Renukaswamy Case: ನ್ಯಾಯಮೂರ್ತಿಗಳ ಪೀಠಕ್ಕೂ ತಲುಪಲಿಲ್ಲ ಅರ್ಜಿ! ದರ್ಶನ್​ಗೆ ಭಾರೀ ಶಾಕ್ | Renukaswamy Darshan plea to reconsider court order about bail rejected | | ACTPnews

ದರ್ಶನ್


Last Updated:

Darshan: ನಟ ದರ್ಶನ್​ ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಕೋರ್ಟ್ ಆದೇಶ ಮರು ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಆರೋಪಿ ನಟ ದರ್ಶನ್​ಗೆ (Darshan) ಬಿಗ್ ಶಾಕ್ ಸಿಕ್ಕಿದೆ. ಒಂದು ವರ್ಷ ಜಾಮೀನು (Bail) ಅರ್ಜಿ ಸಲ್ಲಿಸಲು ನಿರ್ಬಂಧ ಹಿನ್ನಲೆ ಆದೇಶದಲ್ಲಿ ಮಾರ್ಪಾಡು ಹಾಗೂ ಸ್ಪಷ್ಟನೆ ಬೇಕು ಎಂದು ಕೇಳಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ದರ್ಶನ್​ಗೆ ಭಾರೀ ಹಿನ್ನಡೆಯಾಗಿದೆ.

ಸುಪ್ರೀಂಕೋರ್ಟ್​ನಲ್ಲಿ ನಟ ದರ್ಶನ್ ಅರ್ಜಿ ವಜಾ ಆಗಿದ್ದು ಪರಿಶೀಲನಾ ಹಂತದಲ್ಲೆ ದರ್ಶನ್ ಅರ್ಜಿ ವಜಾ ಆಗಿದೆ. ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಕೋರ್ಟ್ ಅದೇಶ ಮರು ಪರಿಶೀಲನೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ನಟ ದರ್ಶನ್ ಅವರ ಅರ್ಜಿ ವಜಾ ಆಗಿದೆ.

ರಿಜಿಸ್ಟ್ರಾರ್ ಇಂದು ದರ್ಶನ್ ಮರು ಪರಿಶೀಲನಾ ಅರ್ಜಿ ವಜಾ ಮಾಡಿದ್ದಾರೆ. ನ್ಯಾಯಮೂರ್ತಿಗಳ ಪೀಠಕ್ಕೆ ಹೋಗುವ ಮುನ್ನವೇ ದರ್ಶನ್ ಅರ್ಜಿ ವಜಾ ಆಗಿದೆ. ಒಂದು ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಆದೇಶದಲ್ಲಿ ಮಾರ್ಪಾಡು ಮಾಡಲು ಮನವಿ ಮಾಡಿದ ನಟ ದರ್ಶನ್ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಒಂದು ವರ್ಷದೊಳಗೆ ಯಾವುದೇ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದೆ.

ಈ ಆದೇಶದಿಂದ ಟ್ರಯಲ್ ಇನ್ನಷ್ಟು ವಿಳಂಬವಾಗಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಮಾನವೀಯ ನೆಲೆಗಳಲ್ಲಿ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ನನ್ನ ದೀರ್ಘಾವಧಿಯ ಬಂಧನವನ್ನು ಪರಿಗಣಿಸಬೇಕು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ರಕ್ಷಿತವಾಗಿದೆ. ದೀರ್ಘಾವಧಿಯ ಬಂಧನವನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಕೋರಿದ್ದರು.

ದೀರ್ಘ ಬಂಧನದಿಂದ ತಮ್ಮ ವೃತ್ತಿಜೀವನ, ಜೀವನೋಪಾಯ ಮತ್ತು ಕುಟುಂಬಕ್ಕೆ ತೀವ್ರ ಹಾನಿಯಾಗಿದೆ. ತಾಯಿ ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದಾರೆ. ಒಂದು ವರ್ಷ ಜಾಮೀನು ನೀಡದಿರುವ ಆದೇಶ ವ್ಯಾಪಕ ಪರಿಣಾಮ ಬೀರಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೀಗಾಗೀ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನೀಡಿರುವ ಆದೇಶ ಮಾರ್ಪಾಡು ಮಾಡಲು ದರ್ಶನ್ ಮನವಿ ಸಲ್ಲಿಸಿದ್ದರು. ಸದ್ಯ ಈ ಅರ್ಜಿ ವಜಾ ಆಗಿದೆ.

ವರದಿ: ಮುನಿರಾಜು ಕೆಜಿ. ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed