Rithanya Case: ವರದಕ್ಷಿಣೆಯಾಗಿ ಪಡೆದ 800 ಗ್ರಾಂ ಚಿನ್ನ, ವೋಲ್ವೋ ಕಾರ್ ವಾಪಸ್ ಕೊಡಿ! ರಿತನ್ಯಾ ಕೇಸ್‌ನಲ್ಲಿ ಮದ್ರಾಸ್ ಹೈಕೋರ್ಟ್ ಆದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಿತನ್ಯಾ-ಕವಿನ್ ಕುಮಾರ್

[ad_1]

Last Updated:

Rithanya Case: ಮದುವೆಯಾದ ಸುಮಾರು ಎರಡೂವರೆ ತಿಂಗಳ ನಂತರ, 2025ರ ಜೂನ್ 28ರಂದು ರಿತನ್ಯಾ ಮನೆಯಿಂದ ಮೊಂಡಿಪಾಳಯಂ ದೇವಾಲಯಕ್ಕೆ ಹೋಗಿದ್ದರು. ನಂತರ ಅವರನ್ನು ಕಾರಿನೊಳಗೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಹಿಬಂದಿದ್ದರು. ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ರಿತನ್ಯಾ-ಕವಿನ್ ಕುಮಾರ್
ರಿತನ್ಯಾ-ಕವಿನ್ ಕುಮಾರ್

ತಮಿಳುನಾಡು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ತಮಿಳುನಾಡು ರಾಜ್ಯದ ತಿರುಪ್ಪೂರಿನ (Tiruppur) ರಿತನ್ಯಾ (Rithanya) ವರದಕ್ಷಿಣಿ ಹತ್ಯೆ ಪ್ರಕರಣದಲ್ಲಿ (dowry death case ) ಮದ್ರಾಸ್ ಹೈಕೋರ್ಟ್ (Madras High Court) ಮಹತ್ವದ ತೀರ್ಪು ನೀಡಿದೆ. ಮದುವೆ ವೇಳೆ ರಿತನ್ಯಾ ಗಂಡ ಕವಿನ್ ಕುಮಾರ್ (Kavin Kumar) ಹಾಗೂ ಕುಟುಂಬಸ್ಥರು ವರದಕ್ಷಿಣೆಯಾಗಿ ಪಡೆದುಕೊಂಡಿದ್ದ 100 ಪವನ್ ಅಂದರೆ 800 ಗ್ರಾಮ್ ಚಿನ್ನ ಮತ್ತು ವೋಲ್ವೋ ಕಾರನ್ನು ಆಕೆಯ ತಂದೆಗೆ ವಾಪಸ್ ನೀಡುವಂತೆ ಆದೇಶಿಸಿದೆ.

ರಿತನ್ಯಾ ಕೇಸ್‌ನಲ್ಲಿ ಮಹತ್ವದ ಆದೇಶ

ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ 27 ವರ್ಷದ ರಿತನ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಆದೇಶವೊಂದನ್ನು ಮದ್ರಾಸ್ ಹೈಕೋರ್ಟ್ ಹೊರಡಿಸಿದೆ. ವರದಕ್ಷಿಣೆಯಾಗಿ ನೀಡಲಾಗಿದ್ದ 100 ಪವನ್ ಅಂದರೆ 800 ಗ್ರಾಮ್ ಚಿನ್ನದ ಆಭರಣ ಮತ್ತು ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡು, ಅವುಗಳನ್ನು ರಿತನ್ಯಾ ತಂದೆ ಆರ್. ಅಣ್ಣಾದುರೈ ಅವರಿಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಸೂಚಿಸಿದೆ.

ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ತಂದೆ

ನ್ಯಾಯಮೂರ್ತಿ ಜಿ.ಕೆ. ಇಳಂತಿರಿಯನ್ ಅವರು ಈ ಆದೇಶ ನೀಡಿದ್ದಾರೆ. ಅವಿನಾಶಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಸ್ತಿಗಳನ್ನು ಹಿಂದಿರುಗಿಸುವಂತೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ರಿತನ್ಯಾ ತಂದೆ ಅಣ್ಣಾದುರೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ, ತನಿಖಾಧಿಕಾರಿಗಳು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಆಸ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗಮನಿಸಿದೆ.

2005ರಲ್ಲಿ ಮದುವೆಯಾಗಿದ್ದ ರಿತನ್ಯಾ

ರಿತನ್ಯಾ 2025ರ ಏಪ್ರಿಲ್ 11ರಂದು ಇ. ಕವಿನ್ ಕುಮಾರ್ ಎಂಬಾತನ್ನು ಮದುವೆಯಾಗಿದ್ದರು. ಮದುವೆಯ ಸಂದರ್ಭದಲ್ಲಿ ಕುಟುಂಬದವರು 100 ಪವನ್ ಚಿನ್ನ ಮತ್ತು ವೋಲ್ವೋ ಕಾರನ್ನು ವರದಕ್ಷಿಣೆಯಾಗಿ ನೀಡಿದ್ದರು. ಮದುವೆಯಾದ ಕೆಲವೇ ವಾರಗಳಲ್ಲಿ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಡ ಬರಲಾರಂಭಿಸಿತು ಎಂದು ಕುಟುಂಬದವರು ಹೇಳಿದ್ದಾರೆ. ಚಿನ್ನ ಮತ್ತು ಕಾರು ಮನೆಯಲ್ಲೇ ಇದೆ ಎಂದಿದ್ದರೂ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿರಲಿಲ್ಲ. ಸಿಸಿಟಿವಿ ದೃಶ್ಯಗಳು ಮತ್ತು ಆಡಿಯೋ ಸಾಕ್ಷ್ಯಗಳನ್ನು ನೀಡಿದ್ದರೂ ಅವುಗಳನ್ನು ಸರಿಯಾಗಿ ಪರಿಗಣಿಸಲಿಲ್ಲ ಎಂದು ತಂದೆ ಆರೋಪಿಸಿದ್ದಾರೆ.

ಮದುವೆಯಾಗಿ ಎರಡೂವರೆ ತಿಂಗಳಿಗೆ ಸಾವು

ಮದುವೆಯಾದ ಸುಮಾರು ಎರಡೂವರೆ ತಿಂಗಳ ನಂತರ, 2025ರ ಜೂನ್ 28ರಂದು ರಿತನ್ಯಾ ಮನೆಯಿಂದ ಮೊಂಡಿಪಾಳಯಂ ದೇವಾಲಯಕ್ಕೆ ಹೋಗಿದ್ದರು. ನಂತರ ಅವರನ್ನು ಕಾರಿನೊಳಗೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಹಿಬಂದಿದ್ದರು. ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಾವಿಗೆ ಮುನ್ನ ಅವರು ತಂದೆಗೆ ಏಳು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ಕಿರುಕುಳ ಮತ್ತು ನೋವಿನ ಬಗ್ಗೆ ಹೇಳಿದ್ದರು.

7 ಸಂದೇಶಗಳನ್ನು ಕಳಿಸಿದ್ದ ರಿತನ್ಯಾ

“ಕ್ಷಮಿಸು ಅಪ್ಪ. ಈ ಬಾರಿ ಯಾರೂ ನನ್ನನ್ನು ಉಳಿಸಬೇಡಿ. ಜೀವನ ಬದಲಾಗುತ್ತದೆ ಎಂದು ನಂಬಿದ್ದೆ. ಈಗ ಅದು ಬದಲಾಗುವುದಿಲ್ಲ ಎಂದು ಅರ್ಥವಾಯಿತು,” ಎಂದು ಒಂದು ಸಂದೇಶದಲ್ಲಿ ಹೇಳಿದ್ದರು. ಅತ್ತೆಯ ಮನೆಯವರು ಮಾನಸಿಕವಾಗಿ ಹಿಂಸಿಸಿದರು, ಗಂಡ ದೈಹಿಕವಾಗಿ ಹೊಡೆದರು ಎಂದೂ ಆರೋಪಿಸಿದ್ದರು. “ಅವರು ನನ್ನನ್ನು ನೋಯಿಸಿ ಅವಮಾನಿಸಿದ್ದಾರೆ. ನಾನು ಜೀವನಪೂರ್ತಿ ನಿಮಗೆ ಹೊರೆಯಾಗಬಾರದು,” ಎಂದು ಮತ್ತೊಂದು ಸಂದೇಶದಲ್ಲಿ ಹೇಳಿದ್ದರು.

ಗಂಡ, ಅತ್ತೆ, ಮಾವ ಅರೆಸ್ಟ್

ಸಾವಿನ ನಂತರ ಚೆಯ್ಯೂರು ಪೊಲೀಸರು ಮೊದಲು ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವಾಗಿ ದಾಖಲಿಸಿದ್ದರು. ಧ್ವನಿ ಸಂದೇಶಗಳು ಮತ್ತು ಆರೋಪಗಳ ಆಧಾರದ ಮೇಲೆ ಗಂಡ ಅಥವಾ ಅವರ ಸಂಬಂಧಿಕರಿಂದ ಕ್ರೌರ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸೇರಿಸಲಾಯಿತು. ಕವಿನ್ ಕುಮಾರ್ ಮತ್ತು ಅವರ ತಂದೆ ಈಶ್ವರಮೂರ್ತಿ ಅವರನ್ನು ಬಂಧಿಸಲಾಯಿತು. ತಾಯಿ ಚಿತ್ರಾದೇವಿ ಅವರನ್ನು ಆರಂಭದಲ್ಲಿ ಆರೋಗ್ಯ ಕಾರಣಕ್ಕೆ ಬಂಧಿಸಿರಲಿಲ್ಲ. ಕುಟುಂಬದ ಒತ್ತಾಯದ ನಂತರ ಜುಲೈ 4ರಂದು ಅವರನ್ನೂ ವಶಕ್ಕೆ ತೆಗೆದುಕೊಳ್ಳಲಾಯಿತು. ತನಿಖೆ ಇನ್ನೂ ಮುಂದುವರೆದಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports