Last Updated:
ಡಿವೈನ್ ಸ್ಟಾರ್ ರಿಷಬ್ ಶೆಟ್ರು ಹಾಲಿವುಡ್ಗೆ ಹಾರುವ ಸೂಚನೆ ಕೊಟ್ರಾ? ಸ್ಪೈಡರ್ ಮ್ಯಾನ್ಗೂ ಜೈಹನುಮಾನ್ಗೂ ಏನಾದ್ರೂ ಲಿಂಕ್ ಇದಿಯಾ? ಈ ಎಲ್ಲ ಕುತೂಹಲದ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ರಿಷಬ್ ಶೆಟ್ರು (Rishab Shetty) ಹಾಲಿವುಡ್ಗೆ (Hollywood) ಕಾಲಿಡುವ ಸೂಚನೆ ಕೊಟ್ರಾ? ಜೈ ಹನುಮಾನ್ಗೂ (Jai Hanuman) ಸ್ಪೈಡರ್ ಮ್ಯಾನ್ಗೂ (Spider Man) ಸಂಬಂಧ ಇದಿಯಾ? ಸೋನಿ ಪಿಕ್ಚರ್ಸ್ ಜತೆಗೆ ಶೆಟ್ರು ಕೈ ಜೋಡಿಸಿದ್ಯಾಕೆ? ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ ಚಿತ್ರವನ್ನ ಇಂಡಿಯಾದಲ್ಲಿ ಪ್ರಮೋಟ್ ಮಾಡ್ತಿರೋದು ಯಾಕೆ? ಈ ಎಲ್ಲ ಕುತೂಹಲ ಇದ್ದೇ ಇದೆ. ಇದರ ನಡುವೆ ಇನ್ನೂ ಒಂದು ಕುತೂಹಲವು ಶುರು ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಜುಲೈ-30 ಕ್ಕೆ ಸಿನಿಮಾ ರಿಲೀಸ್
ಈ ಒಂದು ಸಂಸ್ಥೆಯ ಜೊತೆಗೆ ಈ ಚಿತ್ರವನ್ನ ಪ್ರಮೋಟ್ ಮಾಡೋಕೆ ಶೆಟ್ರು ಕೈ ಜೋಡಿಸಿದ್ದಾರೆ. ವಿಶೇಷವೆಂದ್ರೆ ಈ ಚಿತ್ರವನ್ನ ಇಂಡಿಯಾದಲ್ಲಿ ಪ್ರಮೋಟ್ ಮಾಡೋಕೆ ರಿಷಬ್ ಶೆಟ್ರು ಮಾತ್ರ ಸಾಥ್ ಕೊಟ್ಟಿದ್ದಾರೆ. ಇದು ಒಂದು ರೀತಿ ಹೆಮ್ಮೆಯ ವಿಷಯವೇ ನೋಡಿ.
ಸ್ಪೈಡರ್ ಮ್ಯಾನ್ಗೂ ಜೈ ಹನುಮಾನ್ಗೂ ಲಿಂಕ್ ಇದಿಯಾ? ಈ ಒಂದು ಪ್ರಶ್ನೆನೂ ಈಗ ಹುಟ್ಟಿಕೊಳ್ಳುತ್ತಿದೆ. ಕಾರಣ, ಜೈ ಹನುಮಾನ್ ಚಿತ್ರವನ್ನ ಶೆಟ್ರು ಮಾಡ್ತಾ ಇದ್ದಾರೆ.
ಹಂಪಿಯ ಅಂಜನಾದ್ರಿ ಬೆಟ್ಟದಲ್ಲೂ ಈ ಚಿತ್ರಕ್ಕೆ ಪೂಜೆ ಆಗಿದೆ. ಈ ಹನುಮಾನ್ ಮೂಲಕವೇ ಶೆಟ್ರು ಹಾಲಿವುಡ್ಗೆ ಕಾಲಿಡ್ತಾರಾ ಅನ್ನುವ ಕುತೂಹಲವೂ ಹೆಚ್ಚಾಗಿದೆ. ಅದು ಬಿಟ್ಟರೆ, ಸ್ಪೈಡರ್ ಮ್ಯಾನ್ ಚಿತ್ರದಲ್ಲಿ ಶೆಟ್ರು ಅಭಿನಯ ಏನೂ ಮಾಡ್ತಿಲ್ಲ. ಬದಲಾಗಿ ಈ ಚಿತ್ರವನ್ನ ಪ್ರಮೋಟ್ ಮಾಡ್ತಿದ್ದಾರೆ ನೋಡಿ.
ಸ್ಪೈಡರ್ ಮ್ಯಾನ್ಗೆ ಆಂಜನೇಯ ಸ್ಪೂರ್ತಿನಾ ಅನ್ನುವ ಪ್ರಶ್ನೆ ಇದ್ದೇ ಇದೆ. ಈ ಬಗ್ಗೆ ಚರ್ಚೆನೂ ಇವೆ. ಆದರೆ, ಸ್ಪೈಡರ್ ಮ್ಯಾನ್ ಕ್ರಿಯೇಟ್ ಮಾಡಿದವರು ಎಲ್ಲೂ ಈ ವಿಚಾರ ಹೇಳಿಕೊಂಡಿಲ್ಲ.
ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ
ಆಂಜನೇಯನಿಂದಲೇ ನಾವು ಸ್ಪೂರ್ತಿ ಪಡೆದಿದ್ದೇವೆ ಅಂತ ಎಲ್ಲೂ ಹೇಳಿಕೊಂಡಿಯೂ ಇಲ್ಲ. ಆದರೂ ಒಂದು ಚರ್ಚೆ ಇದ್ದೇ ಇದೆ. ಇದರ ಹೊರತಾಗಿ ಈ ಸ್ಪೈಡರ್ ಮ್ಯಾನ್ ಚಿತ್ರದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ.
ಸ್ಪೈಡರ್ಮ್ಯಾನ್; ಬ್ರ್ಯಾಂಡ್ ನ್ಯೂ ಡೇ ಚಿತ್ರ ಜುಲೈ-30 ರಂದು ರಿಲೀಸ್ ಆಗುತ್ತಿದೆ. ಟಾಮ್ ಹಾಲ್ಯಾಂಡ್ ಈ ಚಿತ್ರದಲ್ಲಿ ಸ್ಪೈಡರ್ ಮ್ಯಾನ್ ರೋಲ್ ಮಾಡಿದ್ದಾರೆ.
ಸ್ಪೈಡರ್ಮ್ಯಾನ್ ಚಿತ್ರ ಇಂಗ್ಲಿಷ್ ಅಲ್ಲಿಯೇ ತಯಾರಾಗಿದೆ. ಆದರೆ, ಇದು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
ಈ ಚಿತ್ರವನ್ನ ರಿಷಬ್ ಶೆಟ್ರು ಪ್ರಮೋಟ್ ಮಾಡಿದ್ದಾರೆ. ಈ ಮೂಲಕ ಹಾಲಿವುಡ್ಗೆ ಹಾರುವ ಸೂಚನೆ ನೀಡಿದರಾ ಅನ್ನುವ ಕುತೂಹಲವು ಹೆಚ್ಚಾಗಿದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jul 27, 2026 12:47 PM IST














