Rifle Shooting Training: ಕ್ರೀಡಾ ಕೋಟಾದಡಿ ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸೂಪರ್ ಟಿಪ್ಸ್! | ಹುಬ್ಬಳ್ಳಿ-ಧಾರವಾಡ ನ್ಯೂಸ್ (Hubballi Dharwad News) | ACTPnews

ಇಲ್ಲಿ


Last Updated:

ಹುಬ್ಬಳ್ಳಿಯ ರೈಫಲ್ ಶೂಟಿಂಗ್ ಅಕಾಡೆಮಿ ಯುವಕರಿಗೆ ಕ್ರೀಡಾ ಕೋಟಾದ ಮೂಲಕ ಸರ್ಕಾರಿ ಉದ್ಯೋಗದ ದಾರಿ, 9 ವರ್ಷಗಳಲ್ಲಿ ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ಶೂಟರ್ ಗಳನ್ನು ಬೆಳೆಸಿದೆ

+

ಇಲ್ಲಿ ವಿಡಿಯೋ ನೋಡಿ

ಹುಬ್ಬಳ್ಳಿ: ಸರ್ಕಾರಿ ಉದ್ಯೋಗ (Govt Job) ಪಡೆಯಬೇಕೆಂಬುದು ಪ್ರತಿಯೊಬ್ಬ ಯುವಕ-ಯುವತಿಯರ ಕನಸು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳ (Competitive Examinations) ಓಟದಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಅಂತಹ ಸಮಯದಲ್ಲಿ, ಕ್ರೀಡಾ (Sports) ಕ್ಷೇತ್ರದಲ್ಲಿನ ಸಾಧನೆ ನಿಮಗೆ ನೇರವಾಗಿ ಸರ್ಕಾರಿ ಉದ್ಯೋಗದ ಬಾಗಿಲು ತೆರೆಸಿಕೊಡಬಲ್ಲದು ಎಂದು ಹೇಳಿದರೆ ನಂಬುತ್ತೀರಾ? ಹೌದು, ಇದು ಸಾಧ್ಯ.

ರೈಫಲ್ ಶೂಟಿಂಗ್ ತರಬೇತಿ ಕೇಂದ್ರ

ಹುಬ್ಬಳ್ಳಿಯ ವಿದ್ಯಾನಗರದ ವಿಹಾನ ಆಸ್ಪತ್ರೆಯ ಎದುರು ಇರುವ ಈ ರೈಫಲ್ ಶೂಟಿಂಗ್ ಅಕಾಡೆಮಿ, ಉತ್ತರ ಕರ್ನಾಟಕದ ಯುವಕ-ಯುವತಿಯರಿಗೆ ಭರವಸೆಯ ತಾಣವಾಗಿದೆ. ಭಾರತೀಯ ಸೇನೆಯಿಂದ ನಿವೃತ್ತರಾದ ರವಿಚಂದ್ರ ಬಾಲೆಹೊಸೂರು ಅವರು ಸ್ಥಾಪಿಸಿರುವ ಈ ಸಂಸ್ಥೆ, ಕಳೆದ 9 ವರ್ಷಗಳಿಂದ ಅಸಂಖ್ಯಾತ ಯುವ ಪ್ರತಿಭೆಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.

ಯಾಕೆ ಇಲ್ಲಿ ತರಬೇತಿ ಪಡೆಯಬೇಕು?

ಈ ಕ್ರೀಡೆಗೆ ಯಾವುದೇ ನಿರ್ದಿಷ್ಟ ವಿದ್ಯಾರ್ಹತೆಯ ಅವಶ್ಯಕತೆಯಿಲ್ಲ. ನಿಮ್ಮ ಏಕಾಗ್ರತೆ, ಮಾನಸಿಕ ದೃಢತೆ ಮತ್ತು ಪರಿಶ್ರಮವೇ ನಿಮ್ಮನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ. ವಿಶೇಷವಾಗಿ ಕ್ರೀಡಾ ಕೋಟಾದ ಮೂಲಕ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ಇಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವಿಶೇಷಚೇತನರವರೆಗೂ ಎಲ್ಲರಿಗೂ ಸಮಾನ ಅವಕಾಶ ಮತ್ತು ತರಬೇತಿ ನೀಡಲಾಗುತ್ತದೆ.
ಸಾಧನೆಯ ಶಿಖರದಲ್ಲಿ ಹುಬ್ಬಳ್ಳಿಯ ಶೂಟರ್ ಗಳು

ಇಲ್ಲಿ ತರಬೇತಿ ಪಡೆದ ಅನೇಕರು ಇಂದು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಓಪನ್ ಶೂಟಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಹುಬ್ಬಳ್ಳಿಯ ಶೂಟರ್‍ಗಳು ಬರೋಬ್ಬರಿ 15 ಪದಕಗಳನ್ನು ಬಾಚಿಕೊಳ್ಳುವ ಮೂಲಕ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದ್ದಾರೆ. ಐಶ್ವರ್ಯ ಬಾಲೆಹೊಸೂರು, ಖುಷ್ ಪರಮಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ಇಲ್ಲಿ ತರಬೇತಿ ಪಡೆದು ಪದಕಗಳನ್ನು ಗೆದ್ದಿದ್ದಾರೆ. ಶ್ರೀಹರ್ಷ ದೇವರೆಡ್ಡಿ ಅವರಂತಹ ಪ್ಯಾರಾ ಶೂಟರ್‍ಗಳು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ನೀವು ಹೇಗೆ ಸೇರಬಹುದು?

ಪ್ರಸ್ತುತ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದು, ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ನೀವೂ ನಿಮ್ಮ ಕ್ರೀಡಾ ಕನಸನ್ನು ನನಸಾಗಿಸಲು ಬಯಸಿದರೆ, ನೇರವಾಗಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಂಸ್ಥೆಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರು ಅವರನ್ನು +91 90081 11438 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed