Last Updated:
ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು. ಆದರೆ, ಅಮ್ಮನ ಕಡೆಯಿಂದ ಇವರು ಸಂಬಂಧ ಆಗ್ಬೇಕು. ಹಾಗಂತ ಉಪೇಂದ್ರ (Upendra) ಸಡನ್ ಆಗಿಯೆ ಕಾಶಿನಾಥ್ ಅವರ ಮುಂದೆ ಹೋಗಿ ನಿಂತುಕೊಳ್ಳಲಿಲ್ಲ. ಒಂದು ನಾಟಕ ಬರೆದರು. ಆದರೆ, ಇದನ್ನ ಕಾಶಿನಾಥ್ (Kashinath) ಅವರು ಓದುತ್ತಾರೋ ಇಲ್ವೋ ಅನ್ನುವ ಡೌಟ್ ಇತ್ತು. ಅದಕ್ಕೆನೆ ಉಪ್ಪಿ (Uppi) ಒಂದು ಐಡಿಯಾ ಮಾಡಿದರು. ತಾವೇ ಬರೆದೆ ನಾಟಕವನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಆ ನಾಟಕವನ್ನ ಕಾರ್ ಅಲ್ಲಿ ಹೋಗುವಾ ಒಮ್ಮೆ ನೀವು ಕೇಳಿ ಅಂತ ಹೇಳಿದರು. ಮುಂದೆ ಏನಾಯಿತು ಅನ್ನೋದನ್ನ ಉಪೇಂದ್ರ ಮತ್ತೆ ಈಗ ಹೇಳಿಕೊಂಡಿದ್ದಾರೆ. ಅವರು ಹೇಳಿರೋ ಆ ಕಥೆಯ ಸಾರ ಈ ರೀತಿ ಇದೆ ಓದಿ.
ಮರು ದಿನ ಏನ್ ಆಯಿತು
ಆ ಹುಡುಗಿಯನ್ನಇಂಪ್ರೆಸ್ ಮಾಡ್ಬೇಕು ಅಂತಲೋ, ಪ್ರಪೋಸ್ ಮಾಡ್ಬೇಕು ಅಂತಲೂ ಉಪ್ಪಿ ಸ್ನೇಹಿತರು ಯೋಚನೆ ಮಾಡ್ತಿರೋರು. ಅದಕ್ಕೆ ಉಪ್ಪಿಯ ಅಕ್ಷರಗಳು ಸಾಥ್ ಕೊಡ್ತಾ ಇದ್ದವು. ಓದಿದಾಕ್ಷಣವೇ ಪ್ರೀತಿಯಲ್ಲಿ ಬೀಳ್ಬೇಕು ನೋಡಿ. ಆ ರೀತಿನೇ ಸಾಲುಗಳನ್ನ ಉಪ್ಪಿ ಬರೆದುಕೊಡ್ತಾ ಇದ್ದರು.
ಉಪೇಂದ್ರ ಅವರಿಗೆ ಕಾಶಿನಾಥ್ ಅವರ ಬಳಿ ಕೆಲಸ ಮಾಡ್ಬೇಕು ಅನ್ನುವ ಆಸೆ ಇತ್ತು. ಆದರೆ, ಹೋಗೋದು ಹೇಗೇ? ಅವರಿಗೆ ತಮ್ಮ ಪ್ರತಿಭೆ ತೋರಿಸೋದು ಹೇಗೆ? ಈ ಎಲ್ಲ ಪ್ರಶ್ನೆಗಳೂ ಇದ್ದವು.
ಕಾಶಿನಾಥ್ ಅವರು ಉಪೇಂದ್ರ ಅವರ ಸಂಬಂಧಿನೆ ಆಗಿದ್ದರು. ತಾಯಿ ಕಡೆ ಸಂಬಂಧವೇ ಇವರಾಗಿದ್ದರು. ಆದರೂ ಇವರಿಗೆ ಒಂದು ಅನುಮಾನ ಇತ್ತು. ನಾಟಕ ಬರೆದು ಕೊಟ್ರೆ ಓದುತ್ತಾರೋ ಇಲ್ವೋ ಅನ್ನುವ ಪ್ರಶ್ನೆಗಳಿದ್ದವು.
ಉಪೇಂದ್ರ ಅವರು ತಾವು ಬರೆದ ನಾಟಕವನ್ನ ರೆಕಾರ್ಡ್ ಮಾಡಿದರು. ಸ್ನೇಹಿತರನ್ನ ಜೊತೆಗೂಡಿಸಿಕೊಂಡು ನಾಟಕವನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿಕೊಂಡರು.
ಕಮಾನ್ ಕಮಾನ್ ಕಾಮಣ್ಣ…
ಕಾಶಿನಾಥ್ ಅವರಿಗೆ ಆ ಕ್ಯಾಸೆಟ್ ಕೊಟ್ಟರು. ಕಾರ್ ಅಲ್ಲಿ ಹೊರಗಡೆ ಹೋಗುವಾಗ ಕೇಳಿ ಅಂತ ಕೊಟ್ಟರು. ಕಾಶಿನಾಥ್ ಅವರು ಅದನ್ನ ಕೇಳಿದ್ದರು. ಉಪ್ಪಿಯನ್ನ ಕರೆದರು. ತಮ್ಮ ಜೊತೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು.
ಈ ಒಂದು ಹಾಡನ್ನ ಉಪೇಂದ್ರ ಅವರು ಬರೆದಿದ್ದಾರೆ. ಕಾಶಿನಾಥ್ ಅವರು ಅನಂತನ ಅವಾಂತರ ಚಿತ್ರದ ಹಾಡು ಇದಾಗಿದೆ. ಹಂಸಲೇಖ ಸಂಗೀತದಲ್ಲಿಯೇ ಈ ಹಾಡು ಮೂಡಿ ಬಂದಿದೆ.
ಉಪೇಂದ್ರ ಮರು ದಿನ ತಾವು ಬರೆದ ಹಾಡನ್ನ ಕಾಶಿನಾಥ್ ಅವರಿಗೆ ತೋರಿಸಿದರು. ಅದನ್ನ ನೋಡಿದ ಕಾಶಿನಾಥ್ ಅವರು ತುಂಬಾನೆ ಚೆನ್ನಾಗಿದೆ ಅಂತ ಮೆಚ್ಚಿಕೊಂಡರು.
ಆದರೆ, ಮನೋಹರ್ ಅವರಿಗೆ ಕಾಶಿನಾಥ್ ಅವರು ಕೇಳಿದರು. ಮನೋಹರ್ ನೀವು ಏನ್ ಬರೆದಿದ್ದೀರಾ? ತೋರಿಸಿ ನೋಡೋಣ ಅಂತ ಕೇಳಿದರು. ಆದರೆ, ಮನೋಹರ್ ತೋರಿಸೋಕೆ ಹೋಗ್ಲಿಲ್ಲ. ಬದಲಾಗಿ ಸುಮ್ನೆ ಆದರು. ಉಪೇಂದ್ರ ಹೇಳಿದರೂ ಒಪ್ಪಲಿಲ್ಲ. ಇರಲಿ, ನಿಮಗೆ ಲಿರಿಕ್ ರೈಟರ್ ಅಂತ ಒಂದು ಕೆಲಸನಾದರೂ ಆಗಲಿ ಅಂತಲೇ ಹೇಳಿದರು.
ಹೀಗೆ ಮನೋಹರ್ ಅವರ ಗುಣವನ್ನ ಇಂದಿಗೂ ಕೊಂಡಾಡುವ ಉಪೇಂದ್ರ ಅವರು, ತಮ್ಮ ಜೀವನದ ಈ ಅನುಭವವನ್ನ ರಾಪಿಡ್ ರಶ್ಮಿ ಅವರ ಜಸ್ಟ್ ಕೂರಿಯಸ್ ಪಾಡ್‌ಕಾಸ್ಟ್ ಅಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













