Rashmika Mandanna: ಸೈಲೆಂಟ್ ರಶ್ಮಿಕಾ ಮದುವೆ ಬಳಿಕ ತುಂಟಿ ಆದರೇ; ವೇದಿಕೆ ಮೇಲೇನೆ ‘ಆ’ ಪದ ಬಳಕೆ ಮಾಡಿದ್ಯಾಕೆ? | | ACTPnews

ವೇದಿಕೆ ಮೇಲೇನೆ "ಆ" ಪದ ಬಳಕೆ ಮಾಡಿದ್ಯಾಕೆ?


Last Updated:

ರಶ್ಮಿಕಾ ಮಂದಣ್ಣ ಮದುವೆ ಆದ್ಮೇಲೆ ತುಂಟಿ ಆದ್ರೇ? ಕಾಕ್‌ಟೇಲ್-2 ಸಿನಿಮಾ ಇವೆಂಟ್ ಅಲ್ಲಿಯೇ ಓಪನ್ ಆಗಿಯೇ ಕೆಟ್ಟ ಪದ ಬಳಕೆ ಮಾಡಿರೋದು ಯಾಕೆ? ಆ ವೈರಲ್ ವಿಡಿಯೋದಲ್ಲಿ ಏನಿದೆ? ವಿವರ ಮುಂದೆ ಇದೆ ಓದಿ.

ವೇದಿಕೆ ಮೇಲೇನೆ "ಆ" ಪದ ಬಳಕೆ ಮಾಡಿದ್ಯಾಕೆ?
ವೇದಿಕೆ ಮೇಲೇನೆ “ಆ” ಪದ ಬಳಕೆ ಮಾಡಿದ್ಯಾಕೆ?

ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆದ್ಮೇಲೆ ಬೋಲ್ಡ್ ಆದ್ರೇ? ಅಥವಾ ಮದುವೆ ಮೊದಲು ಆಫ್ ಸ್ಕ್ರೀನ್ ಹೀಗೇ ಇದ್ರೇ ? ಈ ಪ್ರಶ್ನೆ ಈಗ ಕಾಡುತ್ತಿದೆ. ಯಾಕೆಂದ್ರೆ ಮಾಧ್ಯಮಗಳ ಕ್ಯಾಮರಾ ಮುಂದೆ ರಶ್ಮಿಕಾ ಮಂದಣ್ಣ “F” ಅನ್ನುವ ಪದ ಬಳಕೆ ಮಾಡಿದ್ದಾರೆ. ಇದು ಅರ್ಥ ಆದ್ಮೇಲೆ ಇದನ್ನ ಮ್ಯೂಟ್ ಮಾಡಿ ಅಂತಲೂ ಹೇಳಿದ್ದಾರೆ. ಇದೊಂದು ಘಟನೆ ಆದರೆ, ಇದೇ ಸ್ಟೇಜ್ ಮೇಲೆ ಶಾಹಿತ್ ಕಪೂರ್ (Shahid Kapoor) ರಶ್ಮಿಕಾ (Rashmika) ಭುಜದ ಮೇಲೆ ಕೈಹಾಕಲು ಮುಂದಾಗ್ತಾರೆ. ಆದರೆ, ರಶ್ಮಿಕಾ ಆ ಕೂಡಲೇ ಅದನ್ನ ತಡೆಯುತ್ತಾರೆ. ಮರುಕ್ಷಣವೇ ಪಕ್ಕದಲ್ಲಿದ್ದ ಮತ್ತೊಬ್ಬರು ಭುಜದ ಮೇಲೆ ಕೈ ಇಡ್ತಾರೆ. ಆಗ ರಶ್ಮಿಕಾ ಏನೂ ಹೇಳೋದಿಲ್ಲ. ಏನಿದು ಅನ್ನೋ ಪ್ರಶ್ನೆಗಳು ರಶ್ಮಿಕಾ ಅವರ ಸದ್ಯದ ಈ ವರ್ತನೆಯಿಂದಲೇ ಹುಟ್ಟಿಕೊಳ್ಳುತ್ತಿವೆ. ‘ಕಾಕ್‌ಟೇಲ್ 2’ ಚಿತ್ರದ (Cocktail-2 Movie) ಇವೆಂಟ್ ಅಲ್ಲಿ ಇದೆಲ್ಲ ನಡೆದಿದೆ. ಇದರ ಕಂಪ್ಲಿಟ್‌ ವಿವರ ಇಲ್ಲಿದೆ ಓದಿ.

ಸೈಲೆಂಟ್ ರಶ್ಶಿ ತುಂಟಿ ಆದರೇ?

ರಶ್ಮಿಕಾ ಮಂದಣ್ಣ ವೇದಿಕೆ ಮೇಲೆ ಕೆಟ್ಟ ಪದ ಬಳಕೆ ಮಾಡಿರೋದು ಇಲ್ವೇ ಇಲ್ಲ. ಕನ್ನಡದಲ್ಲಿ ಕೆಲಸ ಮಾಡೋವಾಗಲು ಆ ರೀತಿ ಮಾತನಾಡಿರೋದು ಇಲ್ವೇ ಇಲ್ಲ.
rashmika mandanna cocktail-2 movie latest video viral

ವೇದಿಕೆ ಮೇಲೇನೆ “ಆ” ಪದ ಬಳಕೆ ಮಾಡಿದ್ಯಾಕೆ?

(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್)

ಆಫ್ ಸ್ಕ್ರೀನ್ ಕೂಡ ಹಾಗೆ ಮಾತನಾಡಿರೋದು ಇಲ್ವೇ ಇಲ್ಲ. ಆದರೆ, ಸ್ನೇಹಿತರ ವಲಯದಲ್ಲಿ ಆ ರೀತಿ ಮಾತನಾಡುತ್ತಿದ್ದರೋ ಏನೋ. ಆದರೆ, ಸಿನಿಮಾ ಕಾರ್ಯಕ್ರಮದಲ್ಲೋ ಇಲ್ಲ ಸಂದರ್ಶನದಲ್ಲೋ ಮಾತನಾಡಿರೋದು ಇಲ್ವೇ ಇಲ್ಲ. ಆದರೆ, ಮದುವೆ ಬಳಿಕ ರಶ್ಮಿಕಾ ಕೆಟ್ಟ ಪದ ಬಳಕೆ ಮಾಡಿದ್ದಾರೆ.

ಕೃತಿ ಹೊಗಳೋ ಭರದಲ್ಲಿ…

ನಟಿ ಕೃತಿ ಸೆನೋನ್ ಜೊತೆಗೆ ರಶ್ಮಿಕಾ ಸ್ನೇಹ ಚೆನ್ನಾಗಿದೆ. ‘ಕಾಕ್‌ಟೇಲ್ 2’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ಶಾಹಿದ್ ಕಪೂರ್ ಸಹ ಈ ಸಿನಿಮಾದಲ್ಲಿದ್ದಾರೆ.

ಈ ಮೂವರು ಇರೋ ಸಿನಿಮಾದ ಸಾಂಗ್ ರಿಲೀಸ್ ಇವೆಂಟ್ ಇತ್ತೀಚಿಗೆ ನಡೆದಿದೆ. ಇದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಾತನಾಡ್ತಾನೇ ಹೋಗಿದ್ದಾರೆ. ಕೃತಿ ಸೆನೋನ್ ಬಗ್ಗೆನೂ ಹೇಳ್ತಾ ಹೋಗ್ತಾರೆ.

rashmika mandanna cocktail-2 movie latest video viral

ಸೈಲೆಂಟ್ ರಶ್ಸಿ ಮದುವೆ ಬಳಿಕ ತುಂಟಿ ಆದರೇ

(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್)

ಕೆಟ್ಟಪದ ಬಳಕೆ…

ಇದೇ ಸಮಯದಲ್ಲಿಯೇ ನೀವು ಹಾಟ್ ಆಗಿದ್ದೀರಾ. ಇದು ಜಗತ್ತಿಗೇನೆ ಗೊತ್ತೇ ಇದೆ. ಹಾಗೆ ನೀವು “F” ಹಾಟ್ ಆಗಿದ್ದೀರಿ ಅಂತಲು ಹೇಳ್ತಾರೆ.

ವಿಡಿಯೋ ವೈರಲ್

ಈ ಮಾತಿನ ವಿಡಿಯೋ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಹೀಗೆಲ್ಲ ಮಾತನಾಡಿದ್ದಾರೆ ಅನ್ನೋದೇ ಹೈಲೈಟ್ ಆಗಿದೆ. ಇದೇ ರೀತಿ ಇನ್ನೂ ಒಂದು ವಿಡಿಯೋ ಕೂಡ ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ, ಕೃತಿ ಸೆನೋನ್ , ಶಾಹಿದ್ ಕಪೂರ್ ವೇದಿಕೆ ಮೇಲೆ ನಿಂತಿದ್ದಾರೆ. ಆದರೆ, ಇದೇ ಸಮಯದಲ್ಲಿ ಶಾಹಿದ್ ಕಪೂರ್ ಪಕ್ಕದಲ್ಲಿ ನಿಂತ ರಶ್ಮಿಕಾ ಭುಜದ ಮೇಲೆ ಕೈ ಹಾಕಲು ಮುಂದಾಗುತ್ತಾರೆ.

ಆದರೆ, ರಶ್ಮಿಕಾ ಮಂದಣ್ಣ ಸಹಿಸಿಕೊಳ್ಳುವುದಿಲ್ಲ, ತಡೆಯುತ್ತಾರೆ. ಆದರೆ, ಇದೇ ವೇದಿಕೆ ಮೇಲೆ ಚಿತ್ರ ತಂಡದ ಮತ್ತೊಬ್ಬ ಸದಸ್ಯ ಇರ್ತಾರೆ. ಅವರು ರಶ್ಮಿಕಾ ಭುಜದ ಮೇಲೆ ಕೈಹಾಕುತ್ತಾರೆ. ಆಗ ರಶ್ಮಿಕಾ ಮಂದಣ್ಣ ಸುಮ್ನೆ ಇರ್ತಾರೆ. ಈ ಕಾರಣಕ್ಕೇನೆ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed