Ravichandran: ಕ್ರೇಜಿ ಸ್ಟಾರ್ ಕ್ರೇಜಿ ಜರ್ನಿ; ಹೊಸ ಹಿಂಟ್ ಕೊಟ್ಟ ಕನಸುಗಾರ! | | ACTPnews

crazy star ravichandran share new promo on social media


ಕ್ರೇಜಿ ಜರ್ನಿ….

ರವಿಚಂದ್ರನ್ ಹೊಸದನ್ನೆ ಯೋಚನೆ ಮಾಡುತ್ತಾರೆ. ಪ್ರತಿ ದಿನವೂ ಅಪ್‌ಡೇಟ್ ಕೂಡ ಆಗ್ತಾ ಇರ್ತಾರೆ. ಹೊಸ ಗೆಜೆಟ್‌ಗಳನ್ನು ಉಪಯೋಗಿಸುತ್ತಾರೆ. Gen-z ಗಳ ಮನಸ್ಥಿತಿ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳುತ್ತಾರೆ.
ಇಲ್ಲೂ ಎರಡು ಪಾರಿವಾಳ

(ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್)

ಹಾಗೆ ಇವರ 65 ಜನ್ಮ ದಿನವೂ ಬಂದಿದೆ. ಮೇ-30 ಇವರ ಹುಟ್ಟಿದ ದಿನವ ಆಗಿದೆ. ಈ ದಿನದ ಹಿಂದಿನ ದಿನವೇ ರವಿಚಂದ್ರನ್ ಒಂದು ಪ್ರೋಮೋ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿದೆ.

ಅಜ್ಜ-ಅಜ್ಜಿ ಟು Gen-z

ಈ ಒಂದು ಪ್ರೋಮೋದ ಜೊತೆಗೆ ಒಂದಷ್ಟು ಬರೆದುಕೊಂಡಿರೋದು ಇದೆ. ಅದು ಈ ರೀತಿ ಇದೆ. “Something Crazy is Coming..From Ajja Ajji to Gen-z… Stay Tune on Magical Musical Mircale Offical Music label” ಅಂತಲೇ ಇದೆ.

ಇದನ್ನ ಅರ್ಥ ಮಾಡಿಕೊಂಡರೆ, ಇದು ಮ್ಯೂಸಿಕ್ ಕಂಪನಿಯ ವಿಚಾರ ಅನಿಸುತ್ತದೆ. ಇದರಲ್ಲಿ ಹೇಳಿರೋ ಸಾಲುಗಳು ಅಷ್ಟೆ ಗಮನ ಸೆಳೆಯುತ್ತವೆ.

MMM ಕ್ರೇಜಿ ಅಂದ್ರೇನು

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಈ ಮೂರು “M” ಗಳಿಗೆ ತಮ್ಮದೇ ಒಂದು ಅರ್ಥ ಕೊಟ್ಟಿದ್ದಾರೆ. MMM ಕ್ರೇಜ್ ಅಂತಲೂ ಬರೆದಿದ್ದಾರೆ.

ಮ್ಯಾಜಿಕಲ್, ಮ್ಯೂಸಿಕಲ್ , ಮಿರಾಕಲ್ ಅಂತಲೇ ಇದನ್ನ ವಿವರಿಸಿದ್ದಾರೆ. ನಮ್ಮ ಹೊಸ ಮ್ಯೂಸಿಕಲ್ ಐಡೆಂಟಿಟಿ ಅನ್ನ ಪರಿಚಯಿಸುತ್ತಿದ್ದೇವೆ ಅಂತಲೂ ಹೇಳಿದ್ದಾರೆ.

crazy star ravichandran share new promo on social media

MMM ಕ್ರೇಜಿ ಅಂದ್ರೇನು

(ಚಿತ್ರ ಕೃಪೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಇನ್‌ಸ್ಟಾಗ್ರಾಮ್)

ಪ್ರೋಮೋದಲ್ಲಿ ಇರೋದೇನು

ರವಿಚಂದ್ರನ್ ಅವರು ಹಂಚಿಕೊಂಡ ಈ ಪ್ರೋಮೋ ಗಮನ ಸೆಳೆಯುತ್ತದೆ. ರವಿಚಂದ್ರನ್ ಅವರ ಒಂದು ದೃಶ್ಯ ಇದರಲ್ಲಿದೆ. ರವಿಚಂದ್ರನ್ ಅವರ ತಂದೆ ತಾಯಿ ಫೋಟೋ ಕೂಡ ಇದರಲ್ಲಿದೆ.

