Rishabh Pant: 2 ಸೀಸನ್‌ಗಳಿಂದ ಪಂತ್‌ಗೆ ಸಿಕ್ತು 54 ಕೋಟಿ! ಪ್ರತಿ ರನ್‌ಗೆ ರಿಷಭ್ ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ? | ಕ್ರೀಡಾ ಸುದ್ದಿ | ACTPnews

ರಿಷಭ್ ಪಂತ್


Last Updated:

ಐಪಿಎಲ್ ಮಧ್ಯದಲ್ಲಿಯೇ ಪಂತ್ ಲಖನೌ ಮ್ಯಾನೇಜ್‌ಮೆಂಟ್ ಹಾಗೂ ಪಂತ್ ನಡುವಿನ ಸಂಬಂಧ ಹಳಸಿತ್ತು. ಎರಡೂ ಆವೃತ್ತಿಗಳಲ್ಲೂ ರಿಷಭ್ ಅವರ ಅತ್ಯಂತ ಕಳಪೆ ಪ್ರದರ್ಶನ ಮತ್ತು ತಂಡದ ತಂಡದ ಪ್ರದರ್ಶನವನ್ನ ಆಧರಿಸಿ ಮ್ಯಾನೇಜ್‌ಮೆಂಟ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿತ್ತು ಎಂದು ತಿಳಿದುಬಂದಿದೆ.

ರಿಷಭ್ ಪಂತ್
ರಿಷಭ್ ಪಂತ್

ಕಳೆದ ಎರಡು ಋತುಗಳನ್ನು ಲಖನೌ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಆಡಿದ ರಿಷಭ್ ಪಂತ್ (Rishabh Pant), ಮುಂದಿನ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿದ್ದಾರೆ. ಮಂಗಳವಾರದ ಟ್ರೇಡ್ ಒಪ್ಪಂದದಲ್ಲಿ ಪಂತ್ ಬದಲಿಗೆ ಕುಲದೀಪ್ ಯಾದವ್ (Kuldeep Yadav) ಲಖನೌ ಸೇರಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಲಖನೌ ಅವರ ಪ್ರದರ್ಶನವನ್ನು ನೋಡಿದರೆ, ರಿಷಭ್ ಪಂತ್ ದೆಹಲಿಯಿಂದ ಪಡೆದಷ್ಟು ಸಂಭಾವನೆಯನ್ನು ಡೆಲ್ಲಿಯಿಂದ ಪಡೆಯುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಸೂಪರ್ ಜೈಂಟ್ಸ್‌ನಿಂದ ವರ್ಷಕ್ಕೆ ₹27 ಕೋಟಿ ಶುಲ್ಕ ಪಡೆದಿದ್ದ ರಿಷಭ್ ಅವರನ್ನು ದೆಹಲಿಗೆ ₹15 ಕೋಟಿಗೆ ವಿನಿಮಯ ಮಾಡಿಕೊಳ್ಳಲಾಯಿತು.

ಕಳಪೆ ಪ್ರದರ್ಶನದ ಬೆನ್ನಲ್ಲೇ ನಾಯಕತ್ವದಿಂದ ವಜಾ

ಐಪಿಎಲ್ ಮಧ್ಯದಲ್ಲಿಯೇ ಪಂತ್ ಲಖನೌ ಮ್ಯಾನೇಜ್‌ಮೆಂಟ್ ಹಾಗೂ ಪಂತ್ ನಡುವಿನ ಸಂಬಂಧ ಹಳಸಿತ್ತು. ಎರಡೂ ಆವೃತ್ತಿಗಳಲ್ಲೂ ರಿಷಭ್ ಅವರ ಅತ್ಯಂತ ಕಳಪೆ ಪ್ರದರ್ಶನ ಮತ್ತು ತಂಡದ ತಂಡದ ಪ್ರದರ್ಶನವನ್ನ ಆಧರಿಸಿ ಮ್ಯಾನೇಜ್‌ಮೆಂಟ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿತು. ಅದರಂತೆ ಟೂರ್ನಿ ಮುಗಿಯುತ್ತಿದ್ದಂತೆ ಅವರನ್ನ ಮೊದಲು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಮೇಲುನೋಟಕ್ಕೆ ಇದು ರಾಜೀನಾಮೆಯಂತೆ ಕಂಡರೂ, ಮ್ಯಾನೇಜ್‌ಮೆಂಟ್ ಬಲವಂತವಾಗಿ ಅವರನ್ನ ನಾಯಕತ್ವದಿಂದ ಕೆಳಗಿಳಿಸಿತ್ತು.

ಧೋನಿ- ರೋಹಿತ್‌ಗೆ ಹೋಲಿಸಿದ್ದ ಗೋಯಂಕಾ

2025ರ ಮೆಗಾ ಹರಾಜಿನಲ್ಲಿ ಪಂತ್‌ಗಾಗಿ ಲಖನೌ ಮತ್ತು ಹೈದರಾಬಾದ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮ ಕ್ಷಣಗಳಲ್ಲಿ, ದೆಹಲಿ ₹20.75 ಕೋಟಿಗೆ ಬಿಡ್ ಮಾಡಿತು, ಹೈದರಾಬಾದ್‌ನ ₹20.50 ಕೋಟಿಗಿಂತ ಹೆಚ್ಚು ಬಿಡ್ ಮಾಡಿ ನಿಲ್ಲಿಸಿತ್ತು. ಆದರೆ ಆ ಸಮಯದಲ್ಲಿ, ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಎಲ್ಲರನ್ನೂ ಮೀರಿಸಿ ₹27 ಕೋಟಿ ಫಿಕ್ಸ್ ಮಾಡಿದ್ದರು. ನಂತರ ಗೋಯೆಂಕಾ ಮಾಧ್ಯಮ ಸಂದರ್ಶನವೊಂದರಲ್ಲಿ ಪಂತ್ ಅವರ ಹೆಚ್ಚಿನ ಬಿಡ್ ಅನ್ನು ಸಮರ್ಥಿಸಿಕೊಂಡರು, ಎಡಗೈ ಬ್ಯಾಟ್ಸ್‌ಮನ್‌ರನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ಆಯ್ಕೆ ಮಾಡಲಾಗಿದೆ. ಧೋನಿ ಹಾಗೂ ರೋಹಿತ್ ನಂತರ ಪಂತ್ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು.

ನಿರೀಕ್ಷೆಗಳಿಗೆ ತಕ್ಕಂತೆ ಆಡದ ಪಂತ್

ಲಖನೌದಲ್ಲಿ ಎರಡು ವರ್ಷಗಳ ನಾಯಕತ್ವದ ಅವಧಿಯಲ್ಲಿ, ರಿಷಭ್ ಪಂತ್ ಒಟ್ಟು 28 ಪಂದ್ಯಗಳನ್ನು ಆಡಿದ್ದು, 26.45 ಸರಾಸರಿ ಮತ್ತು 135.66 ಸ್ಟ್ರೈಕ್ ರೇಟ್‌ನಲ್ಲಿ 581 ರನ್ ಗಳಿಸಿದ್ದಾರೆ. ಈ ಸರಾಸರಿ ಅಥವಾ ಈ ಸ್ಟ್ರೈಕ್ ರೇಟ್ ಪಂತ್ ಅವರ ಸಾಮರ್ಥ್ಯಕ್ಕೆ ಹೊಂದಿಕೆಯಾಗಲಿಲ್ಲ. ಮೊದಲ ಋತುವಿನಲ್ಲಿ, ಅವರ ಸರಾಸರಿ 24.45 ಮತ್ತು ಸ್ಟ್ರೈಕ್ ರೇಟ್ 133.16 ಆಗಿತ್ತು. ಆದರೆ ಈ ವರ್ಷ ಎರಡೂ 28.36 ಮತ್ತು 138.05 ಕ್ಕೆ ಸ್ವಲ್ಪ ಸುಧಾರಿಸಿತು. ಆದರೂ ಲಖನೌ 14 ಪಂದ್ಯಗಳಲ್ಲಿ ಕೇವಲ ನಾಲ್ಕನ್ನು ಗೆದ್ದು ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. 2025ರಲ್ಲಿ ಏಳನೇ ಸ್ಥಾನ ಪಡೆದಿದ್ದಕ್ಕೆ ಹೋಲಿಸಿದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು.

ಪ್ರತಿ ರನ್‌ಗೆ 9.3 ಲಕ್ಷ ರೂಪಾಯಿ

ರಿಷಭ್ ಪಂತ್ 2025ರಲ್ಲಿ 269 ರನ್ ಹಾಗೂ 2026ರಲ್ಲಿ 312 ರನ್ ಗಳಿಸಿದ್ದಾರೆ. ಎರಡೂ ಸೀಸನ್‌ನಿಂದ ಅವರು 581 ರನ್ ಗಳಿಸಿದ್ದಾರೆ. ಕಳೆದ ಎರಡೂ ವರ್ಷಗಳಲ್ಲಿ ಅವರು ಲಖನೌ ಸೂಪರ್ ಜೈಂಟ್ಸ್ ತಂಡದಿಂದ 54 ಕೋಟಿ ರೂ. ಪಡೆದುಕೊಂಡಿದ್ದಾರೆ. ಇವರು ಪಡೆದ ಹಣ ಹಾಗೂ ರನ್‌ಗಳನ್ನ ಲೆಕ್ಕಾಚಾರ ಮಾಡಿದರೆ, ಪ್ರತಿ ರನ್‌ಗೆ ಪಂತ್ ಬರೋಬ್ಬರಿ 9.3 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed