Last Updated:
ಹುಬ್ಬಳ್ಳಿಯ ರೈಫಲ್ ಶೂಟಿಂಗ್ ಅಕಾಡೆಮಿ ಯುವಕರಿಗೆ ಕ್ರೀಡಾ ಕೋಟಾದ ಮೂಲಕ ಸರ್ಕಾರಿ ಉದ್ಯೋಗದ ದಾರಿ, 9 ವರ್ಷಗಳಲ್ಲಿ ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ಶೂಟರ್ ಗಳನ್ನು ಬೆಳೆಸಿದೆ
ಹುಬ್ಬಳ್ಳಿ: ಸರ್ಕಾರಿ ಉದ್ಯೋಗ (Govt Job) ಪಡೆಯಬೇಕೆಂಬುದು ಪ್ರತಿಯೊಬ್ಬ ಯುವಕ-ಯುವತಿಯರ ಕನಸು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳ (Competitive Examinations) ಓಟದಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಅಂತಹ ಸಮಯದಲ್ಲಿ, ಕ್ರೀಡಾ (Sports) ಕ್ಷೇತ್ರದಲ್ಲಿನ ಸಾಧನೆ ನಿಮಗೆ ನೇರವಾಗಿ ಸರ್ಕಾರಿ ಉದ್ಯೋಗದ ಬಾಗಿಲು ತೆರೆಸಿಕೊಡಬಲ್ಲದು ಎಂದು ಹೇಳಿದರೆ ನಂಬುತ್ತೀರಾ? ಹೌದು, ಇದು ಸಾಧ್ಯ.
ಹುಬ್ಬಳ್ಳಿಯ ವಿದ್ಯಾನಗರದ ವಿಹಾನ ಆಸ್ಪತ್ರೆಯ ಎದುರು ಇರುವ ಈ ರೈಫಲ್ ಶೂಟಿಂಗ್ ಅಕಾಡೆಮಿ, ಉತ್ತರ ಕರ್ನಾಟಕದ ಯುವಕ-ಯುವತಿಯರಿಗೆ ಭರವಸೆಯ ತಾಣವಾಗಿದೆ. ಭಾರತೀಯ ಸೇನೆಯಿಂದ ನಿವೃತ್ತರಾದ ರವಿಚಂದ್ರ ಬಾಲೆಹೊಸೂರು ಅವರು ಸ್ಥಾಪಿಸಿರುವ ಈ ಸಂಸ್ಥೆ, ಕಳೆದ 9 ವರ್ಷಗಳಿಂದ ಅಸಂಖ್ಯಾತ ಯುವ ಪ್ರತಿಭೆಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.
ಪ್ರಸ್ತುತ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದು, ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ನೀವೂ ನಿಮ್ಮ ಕ್ರೀಡಾ ಕನಸನ್ನು ನನಸಾಗಿಸಲು ಬಯಸಿದರೆ, ನೇರವಾಗಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಂಸ್ಥೆಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರು ಅವರನ್ನು +91 90081 11438 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಿ.
Hubli-Dharwad (Hubli),Dharwad,Karnataka












