Road Accident: ಅಮೆರಿಕಾದಲ್ಲಿ ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಮೂವರು ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಾರು ಭೀಕರ ಅಪಘಾತ


Last Updated:

ಹೈದರಾಬಾದ್‌ನ ಸೈದಾಬಾದ್‌ನ ನವೀದ್ ಸುಮಾರು 10 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಾರು ಭೀಕರ ಅಪಘಾತ
ಕಾರು ಭೀಕರ ಅಪಘಾತ

ಹೈದರಾಬಾದ್: ಅಮೆರಿಕದ ಕ್ಯಾಲಿಫೋರ್ನಿಯಾ (Road Accident) ರಾಜ್ಯದಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಹೈದರಾಬಾದ್‌ನ ಒಂದೇ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಈ ಘಟನೆ ಸಂಬಂಧ ದುರಂತಕ್ಕೆ ಒಳಗಾದವರ ಸಂಬಂಧಿಕರಿಗೆ ಮಂಗಳವಾರ ಮಾಹಿತಿ ಬಂದಿದ್ದು, ಆ ಪ್ರಕಾರ ಸೋಮವಾರ ರಾತ್ರಿ (ಭಾರತೀಯ ಕಾಲಮಾನ) ಕುಟುಂಬ ಪ್ರಯಾಣಿಸುತ್ತಿದ್ದ ವಾಹನ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್‌ನ ಸೈದಾಬಾದ್‌ನ ನವೀದ್ ಸುಮಾರು 10 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈತನ್ಮಧ್ಯೆ, ಮಜ್ಲಿಸ್ ಬಚಾವೋ ತಹ್ರೀಕ್ (MBT) ವಕ್ತಾರ ಅಮ್ಜೇದ್ ಉಲ್ಲಾ ಖಾನ್ ಕುಟುಂಬ ಸದಸ್ಯರನ್ನು ಭೇಟಿಯಾಗಿ ವಿದೇಶಾಂಗ ಸಚಿವರಿಗೆ ಮನವಿ ಮಾಡಿದರು. ಕುಟುಂಬ ಸದಸ್ಯರು ಅಮೆರಿಕಕ್ಕೆ ಪ್ರಯಾಣಿಸಲು ಸಾಧ್ಯವಾಗುವಂತೆ ತುರ್ತು ವೀಸಾಗಳನ್ನು ತಕ್ಷಣ ನೀಡುವಂತೆ ಅವರು ಮನವಿ ಮಾಡಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed