Last Updated:
ಬೆಂಗಳೂರಿನಲ್ಲಿ ನಡೆದ ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯ ಪ್ಯಾನಲ್ ಡಿಸ್ಕಷನ್ನಲ್ಲಿ ಪಾಲ್ಗೊಂಡಿದ್ದ ಖಾದ್ಯ ಉದ್ಯಮಿಗಳು ಭಾರತದ ಡಿಪ್ ಟೆಕ್ ಎಕೋ ಸಿಸ್ಟಮ್ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ‘ದಕ್ಷಿಣ ಭಾರತವು ದೇಶದ ಡೀಪ್-ಟೆಕ್ ಮಹತ್ವಾಕಾಂಕ್ಷೆಗಳನ್ನು ಹೇಗೆ ಮುನ್ನಡೆಸುತ್ತಿದೆ ಎಂಬುವುದರ ಬಗ್ಗೆ ಚರ್ಚೆ ನಡೆಸಿದರು.
ದಕ್ಷಿಣ ಭಾರತವು (South India) ದೇಶದ ಡೀಪ್ ಟೆಕ್ ಪವರ್ ಹೌಸ್ (Deep Tech Power House) ಆಗಿ ಬದಲಾಗುತ್ತಿದೆ. ಬೆಂಬಲವಾಗಿ ನಿಂತಿರುವ ಸರ್ಕಾರದ ನೀತಿಗಳು, ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವುದು, ಎಕೋ ಸಿಸ್ಟಮ್ (Eco System) ಬಗೆಗಿನ ಬಲವಾದ ಸಂಶೋಧನೆ ಮತ್ತು ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯ ಪ್ಯಾನಲ್ ಡಿಸ್ಕಷನ್ನಲ್ಲಿ ಪಾಲ್ಗೊಂಡಿದ್ದ ಖಾದ್ಯ ಉದ್ಯಮಿಗಳು ಭಾರತದ ಡಿಪ್ ಟೆಕ್ ಎಕೋ ಸಿಸ್ಟಮ್ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ‘ದಕ್ಷಿಣ ಭಾರತವು ದೇಶದ ಡೀಪ್-ಟೆಕ್ ಮಹತ್ವಾಕಾಂಕ್ಷೆಗಳನ್ನು (Deep-Tech Ambitions) ಹೇಗೆ ಮುನ್ನಡೆಸುತ್ತಿದೆ’ ಎಂಬುವುದರ ಬಗ್ಗೆ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಟಿ-ಹಬ್ನ ಸಿಇಒ ಕವಿಕೃತ್, ಧ್ರುವ ಸ್ಪೇಸ್ನ ಸಂಸ್ಥಾಪಕ ಮತ್ತು CEO ಸಂಜಯ್ ನೆಕ್ಕಂಟಿ, ಎಥೆರಿಯಲ್ ಮೆಷಿನ್ಸ್ನ ಸಹ-ಸಂಸ್ಥಾಪಕ ಮತ್ತು CEO ಕೌಶಿಕ್ ಮುದ್ದಾ, ಚಾರ ಟೆಕ್ನಾಲಜೀಸ್ನ ಸಂಸ್ಥಾಪಕ ಮತ್ತು CEO ಭಕ್ತ ಕೇಶವಾಚಾರ್, ಹೆಲೆಕ್ಸ್ನ ಸಹ-ಸ್ಥಾಪಕರು ಮತ್ತು CEO ಪೌಲಮಿ ಚೌಧುರಿ ಪಾಲ್ಗೊಂಡಿದ್ದರು.
ಧ್ರುವ ಸ್ಪೇಸ್ನ ಸ್ಥಾಪಕ ಮತ್ತು ಸಿಇಒ ಸಂಜಯ್ ನೆಕ್ಕಂಟಿ ಭಾರತದ ಡೀಪ್-ಟೆಕ್ ಎಕೋ ಸಿಸ್ಟಮ್ ಕೆಲವೇ ವರ್ಷಗಳಲ್ಲಿ ಹೆಚ್ಚು ಪ್ರಗತಿಯನ್ನು ಸಾಧಿಸಿದೆ. “ಭಾರತದಲ್ಲಿ ಡೀಪ್-ಟೆಕ್ ಎಕೋ ಸಿಸ್ಟಮ್ನಿಂದಾಗಿ ನಾವು ಬಹಳ ದೂರ ಸಾಗಿದ್ದೇವೆ” ಎಂದು ಹೇಳಿದರು.
ಜಾಗತಿಕ ಬಾಹ್ಯಾಕಾಶ ಉದ್ಯಮಗಳಿಗೆ ಹೋಲಿಕೆ ಮಾಡುತ್ತಾ, ಅಮೆರಿಕದ ಖಾಸಗಿ ಕಂಪನಿಗಳು ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿವೆ, ಇದರಿಂದ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಸಹ ಒಂದನ್ನಾಗಿ ಮಾಡಲಾಗುತ್ತಿದೆ. ಯುಎಸ್ನಲ್ಲಿರುವ ಖಾಸಗಿ ಕಂಪನಿಗಳು 1000 ಉಪಗ್ರಹಗಳನ್ನು ಉಡಾವಣೆ ಮಾಡುತ್ತಿವೆ. ಸಾಮಾನ್ಯವಾಗಿ ಬಾಹ್ಯಾಕಾಶವು ಬಹುಶಿಸ್ತೀಯ ತಂತ್ರಜ್ಞಾನವಾಗಿದೆ. ಇದು ಒಂದಾಗಿ ಕಾರ್ಯನಿರ್ವಹಿಸುವ ಡೀಪ್ ಟೆಕ್ನಾಲಜಿ ಆಗಿದೆ ಎಂದು ನೆಕ್ಕಂಟಿ ಹೇಳಿದ್ದಾರೆ.
ಈ ವಲಯದಲ್ಲಿ ಅಂದರೆ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿ (RDIF) ಯಂತಹದಕ್ಕೆ ಸರ್ಕಾರದ ಯೋಜನೆಗಳು ನೀಡಿದ ಪ್ರೋತ್ಸಾಹಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಆರಂಭಿಕ ಹಂತದಲ್ಲಿಯೇ ಡೀಪ್-ಟೆಕ್ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ನಿಜಕ್ಕೂ ಸರ್ಕಾರ ನಿರ್ಣಾಯಕ ಪಾತ್ರವಹಿಸುತ್ತದೆ. “ಇದೇ ಮೊದಲ ಬಾರಿಗೆ ಕೆಲ ಡೀಪ್-ಟೆಕ್ ಕಂಪನಿಗಳಿಗೆ ಸರ್ಕಾರವು ಬೆಂಬಲ ನೀಡಿದ್ದು, ಉತ್ತಮ ಆರಂಭ ಸಿಕ್ಕಿದಂತಾಯಿತು. ಇಂದು ನಮ್ಮ ಆರ್ಡರ್ ಬುಕ್ಸ್ ಸುಮಾರು 500 ಕೋಟಿ ರೂ. ಆಗಿದೆ ಮತ್ತು ಪೈಪ್ಲೈನ್ ಸಾವಿರಾರು ಕೋಟಿಗಳಾಗಿದೆ.
ಇದೇ ವೇಳೆ ಮಾತನಾಡಿದ ಎಥೆರಿಯಲ್ ಮೆಷಿನ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ ಕೌಶಿಕ್ ಮುದ್ದಾ, ಸರ್ಕಾರದ ನೀತಿಗಳು ಮತ್ತು ಹಣಕಾಸು ಯೋಜನೆಗಳು ಡೀಪ್-ಟೆಕ್ ಸ್ಟಾರ್ಟ್ಅಪ್ಗಳ ಮುಂದಿನ ಭವಿಷ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. “ಆರ್ಡಿಐ ನಿಧಿಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ. ಸರ್ಕಾರದ ನೀತಿಗಳು ಮತ್ತು ಹೂಡಿಕೆಯ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಈ ವಲಯಕ್ಕೆ ಈಗ ಹೆಚ್ಚಿನ ಮನ್ನಣೆ ಸಿಗುತ್ತಿದೆ” ಎಂದು ಅವರು ಹೇಳಿದರು.














