Raveena Tandon Movie: ಕನ್ನಡಕ್ಕೆ ಮತ್ತೆ ಕೆಜಿಎಫ್ ನಟಿ, ಈ ಸಲ ಶಿವಣ್ಣನ ಚಿತ್ರದಲ್ಲಿ ಆ್ಯಕ್ಟಿಂಗ್! | | ACTPnews

ಕನ್ನಡಕ್ಕೆ ಮತ್ತೆ ಬಂದ ರವೀನಾ ಟಂಡನ್(ಚಿತ್ರ ಕೃಪೆ: ರವೀನಾ ಟಂಡನ್ ಇನ್​ಸ್ಟಾಗ್ರಾಮ್)


Last Updated:

ಶಿವರಾಜ್ ಕುಮಾರ್ ಅವರ ಎ ಆಫರ್ ಆನಂದ್ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಕೆಜಿಎಫ್ ಚಿತ್ರದ ಬಳಿಕ ರವೀನಾ ಟಂಡನ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರ ಪಾತ್ರ ಹೇಗಿದೆ ಅನ್ನೋದರ ಸಣ್ಣ ಝಲಕ್ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.

ಕನ್ನಡಕ್ಕೆ ಮತ್ತೆ ಬಂದ ರವೀನಾ ಟಂಡನ್(ಚಿತ್ರ ಕೃಪೆ: ರವೀನಾ ಟಂಡನ್ ಇನ್​ಸ್ಟಾಗ್ರಾಮ್)
ಕನ್ನಡಕ್ಕೆ ಮತ್ತೆ ಬಂದ ರವೀನಾ ಟಂಡನ್(ಚಿತ್ರ ಕೃಪೆ: ರವೀನಾ ಟಂಡನ್ ಇನ್​ಸ್ಟಾಗ್ರಾಮ್)

ಕೆಜಿಎಫ್ ಚಿತ್ರದ (KGF Movie) ರಮಿಕಾ ಸೆನ್ ರವೀನಾ ಟಂಡನ್ (Raveena Tandon) ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಸಲ ಶಿವಣ್ಣನ ಚಿತ್ರಕ್ಕಾಗಿಯೇ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಇವರು ಟೀಚರ್ ಆಗಿದ್ದಾರೆ. ಇವರ ಲುಕ್ ಮತ್ತು ಫೀಲ್ ಹೇಗೆ ಇರುತ್ತದೆ ಅನ್ನೋದು ಗೊತ್ತಾಗಿದೆ. ಸಿನಿಮಾ ತಂಡವೇ ಈ ಒಂದು ಮಾಹಿತಿಯನ್ನ ಅಧಿಕೃತವಾಗಿಯೇ ಕೊಟ್ಟಿದೆ. ಘೋಸ್ಟ್ ಡೈರೆಕ್ಟರ್ ಶ್ರೀನಿ (Srini Direction) ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಶಿವಣ್ಣ (Shivanna) ಕೂಡ ರೆಡಿ ಆಗಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಕನ್ನಡಕ್ಕೆ ಮತ್ತೆ ಬಂದ…

ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಚಿತ್ರ ಒಪ್ಪಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಇವರು ರಮಿಕಾ ಸೆನ್ ಪಾತ್ರ ಮಾಡಿದ್ದಾರೆ. ಈ ದೇಶದ ಪ್ರಧಾನಿಯ ಪಾತ್ರವೇ ಇದಾಗಿದೆ.

Shiva Rajkumar Raveena Tandon A For Anand Movie Shooting Updates

ಕನ್ನಡಕ್ಕೆ ಮತ್ತೆ ಬಂದ ರವೀನಾ ಟಂಡನ್
(ಚಿತ್ರ ಕೃಪೆ: ರವೀನಾ ಟಂಡನ್ ಇನ್​ಸ್ಟಾಗ್ರಾಮ್)

ಈ ಚಿತ್ರ ಆದ್ಮೇಲೆ ಕನ್ನಡದ ಬೇರೆ ಚಿತ್ರ ಮಾಡಿರಲಿಲ್ಲ. ಆದರೆ, ಈಗ ಡೈರೆಕ್ಟರ್ ಶ್ರೀನಿ ಅವರ ಎ ಫಾರ್ ಆನಂದ್ ಚಿತ್ರವನ್ನ ಮಾಡ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯ ಬೆಂಗಳೂರಿನಲ್ಲಿ ನಡೀತಿದೆ.

ರವೀನಾ ವಿಡಿಯೋ

ರವೀನಾ ಟಂಡನ್ ಬಂದಿರೋ ವಿಡಿಯೋವನ್ನ ಚಿತ್ರ ತಂಡ ಹಂಚಿಕೊಂಡಿದೆ. ಇದರಲ್ಲಿ ರವೀನಾ ಅವರನ್ನ ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ತೋರಿಸಿದ್ದಾರೆ.

ಕ್ಯಾರವಾನ್‌ನಿಂದ ಹೊರಗೆ ಬಂದ್ಮೇಲೆ ಇವರ ಲುಕ್ ಆ್ಯಂಡ್ ಫೀಲ್ ಎರಡೂ ಚೇಂಜ್ ಆಗುತ್ತದೆ. ಚೆಂದದ ಸೀರೆಯುಟ್ಟು ಹೊರಗೆ ಬರ್ತಾರೆ. ಅಲ್ಲಿಂದ ನೇರವಾಗಿ ವೇದಿಕೆಗೆ ಹೋಗ್ತಾರೆ. ಅಲ್ಲಿ ಇವರಿಗೆ ವಿಶೇಷ ಸ್ವಾಗತ ಸಿಗುತ್ತದೆ.

Shiva Rajkumar Raveena Tandon A For Anand Movie Shooting Updates

ಎ ಫಾರ್ ಆನಂದ್ ಸಿನಿಮಾ
(ಚಿತ್ರ ಕೃಪೆ: ಶ್ರೀನಿ ಇನ್‌ಸ್ಟಾಗ್ರಾಮ್)
ಎ ಫಾರ್ ಆನಂದ್ ಸಿನಿಮಾ

ಎ ಫಾರ್ ಆನಂದ್ ಚಿತ್ರದಲ್ಲಿಯೇ ರವೀನಾ ಟೀಚರ್ ಪಾತ್ರ ಮಾಡಿದ್ದಾರೆ. ಈ ಮಾಹಿತಿಯನ್ನ ಚಿತ್ರ ತಂಡವೇ ಕೊಟ್ಟಿದೆ. ಹಾಗೆ ಎ ಫಾರ್ ಆನಂದ್ ಸಿನಿಮಾದಲ್ಲಿ ಶಿವಣ್ಣನ ಕೂಡ ಟೀಚರ್ ಪಾತ್ರವನ್ನೆ ಮಾಡಿದ್ದಾರೆ.

ಗೀತಾ ಪಿಕ್ಚರ್ಸ್ ಮೂಲಕ ಬರ್ತಿರೋ ಮತ್ತೊಮದು ಚಿತ್ರ ಇದಾಗಿದೆ. ಮಕ್ಕಳ ಚಿತ್ರವೇ ಇದಾಗಿದೆ. ಆದರೆ, ಇದನ್ನ ಡೈರೆಕ್ಟರ್ ಶ್ರೀನಿ ವಿಭಿನ್ನವಾಗಿಯೇ ಹೇಳ್ತಿದ್ದಾರೆ. ಇದರ ಝಲಕ್ ಸಿನಿಮಾದ ಪೋಸ್ಟರ್ ಅಲ್ಲಿಯೇ ತಿಳಿಯುತ್ತದೆ.

ಬೇಲ್ ಖುಷಿ….

ಶಿವರಾಜ್ ಕುಮಾರ್ ಅವರು ಬೇಲ್ ಚಿತ್ರದ ಖುಷಿ ಅಲ್ಲಿಯೇ ಇದ್ದಾರೆ. ಚಿತ್ರವನ್ನ ಜನ ಚೆನ್ನಾಗಿಯೇ ತೆಗೆದುಕೊಂಡಿದ್ದಾರೆ. ಈ ಚಿತ್ರದ ಥಿಯೇಟರ್ ವಿಸಿಟ್ ಮುಗಿಸಿದ ಶಿವಣ್ಣ, ಸದ್ಯ ಎ ಫಾರ್ ಆನಂದ್ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

Shiva Rajkumar Raveena Tandon A For Anand Movie Shooting Updates

ಈ ಸಲ ಶಿವಣ್ಣನ ಚಿತ್ರದಲ್ಲಿ ಆ್ಯಕ್ಟಿಂಗ್
(ಚಿತ್ರ ಕೃಪೆ: ರವೀನಾ ಟಂಡನ್ ಇನ್​ಸ್ಟಾಗ್ರಾಮ್)

ಈ ಚಿತ್ರದ ಮುಂಚೆ ಶಿವಣ್ಣ ಡೈರೆಕ್ಟರ್ ಶ್ರೀನಿ ಜೊತೆಗೆ ಒಂದು ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಘೋಸ್ಟ್ ಅನ್ನುವ ಹೆಸರಿತ್ತು. ಇದು ಸೂಪರ್ ಹಿಟ್ ಕೂಡ ಆಯಿತು.

ಘೋಸ್ಟ್ ಬಳಿಕ…

ಘೋಸ್ಟ್ ಚಿತ್ರದ ಬಳಿಕವೇ ಡೈರೆಕ್ಟರ್ ಶ್ರೀನಿ ಈ ಚಿತ್ರ ಮಾಡುತ್ತಿದ್ದಾರೆ. ಎ ಫಾರ್ ಆನಂದ್ ಅನ್ನುವ ಚೆಂದದ ಟೈಟಲ್ ಇಟ್ಟಿದ್ದಾರೆ.

ಈ ಮೂಲಕ ಶಿವಣ್ಣ ಹೊಸ ರೀತಿನೇ ಬರ್ತಿದ್ದಾರೆ. ಶ್ರೀನಿ ಕೂಡ ಹೊಸ ರೀತಿಯ ಕತೆಯನ್ನೆ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಶೂಟಿಂಗ್ ಈಗ ಶುರು ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed