Last Updated:
ಭಾರತದ ಬ್ಯಾನ್ ಬೆನ್ನಲ್ಲೇ ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಪ್ರಮುಖ ರಾಜಕೀಯ ನಾಯಕರು ಕೂಡ ಚೀನಾದ ಆ್ಯಪ್ಗಳನ್ನು ಬ್ಯಾನ್ ಮಾಡುವಂತೆ ಸ್ಥಳೀಯ ಸರ್ಕಾರಕ್ಕೆ ಒತ್ತಾಯಿಸಿವೆ. ಈಗಾಗಲೇ ಚೀನಾ ಹಾಗೂ ಅಮೆರಿಕದ ನಡುವೆ ಹಲವು ಬಾರಿ ರಾಜಕೀಯ ಮುಸುಕಿನ ಗುದ್ದಾಟ ಮುಂದುವರಿದಿರುವ ಕಾರಣ ಈ ಆ್ಯಪ್ಗಳ ನಿಷೇಧ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
ನವದೆಹಲಿ(ಜು.07): ಭಾರತದ ಬೆನ್ನಲ್ಲೀಗ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಚೀನಿ ಆ್ಯಪ್ಗಳ ನಿಷೇಧಕ್ಕೆ ಚಿಂತನೆ ನಡೆಸಿವೆ ಎಂದು ವರದಿಯಾಗಿದೆ. ಚೀನಾ ಮೂಲದ ಟಿಕ್ಟಾಕ್ ಸೇರಿದಂತೆ ಎಲ್ಲಾ ಆ್ಯಪ್ಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಉಭಯ ದೇಶಗಳು ಹೇಳಿಕೆ ನೀಡಿವೆ. ಒಂದು ವೇಳೆ ಭಾರತದಂತೆಯೇ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಕೂಡ ತನ್ನ ದೇಶದ ಅಪ್ಲಿಕೇಶನ್ಗಳನ್ನು ನಿಷೇಧಿಸಿದರೆ ಮುಂದೇನು? ಎಂಬ ಆತಂಕ ಚೀನಾಗೀಗ ಶುರುವಾಗಿದೆ.
ಈ ಸಂಬಂಧ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಅಧಿಕೃತ ಹೇಳಿಕೆ ನೀಡಿರುವ ಅಮರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೀಗೊಂದು ಸುಳಿವು ಕೊಟ್ಟಿದ್ದಾರೆ. ಹಲವು ಕಾರಣಾಂತರಗಳಿಂದ ಚೀನಾದ ಆ್ಯಪ್ಗಳನ್ನು ಬ್ಯಾನ್ ಮಾಡುವ ಪ್ರಸ್ತಾಪ ನಮ್ಮ ಮುಂದಿದೆ ಎಂದಿದ್ದಾರೆ. ಈ ಎನ್ನುವ ಮೂಲಕ ಚೀನಾಗೆ ಮತ್ತೊಂದು ಸಂಕಷ್ಟ ತಂದೊಡಿದ್ಧಾರೆ.
ಇತ್ತೀಚೆಗೆ ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಚೀನಾದ 59 ಆ್ಯಪ್ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಲಡಾಖ್ ಗಡಿಯಲ್ಲಿ ಚೀನಾ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡ ಕಾರಣ ಲಕ್ಷಾಂತರ ಜನರು ತಮ್ಮ ಮೊಬೈಲ್ನಲ್ಲಿರುವ ಚೀನಾ ಆ್ಯಪ್ಗಳನ್ನು ಡಿಲೀಟ್ ಮಾಡಿದ್ದಾರೆ. ಈ 59 ಚೀನೀ ಆ್ಯಪ್ಗಳು ಭಾರತೀಯ ಮೊಬೈಲ್ ಬಳಕೆದಾರರ ಡೇಟಾವನ್ನು ಅನಧಿಕೃತವಾಗಿ ಭಾರತದ ಹೊರಗಿರುವ ಸರ್ವರ್ಗಳಿಗೆ ರವಾನಿಸುತ್ತಿವೆ ಎಂಬ ದೂರುಗಳು ಬಂದಿತ್ತು. ಹೀಗಾಗಿ ಈ ಆ್ಯಪ್ಗಳನ್ನು ಬ್ಯಾನ್ ಮಾಡುತ್ತಿರುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಕ್ಟಾಕ್, ನಾವು ನಮ್ಮ ಬಳಕೆದಾರರ ಯಾವುದೇ ಡೇಟಾವನ್ನು ಚೀನಾ ಸರ್ಕಾರಕ್ಕೆ ನೀಡಿಲ್ಲ ಎಂದು ತಿಳಿಸಿತ್ತು.