Bengaluru: ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್ | bbmp plans to plant 2000 saplings bengaluru | | ACTPnews

Bengaluru: ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್ | bbmp plans to plant 2000 saplings bengaluru |


ಬೆಂಗಳೂರಿನಾದ್ಯಂತ 20,000 ಗಿಡ ನೆಡಲು ಬಿಬಿಎಂಪಿ ಪ್ಲ್ಯಾನ್

ಹೌದು, ಪಾಲಿಕೆಯು ತನ್ನ AI-ಆಧಾರಿತ ಸಾಧನವನ್ನು ಬಳಸಿಕೊಂಡು ಗಿಡ ನೆಡಲು ಸಾಧ್ಯವಾದ ಒಂದಿಷ್ಟು ಸ್ಥಳಗಳನ್ನು ಗುರುತಿಸಿದ್ದು, ನಗರದಾದ್ಯಂತ 20,000 ಸ್ಥಳೀಯ ಮತ್ತು ಔಷಧೀಯ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ನಗರವನ್ನು ಮತ್ತಷ್ಟು ಹಸಿರುಮಗೊಳಿಸಲು ನಗರದಾದ್ಯಂತ ಸುಮಾರು 150 ಸ್ಥಳಗಳನ್ನು ಗುರುತಿಸಿದೆ.

ಸಿವಿಕ್ ಏಜೆನ್ಸಿ ಮ್ಯಾಪಥಾನ್ ಎಂಬ ತನ್ನ AI ಆಧಾರಿತ ಉಪಕರಣದ ಸಹಾಯದಿಂದ ಈ ಸ್ಥಳಗಳನ್ನು ಗುರುತಿಸಿದ್ದು, ಇಲ್ಲಿ ಪಾಲಿಕೆಯ ಅರಣ್ಯೀಕರಣ ಕಾರ್ಯ ನಡೆಯಲಿದೆ.

“ತಂತ್ರಜ್ಞಾನವನ್ನು ಬಳಸಿಕೊಂಡು, ಅರಣ್ಯೀಕರಣವನ್ನು ಕೈಗೊಳ್ಳಲು ನಾವು ನಗರದ ಎಲ್ಲಾ ಎಂಟು ವಲಯಗಳಲ್ಲಿ 145 ಸ್ಥಳಗಳನ್ನು ಗುರುತಿಸಿದ್ದೇವೆ.

ತಪ್ಪು ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಹಾಳುಗೆಡಗುವ ಬದಲು, ಕಾರ್ಯಸಾಧ್ಯವಾದ ಸ್ಥಳಗಳಲ್ಲಿ ನೆಟ್ಟು ಅವುಗಳನ್ನು ಪೋಷಿಸುವುದು ಉತ್ತಮ.

ಹೀಗಾಗಿ ಅಂತಹ ಸ್ಥಳಗಳನ್ನು ಪತ್ತೆಹಚ್ಚಲಾಗಿದೆ” ಎಂದು ಬಿಬಿಎಂಪಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ತಿಳಿಸಿದರು.

ಜೊತೆಗೆ ಗುರುತಿಸಿದ ಜಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಬಹುದು ಎಂದು ಅವರು ತಿಳಿಸಿದರು.

ಸ್ಥಳಗಳನ್ನು ಹೇಗೆ ಆಯ್ಕೆ ಮಾಡಲಾಗಿದೆ?

ಉಪಗ್ರಹ ಆಧಾರಿತ ಚಿತ್ರಣದ ಸಹಾಯದಿಂದ ಮ್ಯಾಪಥಾನ್ ಈ ಸ್ಥಳಗಳನ್ನು ಗುರುತಿಸಿದೆ. ಬಿಬಿಎಂಪಿ ಮೇ 2023 ರಲ್ಲಿ ತನ್ನ ಪರಿಹಾರದ ಅರಣ್ಯೀಕರಣ ಗುರಿಗಳನ್ನು ಪೂರೈಸಲು ಮ್ಯಾಪಥಾನ್ ಅನ್ನು ಪ್ರಾರಂಭಿಸಿತು.

ಮ್ಯಾಪಥಾನ್ ಅನ್ನೋದು AI ಸಾಧನವಾಗಿದ್ದು, ಖಾಲಿ ಜಮೀನುಗಳನ್ನು ಪತ್ತೆ ಹಚ್ಚಲು ಪ್ರಾದೇಶಿಕ ಮ್ಯಾಪಿಂಗ್ ಅನ್ನು ಬಳಸುತ್ತದೆ. ಇದರ ನಂತರ ಸ್ವಯಂಸೇವಕರು ಅಥವಾ ನಾಗರಿಕರ ಭಾಗವಹಿಸುವಿಕೆಯ ಸಹಾಯದಿಂದ ಆನ್-ಗ್ರೌಂಡ್ ಪರಿಶೀಲನೆ ಮಾಡಲಾಗುತ್ತದೆ.

ಈ ಉಪಕ್ರಮವು ಬೆಂಗಳೂರು ಕ್ಲೈಮೇಟ್ ಆ್ಯಕ್ಷನ್ ಸೆಲ್‌ನ ಭಾಗವಾಗಿದ್ದು, ಅದರಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

“ಒಂದೊಮ್ಮೆ ಆ ಗುರುತಿಸಿದ ಜಾಗ ಖಾಸಗಿ ಆಸ್ತಿ ಎಂದಾದರೆ, ನಾವು ಮಾಲೀಕರನ್ನು ಸಂಪರ್ಕಿಸುತ್ತೇವೆ ಮತ್ತು ಭವಿಷ್ಯದಲ್ಲಿ ಜಾಗವನ್ನು ಬಳಸಲು ಪ್ರಾರಂಭಿಸಲು ಬಯಸಿದರೆ ಮರಗಳನ್ನು ತೆಗೆದುಹಾಕಲಾಗುವುದು ಎಂಬ ಭರವಸೆಯೊಂದಿಗೆ ನಾವು ಅವರೊಂದಿಗೆ ಸಹಕರಿಸುತ್ತೇವೆ” ಎಂದು ಸ್ವಾಮಿ ಹೇಳಿದರು.

ಯಾವ ರೀತಿಯ ಸಸಿಗಳನ್ನು ನೆಡಲಾಗುತ್ತದೆ?

ಮ್ಯಾಪಥಾನ್ ಅಡಿಯಲ್ಲಿ, ಹೂಬಿಡುವ ಮತ್ತು ಹಣ್ಣಿನ ಮರಗಳ ಬದಲಿಗೆ ಸ್ಥಳೀಯ ಮತ್ತು ಔಷಧೀಯ ಸಸ್ಯ ಪ್ರಭೇದಗಳನ್ನು ನೆಡಲಾಗುತ್ತದೆ. ಸಸಿಗಳ ಬದುಕುಳಿಯುವಿಕೆಯ ಪ್ರಮಾಣವನ್ನು ಸುಧಾರಿಸಲು, ಆರಂಭಿಕ ಹಂತದಲ್ಲಿ ಅವುಗಳನ್ನು ನೆಡದಿರಲು ಬಿಬಿಎಂಪಿ ನಿರ್ಧರಿಸಿದೆ.

ಈ ಕ್ರಮವು ಸಸಿಗಳ ಬದುಕುಳಿಯುವ ಅವಕಾಶವನ್ನು ಸುಧಾರಿಸುವುದಾಗಿದೆ ಎಂದು ಅಧಿಕಾರಿಯು ತಮ್ಮ ಕ್ರಮದ ಬಗ್ಗೆ ವಿವರಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed