Last Updated:
ಪನೀರ್‌ನಲ್ಲಿ ಶವಾಗಾರಗಳಲ್ಲಿ ಬಳಸುವ ಫಾರ್ಮಾಲಿನ್ ರಾಸಾಯನಿಕ ಪತ್ತೆ. ಜೀನೋಮಿಕ್ಸ್ ಬಯೋಲ್ಯಾಬ್ ವರದಿ ಪ್ರಕಾರ, ಇದು ಕ್ಯಾನ್ಸರ್, ಯಕೃತ್ತು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.
ನವದೆಹಲಿ(ಆ.21): ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿ ತಿನ್ನೋ ಪನೀರ್‌ನಲ್ಲಿ ಆಸ್ಪತ್ರೆಯ ಶವಾಗಾರಗಳಲ್ಲಿ ಮೃತದೇಹಗಳು ಕೊಳೆಯದಂತೆ ತಡೆಯಲು ಬಳಸುವ ಅದೇ ಅಪಾಯಕಾರಿ ರಾಸಾಯನಿಕ ಇರಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಲ್ಯಾಬ್ ಟೆಸ್ಟ್ ವರದಿಯೊಂದು ಮನುಷ್ಯರು ಲಾಭದ ಆಸೆಗಾಗಿ ಅದೆಷ್ಟು ಸ್ವಾರ್ಥಿಗಳಾಗಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿದೆ.