ಇದರ ಹಿನ್ನೆಲೆಯಲ್ಲಿ ಕ್ರೇಜಿ ಪಯಣ ಮತ್ತು ಕ್ರೇಜಿ ಜರ್ನಿ ಅಂತ ಎರಡು ಸಲ ವಾಯ್ಸ್ ಓವರ್ ಕೊಡಲಾಗಿದೆ. ಎರಡು ಧ್ವನಿಯಲ್ಲೂ ಸಾಕಷ್ಟು ವ್ಯತ್ಯಾಸ ಇವೆ. ಕಾರಣ ಎರಡನ್ನೂ ಇಲ್ಲಿ ಅಷ್ಟೆ ವಿಶೇಷವಾಗಿಯೇ ಹೇಳಲಾಗಿದೆ.

ಇಲ್ಲೂ ಎರಡು ಪಾರಿವಾಳ

ಈ ಒಂದು ಪ್ರೋಮೋದಲ್ಲಿ ಎರಡು ಪಾರಿವಾಳ ಇವೆ. ಆದರೆ, ಇವು ಬಿಳಿ ಬಣ್ಣದ ಪಾರಿವಾಳ ಅಲ್ಲ ಬಿಡಿ. ಬದಲಾಗಿ ಕಾಡು ಪಾರಿವಾಳ ಅಂತೀವಲ್ಲ. ಆ ಪಾರಿವಾಳಗಳೇ ಇಲ್ಲಿ ಕಾಣಿಸುತ್ತವೆ. ಇನ್ನೊಮ್ಮೆ ಇವು ಸಾಕಿರೋ ಪಾರಿವಾಳ ಅನಿಸುತ್ತವೆ.

ಇಡೀ ಈ ಒಂದು ಪ್ರೋಮೋದಲ್ಲಿ ಈ ಪಾರಿವಾಳ ಹಾಗೂ ಮ್ಯಾಜಿಕಲ್,ಮ್ಯೂಸಿಕಲ್, ಮಿರಾಕಲ್ ಅಂತ ಬರೆದಿರೋದು ಗಮನ ಸೆಳಯುತ್ತದೆ. ಇದಕ್ಕೆ ಬಳಕೆ ಮಾಡಿರೋ ಹಿನ್ನೆಲೆ ಧ್ವನಿ ಹಾಗೂ ಮ್ಯೂಸಿಕ್ ಎರಡೂ ಚೆನ್ನಾಗಿವೆ.

ಕ್ರೇಜಿ-ಬ್ರಹ್ಮ ಕಾನ್ಸರ್ಟ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕ್ರೇಜಿ-ಬ್ರಹ್ಮ ಅನ್ನುವ ಒಂದು ಮ್ಯೂಸಿಕಲ್ ಕಾನ್ಸರ್ಟ್ ಮಾಡುತ್ತಿದ್ದಾರೆ. ಹಂಸಲೇಖ ಹಾಗೂ ರವಿಂದ್ರನ್ ತಮ್ಮ ಸುಮಾರು 15 ವರ್ಷದ ಜರ್ನಿಯಲ್ಲಿ ಬಂದ ಹಾಡುಗಳನ್ನ ಇಲ್ಲಿ ಹಾಡಲಾಗುತ್ತಿದೆ.

ಈ ಹಾಡುಗಳು ಹುಟ್ಟಿದ ಹಿಂದಿನ ಕತೆಗಳನ್ನ ಹಂಸಲೇಖ ಹಾಗೂ ರವಿಚಂದ್ರನ್ ಹಂಚಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಜನ್ಮ ದಿನ ಮೇ-30 ರಂದೇ ಇದು ನಡೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports