Rishab Shetty: ಡಿವೈನ್ ಸ್ಟಾರ್​ಗೆ ಬರ್ತ್​ಡೇ ಸಂಭ್ರಮ! ರಿಷಬ್ ಶೆಟ್ರ ಈ ಸಿನಿಮಾಗಳನ್ನು OTTಯಲ್ಲಿ ನೋಡಿ | Rishab shetty birthday Kantara director turns 42 | | ACTPnews

ರಿಷಬ್ ಶೆಟ್ಟಿ


Last Updated:

Rishab Shetty: ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು 42ನೇ ಬರ್ತ್​ಡೇ ಆಚರಿಸುತ್ತಿದ್ದಾರೆ. ಕಾಂತಾರ ನಿರ್ದೇಶಕರ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು. ಇಲ್ಲಿದೆ ಲಿಸ್ಟ್.

ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Director Rishab Shetty) ಅವರು ಇಂದು ಬರ್ತ್​ಡೇ (Birthday) ಆಚರಿಸುತ್ತಿದ್ದಾರೆ. ಕಾಂತಾರ ಡೈರೆಕ್ಟರ್​ಗೆ 42 ವರ್ಷವಾಗಿದೆ. ಕಾಂತಾರ ಸಿನಿಮಾಗಳ (Kantara Movie) ಮೂಲಕ ಕನ್ನಡಕ್ಕೆ ಹಾಗೂ ಇಂಡಿಯನ್ ಸಿನಿಮಾಗೆ ಬಿಗ್ ಹಿಟ್ ಕೊಟ್ಟ ರಿಷಬ್ ಶೆಟ್ಟಿ (Rishab Shetty) ಅವರು ರಾತ್ರಿ ಬೆಳಗಾಗುವುದರಲ್ಲಿ ಡಿವೈನ್ ಸ್ಟಾರ್ ಆಗಿದ್ದಷ್ಟೇ ಅಲ್ಲದೆ, ಫೇಮಸ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. ಅವರ ಸಿನಿಮಾಗಳನ್ನು (Cinema) ಜನ ಹುಡುಕಿ ನೋಡೋಕೆ ಶುರು ಮಾಡಿದ್ರು.

ಕಾಂತಾರ ಸಿನಿಮಾ ಜನ ಕೊಂಡಾಡಿದ್ರು. ರಿಷಬ್ ಶೆಟ್ಟಿ ಅವರ ಇನ್ನಷ್ಟು ಸಿನಿಮಾಗಳನ್ನು ನೀವು ನೋಡಬೇಕಾ? ಇಂದು ಬರ್ತ್​ಡೇ ಸೆಲೆಬ್ರೇಟ್ ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಈ ಸಿನಿಮಾಗಳನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದು. ಒಟಿಟಿಯಲ್ಲಿರುವ ರಿಷಬ್ ಶೆಟ್ಟಿ ಸಿನಿಮಾಗಳಿವು.

ನಿರ್ದೇಶಕ ರಿಷಬ್ ಶೆಟ್ಟಿ ಅವರ ಅನೇಕ ಹಿಟ್ ಸಿನಿಮಾಗಳು ಆನ್‌ಲೈನ್‌ನಲ್ಲಿ ಬೇರೆ ಬೇರೆ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸ್ಟ್ರೀಮ್ ಮಾಡೋಕೆ ಲಭ್ಯವಿದೆ. ನೀವು ಮನೆಯಲ್ಲೇ ಕುಳಿತುಕೊಂಡು ಫ್ಯಾಮಿಲಿ ಜೊತೆ ಸಿನಿಮಾ ನೋಡಬಹುದು.

ಕಾಂತಾರದಂತಹ ಅವರ ಕೆಲವು ಜನಪ್ರಿಯ ಸಿನಿಮಾಗಳನ್ನು ಇಲ್ಲಿ ನೋಡಬಹುದು. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿರೋ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಕಾಂತಾರ (2022)

ಕನ್ನಡ ಸಿನಿಮಾವನ್ನು ಹೊಸ ಹಂತಕ್ಕೆ ಕರೆದೊಯ್ದ ಈ ಸಿನಿಮಾದ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ರಿಪೀಟೆಡ್ ಆಗಿ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಜನ ನೋಡಿದ್ದಾರೆ. ಈ ಬ್ಲಾಕ್‌ಬಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಸ್ಥಳೀಯ ದೈವಾರಾಧನೆ, ಬುಡಕಟ್ಟು ಸಂಪ್ರದಾಯಗಳನ್ನು ಸುಂದರವಾಗಿ ತೋರಿಸಿದೆ. ಈ ಸಿನಿಮಾವನ್ನು ನೀವು ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

ಕಾಂತಾರ: ಎ ಲೆಜೆಂಡ್ ಚಾಪ್ಟರ್-1 (2025)

2022ರ ಕಾಂತಾರ ಮೂವಿಯ ಪ್ರೀಕ್ವೆಲ್ ಆಗಿ ಈ ಸಿನಿಮಾ ಬಿಡುಗಡೆಯಾಯಿತು. ಕಾಂತಾರ ಸೃಷ್ಟಿಸಿದ್ದ ಕ್ರೇಜ್ ಹಾಗೂ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟೋಕೆ ಸಕ್ಸಸ್ ಆದ್ರು ರಿಷಬ್ ಶೆಟ್ಟಿ. ಪ್ರಾಚೀನ ಸಂಪ್ರದಾಯಗಳ ಮೂಲ, ಆಚರಣೆ, ಪದ್ಧತಿಗಳನ್ನು ಸುಂದರವಾಗಿ ತೋರಿಸಿದ್ರು. ಇದನ್ನು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೋಡಬಹುದು.

ಬೆಲ್ ಬಾಟಮ್ (2019)

ಈ ರೆಟ್ರೋ ಕಾಮಿಡಿ ಥ್ರಿಲ್ಲರ್ ಸಿನಿಮಾದಲ್ಲಿ ರಿಷಬ್ 1980 ರ ದಶಕದಲ್ಲಿ ಒಬ್ಬ ಇಂಟೆಲಿಜೆಂಟ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಆಹಾದಲ್ಲಿ ನೋಡಬಹುದು.

ಗರುಡ ಗಮನ ವೃಷಭ ವಾಹನ (2021)

ಈ ಸಿನಿಮಾ ಮಂಗಳೂರಿನ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ಇದು ಇಬ್ಬರು ಸ್ನೇಹಿತರ ಬಗ್ಗೆ ಮಾಡಿರುವ ಸಿನಿಮಾ. ಈ ಸಿನಿಮಾದ ಕಥೆ, ಹಾಡು, ಬಿಜಿಎಂ ಹಿಟ್ ಆಗಿತ್ತು. ಇದನ್ನು ZEE5 ನಲ್ಲಿ ವೀಕ್ಷಿಸಬಹುದು.

ಹರಿಕಥೆ ಅಲ್ಲ ಗಿರಿಕಥೆ (2022)

ಸಿನಿಮಾ ಮಾಡಲು ಪ್ರಯತ್ನಿಸುತ್ತಿರುವ ಮೂರು ಜನರ ಸಿನಿ ಜರ್ನಿಯನ್ನು ತೋರಿಸುವ ಒಂದು ಫನ್ ಫಿಲ್ಡ್ ಸಿನಿಮಾ ಇದಾಗಿದೆ. ಇದನ್ನು Voot ನಲ್ಲಿ ನೋಡಬಹುದು. ಕೆಲವೊಂದು ಪ್ರದೇಶಗಳಲ್ಲಿ ಜಿಯೋ ಸಿನಿಮಾದಲ್ಲೂ ಲಭ್ಯವಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed