Last Updated:
ರಿಷಬ್ ಶೆಟ್ರು ಫ್ಯಾಮಿಲಿ ಜೊತೆಗೆ ಹೈದರಾಬಾದ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ತರವೇ ಕಪ್ಪು ಬಣ್ಣದ ಮಾಸ್ಕ್ ಧರಿಸಿಕೊಂಡಿದ್ದಾರೆ. ಆದರೆ, ಪಾಪರಾಜಿಗಳ ಕ್ಯಾಮರಾ ಮುಂದೆ ಮಾಸ್ಕ್ ತೆಗೆದು ಸ್ಮೈಲ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹೈದರಾಬಾದ್ (Hyderabad) ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು (Rishab Shetty) ಫ್ಯಾಮಿಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ರೀತಿನೇ ಇವರೂ ಕಪ್ಪು ಬಣ್ಣದ ಮಾಸ್ಕ್ (Mask) ಧರಿಸಿಕೊಂಡಿದ್ದಾರೆ. ಆದರೆ, ಪಾಪರಾಜಿಗಳ ಕ್ಯಾಮರಾ ಮುಂದೆ ಬಂದಾಗ ಒಂದು ಕೆಲಸ ಮಾಡಿದ್ದಾರೆ. ಅದೇನು ಗೊತ್ತಾ? ಅದು ಮುಂದೆ ಇದೆ ಓದಿ.
ಪ್ರೀತಿಯಿಂದ ಕೈ ಬೀಸಿದ ಶೆಟ್ರು
ಈ ಚಿತ್ರ ರಿಲೀಸ್ ಹಂತಕ್ಕೆ ಬಂದಾಗ ಶೆಟ್ರು ಎಂದಿನಂತೆ ಮಾಧ್ಯಮಗಳ ಎದುರು ಬಂದರು. ಚಿತ್ರದ ಸುಮಾರು ಮಾಹಿತಿ ಕೊಟ್ಟರು. ಹಾಗೆ ಹಂಪಿಯ ಅಂಜನಾದ್ರಿಯಲ್ಲಿ ಜೈ ಹನುಮಾನ್ ಚಿತ್ರದ ಮುಹೂರ್ತ ಆಯಿತು. ಆಗಲೂ ಅಷ್ಟೆ, ಶೆಟ್ರು ಚಿತ್ರದ ಮಾಹಿತಿಯನ್ನ ಕೊಟ್ಟರು.
ಜೈ ಹನುಮಾನ್ ಚಿತ್ರ ಕೆಲಸದಲ್ಲಿಯೇ ರಿಷಬ್ ಶೆಟ್ರ ಬ್ಯುಸಿ ಇದ್ದಾರೆ. ಈ ಸಿನಿಮಾ ಕೆಲಸದ ಮೇಲೆ ಹೈದರಾಬಾದ್ಗೂ ಹೋಗಿ ಬಂದು ಮಾಡ್ತಾರೆ. ಹಾಗಾಗಿಯೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ, ವಿಶೇಷ ಅಂದ್ರೆ ಈ ಸಲ ಮಕ್ಕಳು ರಾಧ್ಯಾ, ರಣವಿತ್ ಶೆಟ್ಟಿ ಕೂಡ ಇದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಸಹ ಜೊತೆಗಿದ್ದಾರೆ. ಹಾಗಾಗಿಯೇ ಕಂಪ್ಲೀಟ್ ಫ್ಯಾಮಿಲಿ ಇದೀಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದಾರೆ.
ರಿಷಬ್ ಶೆಟ್ರು ಇದೀಗ ಮಾಸ್ಕ್ ಹಾಕುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇದೇ ರೀತಿ ಮಾಸ್ಕ್ ಧರಿಸುತ್ತಾರೆ. ಮಾಸ್ಕ್ ಹಾಕಿಕೊಂಡೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಾಣಿಸುತ್ತಾರೆ.
ಹಾಗೆ ರಿಷಬ್ ಶೆಟ್ರು ಈಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಫ್ಯಾಮಿಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇವರು ಮಾಸ್ಕ್ ಧರಿಸಿಕೊಂಡೆ ಇಲ್ಲಿ ಆಗಮಿಸಿದ್ದಾರೆ.
ಹೈದರಾಬಾದ್ ಅಲ್ಲಿ ಶೆಟ್ರು
ರಿಷಬ್ ಶೆಟ್ರು ಇಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೂ ಕಾಣಿಸಿದ್ದಾರೆ. ಆಗಲೇ ರಿಷಬ್ ಶೆಟ್ರು ಮಾಸ್ಕ್ ತೆಗೆದಿದ್ದಾರೆ. ಅಷ್ಟೆ ಖುಷಿಯಲ್ಲಿಯೇ ಸ್ಮೈಲ್ ಕೂಡ ಕೊಟ್ಟಿದ್ದಾರೆ.
ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಮಾರು ಪೇಜ್‌ಗಳಲ್ಲೂ ಈ ವಿಡಿಯೋ ಗಮನ ಸೆಳೆಯುತ್ತಿದೆ.
ಪ್ರಶಾಂತ್ ವರ್ಮಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಹನುಮ್ಯಾನ್ ಚಿತ್ರದ ಯುನಿವರ್ಸ್ ಅಡಿಯಲ್ಲಿಯೇ ಈ ಜೈ ಹನುಮಾನ್ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ರಿಷಬ್ ಶೆಟ್ರು ಆಂಜನೇಯನ ಪಾತ್ರ ಮಾಡುತ್ತಿದ್ದಾರೆ. ಈ ಒಂದು ಚಿತ್ರದ ಕಥೆಯನ್ನ ಕಾಂತಾರ ಚಾಪ್ಟರ್ ಒನ್ ಚಿತ್ರದ ಸಮಯದಲ್ಲಿಯೇ ಪ್ರಶಾಂತ್ ವರ್ಮಾ ಹೇಳಿದ್ದರು. ಈ ಕಥೆ ಕೇಳಿದ್ಮೇಲೆ ರಿಷಬ್ ಶೆಟ್ರು ಬೇಡ ಅಂತ ಹೇಳೋಕೆ ಆಗ್ಲಿಲ್ಲ. ಆ ರೀತಿನೇ ಈ ಕಥೆ ಇದೆ.
ರಿಷಬ್ ಶೆಟ್ರು ಈ ಒಂದು ಚಿತ್ರದ ಮುಹೂರ್ತವನ್ನ ಹಂಪಿಯಲ್ಲಿಯೇ ಮಾಡೋಣ ಅಂತ ಹೇಳಿದ್ದರು. ಇಲ್ಲಿಯ ಅಂಜನಾದ್ರಿಯಲ್ಲಿಯೇ ಮಾಡೋಣ ಅಂತಲೂ ಹೇಳಿದ್ದರು.
ರಿಷಬ್ ಶೆಟ್ರ ಈ ಒಂದು ಸಲಹೆಯಂತೆ ಚಿತ್ರದ ಸಿನಿಮಾದ ಮುಹೂರ್ತ ಇಲ್ಲಿಯೇ ನಡೆಯಿತು. 575 ಮೆಟ್ಟಿಲು ಹತ್ತಿಕೊಂಡೆ ರಿಷಬ್ ಶೆಟ್ರು, ಪ್ರಗತಿ ಶೆಟ್ಟಿ, ಪ್ರಶಾಂತ್ ವರ್ಮಾ ಹೀಗೆ ಚಿತ್ರದ ಇನ್ನು ಅನೇಕರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು ಅಂತ ಹೇಳಬಹುದು.
Bangalore [Bangalore],Bangalore,Karnataka
May 23, 2026 11:17 PM IST













