Last Updated:
Reservation Hatao: ಪ್ರತಿಭಟನಾಕಾರರು ಸಕಾರಾತ್ಮಕ ಕ್ರಮಗಳನ್ನು ಜಾತಿಯ ಬದಲು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು, ವಿಶೇಷವಾಗಿ ‘ಕ್ರೀಮಿ ಲೇಯರ್’ (ಕೆನೆ ಪದರ) ನಿಬಂಧನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಜಂತರ್ ಮಂತರ್ (Jantar Mantar) ಮತ್ತೊಂದು ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಜಾತಿ ಆಧಾರಿತ ಮೀಸಲಾತಿಯ (caste-based reservation) ವಿರುದ್ಧ ಇಂದು ‘ರಿಸರ್ವೇಷನ್ ಹಟಾವೋ’ (Reservation Hatao) ಅನ್ನೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ದೆಹಲಿ ಪೊಲೀಸರು (Delhi Police) ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.














