Last Updated:
ದರ್ಶನ್‌ಗೆ ಆಗಸ್ಟ್ 14 2025ರಲ್ಲಿ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿತ್ತು. ಜಾಮೀನು ರದ್ದಾಗ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲು ಸೇರಿ 365 ದಿನ ಆಗೋಗ್ತಿದೆ. ಈ ಹಿನ್ನೆಲೆ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು: ದರ್ಶನ್ (Darshan) ಜೈಲು ಸೇರಿ ಒಂದಲ್ಲಾ ಎರಡು ತಿಂಗಳಲ್ಲ. ಬರೋಬ್ಬರಿ ಒಂದು ವರ್ಷವೇ ಆಗೋಯ್ತು. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಜಾಮೀನು (Bail) ರದ್ದಾಗ್ತಿದ್ದಂತೆ ಮನೆಯಿಂದಲೇ ಎತ್ತಾಕೊಂಡು ಹೋಗಿ 365 ದಿನ ಆಗೋಗ್ತಿದೆ. ಆದ್ರೆ, ದರ್ಶನ್ ಮಾತ್ರ ಒಂದೊಂದು ಕ್ಷಣವೂ, ಒಂದೊಂದು ದಿನವೂ ನರಕದಂತೆ ಅನುಭವಿಸ್ತಿದ್ದಾರೆ. ಇದರ ಮಧ್ಯೆ ಮಾಫಿ ಸಾಕ್ಷಿಯ ಸುಳಿಯೂ ಸುತ್ಕೊಂಡಿದ್ದು, ಕುಂತಲ್ಲೂ ನಿಂತಲ್ಲೂ ನರಳಾಡ್ತಿದ್ದಾರೆ.














