Renukaswamy Case-Darshan: ಒಂದಲ್ಲ, ಎರಡಲ್ಲ ಪ್ರದೋಷ್ ವಿರುದ್ಧ ಇರೋ 9 ಆರೋಪಗಳಿವು | Renukaswamy case Darshan what are the allegations against pradosh | | ACTPnews

Renukaswamy Case-Darshan: ಒಂದಲ್ಲ, ಎರಡಲ್ಲ ಪ್ರದೋಷ್ ವಿರುದ್ಧ ಇರೋ 9 ಆರೋಪಗಳಿವು | Renukaswamy case Darshan what are the allegations against pradosh |


ದರ್ಶನ್‌ಗೆ ಶಾಕ್!

ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೆ ಬಿಗ್ ಶಾಕ್ ಎದುರಾಗಿದೆ. ಜೊತೆಯಲ್ಲಿದ್ದವರಿಂದಲೇ ಕಾಟೇರನಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು ರೇಣುಕಾಸ್ವಾಮಿ ಕೊಲೆ ಕೇಸ್‌ನ ಬಿಗ್ ಅಪ್ಡೇಟ್ ಕೇಸ್​ಗೆ ಟ್ವಿಸ್ಟ್ ಕೊಟ್ಟಿದೆ.

ಪ್ರದೋಷ್ ಕೋರ್ಟ್‌ನಲ್ಲಿ ಕೊಲೆ ಘಟನೆಯ ಸತ್ಯ ಹೇಳಲಿದ್ದಾರೆ ಎನ್ನಲಾಗಿದೆ. ಕೋರ್ಟ್‌ನಲ್ಲಿ A-14 ಆರೋಪಿ ಸತ್ಯ ಹೇಳುತ್ತಾರೆ ಎನ್ನಲಾಗಿದ್ದು ಮಾಫಿ ಸಾಕ್ಷಿಯಿಂದ ದರ್ಶನ್‌‌ಗೆ ಜೈಲೇ ಖಾಯಂ ಆಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ಗೆ ಮತ್ತೆ ಸಂಕಷ್ಟ?

ತನ್ನನ್ನು ಈ ಕೇಸ್​​ನಲ್ಲಿ ಮಾಫಿ ಸಾಕ್ಷಿಯಾಗಿಸುವಂತೆ A14 ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಸತ್ಯ ಹೇಳುತ್ತೇನೆ. ಕ್ಷಮೆ ನೀಡುವಂತೆ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

59ನೇ ಸಿಸಿಹೆಚ್ ಕೋರ್ಟ್‌ಗೆ ಪ್ರದೋಷ್ ಅರ್ಜಿ

ಪ್ರತ್ಯೇಕ ಕೊಠಡಿಯಿಂದ ವಿಸಿ ಮೂಲಕ ಹಾಜರಿಗೆ ಮನವಿ ಮಾಡಲಾಗಿದ್ದು ದರ್ಶನ್ ಇರುವ ಕೊಠಡಿ ಬಿಟ್ಟು ಬೇರೆ ಕೊಠಡಿಗೆ ಮನವಿ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A-14 ಆಗಿರುವ ಪ್ರದೋಷ್ ಆರಂಭದಿಂದಲೇ ದರ್ಶನ್ ಜೊತೆಗಿದ್ದರು.

ಪ್ರದೋಷ್ ಮೇಲಿನ ಆರೋಪಗಳು

1. ಸಾಕ್ಷ್ಯ ನಾಶ, ಕೇಸ್ ಮುಚ್ಚಿಹಾಕಲು ಯತ್ನ

2. ದರ್ಶನ್ ಕಡೆಯಿಂದ ₹30 ಲಕ್ಷ ಹಣ ಸ್ವೀಕಾರ

3. ಬೇರೆ ವ್ಯಕ್ತಿಗಳನ್ನ ಶರಣಾಗಿಸಲು ಸೂತ್ರಧಾರ

4. ಘಟನಾ ಸ್ಥಳದಲ್ಲಿ ಉಪಸ್ಥಿತಿ, ಕೊಲೆಯ ಮಾಹಿತಿ

5. ರೇಣುಕಾಸ್ವಾಮಿ ಸಾವಿನ ವಿಷ್ಯ ದರ್ಶನ್‌ಗೆ ತಿಳಿಸಿದ್ದ

6. ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡ ಕರೆತಂದಿದ್ದ ಪ್ರದೋಷ್

7. ಸಂಚಿನಲ್ಲಿ ಆತ ಸಕ್ರಿಯವಾಗಿ ಭಾಗಿಯಾಗಿದ್ದ

8. ಪ್ರದೋಷ್ ವಿರುದ್ಧ ಕೊಲೆ, ಸಾಕ್ಷ್ಯ ನಾಶದ ಆರೋಪ

9. ಕೊಲೆ, ಸಾಕ್ಷ್ಯ ನಾಶದ ಜಂಟಿ ಹೊಣೆಗಾರಿಕೆಯಡಿ ಚಾರ್ಜ್‌ಶೀಟ್

ವರದಿ: ಮಂಜುನಾಥ್ ಎನ್. ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed