ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೆ ಬಿಗ್ ಶಾಕ್ ಎದುರಾಗಿದೆ. ಜೊತೆಯಲ್ಲಿದ್ದವರಿಂದಲೇ ಕಾಟೇರನಿಗೆ ದೊಡ್ಡ ಸಂಕಷ್ಟ ಎದುರಾಗಿದ್ದು ರೇಣುಕಾಸ್ವಾಮಿ ಕೊಲೆ ಕೇಸ್‌ನ ಬಿಗ್ ಅಪ್ಡೇಟ್ ಕೇಸ್ಗೆ ಟ್ವಿಸ್ಟ್ ಕೊಟ್ಟಿದೆ.
ಪ್ರದೋಷ್ ಕೋರ್ಟ್‌ನಲ್ಲಿ ಕೊಲೆ ಘಟನೆಯ ಸತ್ಯ ಹೇಳಲಿದ್ದಾರೆ ಎನ್ನಲಾಗಿದೆ. ಕೋರ್ಟ್‌ನಲ್ಲಿ A-14 ಆರೋಪಿ ಸತ್ಯ ಹೇಳುತ್ತಾರೆ ಎನ್ನಲಾಗಿದ್ದು ಮಾಫಿ ಸಾಕ್ಷಿಯಿಂದ ದರ್ಶನ್‌ಗೆ ಜೈಲೇ ಖಾಯಂ ಆಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.
ತನ್ನನ್ನು ಈ ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಿಸುವಂತೆ A14 ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಸತ್ಯ ಹೇಳುತ್ತೇನೆ. ಕ್ಷಮೆ ನೀಡುವಂತೆ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕ ಕೊಠಡಿಯಿಂದ ವಿಸಿ ಮೂಲಕ ಹಾಜರಿಗೆ ಮನವಿ ಮಾಡಲಾಗಿದ್ದು ದರ್ಶನ್ ಇರುವ ಕೊಠಡಿ ಬಿಟ್ಟು ಬೇರೆ ಕೊಠಡಿಗೆ ಮನವಿ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A-14 ಆಗಿರುವ ಪ್ರದೋಷ್ ಆರಂಭದಿಂದಲೇ ದರ್ಶನ್ ಜೊತೆಗಿದ್ದರು.
1. ಸಾಕ್ಷ್ಯ ನಾಶ, ಕೇಸ್ ಮುಚ್ಚಿಹಾಕಲು ಯತ್ನ
2. ದರ್ಶನ್ ಕಡೆಯಿಂದ ₹30 ಲಕ್ಷ ಹಣ ಸ್ವೀಕಾರ
3. ಬೇರೆ ವ್ಯಕ್ತಿಗಳನ್ನ ಶರಣಾಗಿಸಲು ಸೂತ್ರಧಾರ
4. ಘಟನಾ ಸ್ಥಳದಲ್ಲಿ ಉಪಸ್ಥಿತಿ, ಕೊಲೆಯ ಮಾಹಿತಿ
5. ರೇಣುಕಾಸ್ವಾಮಿ ಸಾವಿನ ವಿಷ್ಯ ದರ್ಶನ್‌ಗೆ ತಿಳಿಸಿದ್ದ
6. ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡ ಕರೆತಂದಿದ್ದ ಪ್ರದೋಷ್
7. ಸಂಚಿನಲ್ಲಿ ಆತ ಸಕ್ರಿಯವಾಗಿ ಭಾಗಿಯಾಗಿದ್ದ
8. ಪ್ರದೋಷ್ ವಿರುದ್ಧ ಕೊಲೆ, ಸಾಕ್ಷ್ಯ ನಾಶದ ಆರೋಪ
9. ಕೊಲೆ, ಸಾಕ್ಷ್ಯ ನಾಶದ ಜಂಟಿ ಹೊಣೆಗಾರಿಕೆಯಡಿ ಚಾರ್ಜ್‌ಶೀಟ್
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು













