿ ರುಕ್ಕಿಣಿ ವಸಂತ್ ನಟಿಸಲಿದ್ದಾರೆ ಎಂಬ ಮಾಹಿತಿ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದು, ಚಿತ್ರತಂಡದಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಬರಬಹುದೇ ಎಂಬ ನಿರೀಕ್ಷೆ ಮೂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports