Last Updated:
ಬೆಂಗಳೂರು ಅಕ್ಕಿ ಬೆಲೆ ಜಿಗಿತ, ಪ್ರತಿ ಕೆಜಿಗೆ 6-10 ರೂ ಏರಿಕೆ, 26 ಕೆಜಿ ಚೀಲಕ್ಕೆ 150 ರೂ ಹೆಚ್ಚಳ, ರಫ್ತು, ಇಂಧನ ವೆಚ್ಚ, ದಾಸ್ತಾನು ಕೊರತೆಯಿಂದ ನವೆಂಬರ್ ತನಕ ಒತ್ತಡ ಸಾಧ್ಯ.
ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ ಬೆಲೆಗಳ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ (Rice) ಬೆಲೆ ( Price) ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿರುವ ಕಾರಣ, ಪ್ರತಿ ಕೆಜಿ ಅಕ್ಕಿ ಮೇಲೆ 6 ರಿಂದ 10 ರೂಪಾಯಿಯಷ್ಟು ಏರಿಕೆಯಾಗಿದ್ದು (Hike), 26 ಕೆಜಿ ಅಕ್ಕಿಯ ಚೀಲದ ಮೇಲೆ ಬರೋಬ್ಬರಿ 150 ರಷ್ಟು ಬೆಲೆ ಏರಿಕೆಯಾಗಿದೆ. ಇದು ಗೃಹಿಣಿಯರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ವ್ಯಾಪಾರಿಗಳ ಪ್ರಕಾರ, ನವೆಂಬರ್ ತಿಂಗಳವರೆಗೆ ಮಾರುಕಟ್ಟೆಯಲ್ಲಿ ಹೊಸ ಅಕ್ಕಿಯ ದಾಸ್ತಾನು ಬರುವವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಅಕ್ಕಿ ಕೊರತೆಯಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. “ಅಕ್ಕಿ ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮ ಬೀರದಿದ್ದರೂ, ಜನರು ಊಟ ಮಾಡಲೇಬೇಕು. ಆದರೆ ಗ್ರಾಹಕರು ಬೆಲೆ ಕೇಳಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಮಳಿಗೆಯ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
Bangalore [Bangalore],Bangalore,Karnataka
Jun 12, 2026 10:17 AM IST













