Ranji Trophy: 39ಕ್ಕೆ5 ವಿಕೆಟ್! ಎರಡು ವರ್ಷಗಳ ಬಳಿಕ ರೆಡ್ ಬಾಲ್ ಕ್ರಿಕೆಟ್‌ಗೆ ಮರಳಿದ ರೋಹಿತ್ ಭರ್ಜರಿ ಪ್ರದರ್ಶನ | ಕ್ರೀಡಾ ಸುದ್ದಿ | ACTPnews

ರೋಹಿತ್ ಶರ್ಮಾ

[ad_1]

Last Updated:

ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವು ಮಧ್ಯಪ್ರದೇಶದ ಮೊದಲ ಇನಿಂಗ್ಸ್ ಅನ್ನು 196 ರನ್‌ಗಳಿಗೆ ಕಟ್ಟಿಹಾಕಿತು. ರೋಹಿತ್ ಶರ್ಮಾ 5 ವಿಕೆಟ್ ಪಡೆದು ಮಿಂಚಿದರು.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಹಿಮ್ಮಡಿ ಮೂಳೆ ಮುರಿತ ಹಾಗೂ ಪದೇ ಪದೇ ಎದುರಾದ ಗಾಯದ ಸಮಸ್ಯೆಯಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ದೂರವಿದ್ದ ಜಮ್ಮು ಮತ್ತು ಕಾಶ್ಮೀರದ (Jammu and Kashmir) ವೇಗದ ಬೌಲರ್ ರೋಹಿತ್ ಶರ್ಮಾ (Rohit Sharma) ರಣಜಿ ಟ್ರೋಫಿಯಲ್ಲಿ (Ranji Trophy) ಅದ್ಭುತವಾಗಿ ಪುನರಾಗಮನ ಮಾಡಿದ್ದಾರೆ. ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ 21.2 ಓವರ್‌ಗಳಲ್ಲಿ ಕೇವಲ 36 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ರೋಹಿತ್‌ಗೆ ಈ ಪ್ರದರ್ಶನ ಸುದೀರ್ಘ ಹೋರಾಟದ ನಂತರ ಸಿಕ್ಕ ಹೊಸ ಆರಂಭವಾಗಿದೆ.

ಮಾರಕ ದಾಳಿ ನಡೆಸಿದ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ

ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎ ಪಂದ್ಯದ ಮೊದಲ ದಿನವಾದ ಅಕ್ಟೋಬರ್ 11, 2026 ರಂದು ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವು ಮಧ್ಯಪ್ರದೇಶದ ಮೊದಲ ಇನಿಂಗ್ಸ್ ಅನ್ನು 196 ರನ್‌ಗಳಿಗೆ ಕಟ್ಟಿಹಾಕಿತು. ಅಕ್ಟೋಬರ್ 2024 ರಲ್ಲಿ ಸರ್ವಿಸಸ್ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನು ಆಡಿದ್ದ ರೋಹಿತ್ ಮಧ್ಯಪ್ರದೇಶ ತಂಡವನ್ನು 200 ರನ್‌ಗಳ ಒಳಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸುದೀರ್ಘ ಕಾಯುವಿಕೆಯ ನಂತರ ಅದ್ಭುತ ಕಮ್​ಬ್ಯಾಕ್

ಮಧ್ಯಪ್ರದೇಶದ ವಿರುದ್ಧ ಐದು ವಿಕೆಟ್ ಪಡೆದ ನಂತರ ರೋಹಿತ್ ಶರ್ಮಾ ಮೈದಾನದಿಂದ ಹೊರಬಂದಾಗ, ಅವರ ಮುಖದಲ್ಲಿ ಸುದೀರ್ಘ ಕಾಯುವಿಕೆಯ ಅಂತ್ಯ ಹಾಗೂ ವೃತ್ತಿಜೀವನದ ಹೊಸ ಅಧ್ಯಾಯದ ಸಂತಸವಿತ್ತು. ಅಕಿಲಿಸ್ ಟೆಂಡನ್ ಗಾಯ ಮತ್ತು ಹಿಮ್ಮಡಿ ಮೂಳೆ ಮುರಿತದಿಂದಾಗಿ ಅವರ ಕ್ರಿಕೆಟ್ ವೃತ್ತಿಜೀವನವೇ ಕೊನೆಗೊಳ್ಳುವ ಆತಂಕ ಎದುರಾಗಿತ್ತು. ಚಿಕಿತ್ಸೆ ಪಡೆದು ಮೈದಾನಕ್ಕೆ ಮರಳಿದ ಬಳಿಕ, ಸುಮಾರು ಎರಡು ವರ್ಷಗಳ ಹಿಂದೆ ಅದೇ ಭಾಗಕ್ಕೆ ಮತ್ತೆ ಗಾಯವಾಗಿತ್ತು. ಇದರಿಂದಾಗಿ ಅವರು ಸುದೀರ್ಘ ಪುನರ್ವಸತಿ (Rehabilitation) ಪ್ರಕ್ರಿಯೆಗೆ ಒಳಗಾಗಬೇಕಾಯಿತು. ಇದೇ ಕಾರಣದಿಂದಾಗಿ ಅವರು ಅಕ್ಟೋಬರ್ 2015 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೂ, 11 ವರ್ಷಗಳಲ್ಲಿ ಕೇವಲ 22 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಗಿದೆ.

ಮಾನಸಿಕವಾಗಿ ಹೋರಾಟವಾಗಿತ್ತು

ಕಮ್​ಬ್ಯಾಕ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ಇದು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಮಾನಸಿಕ ಹೋರಾಟವಾಗಿತ್ತು. ನೀವು ಆಡಲು ಬಯಸುತ್ತಿದ್ದೀರಿ, ಆದರೆ ನಿಮ್ಮ ದೇಹವು ಅದಕ್ಕೆ ಅನುಮತಿ ನೀಡುವುದಿಲ್ಲ ಎಂದರೆ ಅದು ಅತ್ಯಂತ ಸವಾಲಿನ ಸಂಗತಿ” ಎಂದಿದ್ದಾರೆ. ಕ್ರಿಕೆಟ್‌ನಿಂದ ದೂರವಿದ್ದ ಸಮಯದಲ್ಲಿ ಅವರು ತಮ್ಮ ಫಿಟ್‌ನೆಸ್ ಮತ್ತು ಬೌಲಿಂಗ್ ಸುಧಾರಣೆಯ ಕಡೆಗೆ ಗಮನ ಹರಿಸಿದರು. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (JKCA) ಕೂಡ ಪುನರ್ವಸತಿ ಅವಧಿಯಲ್ಲಿ ಅವರನ್ನು ತಂಡದೊಂದಿಗೆ ಉಳಿಸಿಕೊಂಡು ಬೆಂಬಲ ನೀಡಿತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಅವರು ತಮ್ಮ ಸರ್ಜನ್‌ಗೆ, “ಸರ್, ನಾನು ಮತ್ತೆ ಕ್ರಿಕೆಟ್ ಆಡಬೇಕು. ನನ್ನ ಕಾಲಿಗೆ ನೀವು ಏನಾದರೂ ಮಾಡಿ, ಆದರೆ ನಾನು ಕ್ರಿಕೆಟ್‌ಗೆ ಮರಳುವಂತೆ ಮಾಡಿ” ಎಂದು ಕೇಳಿಕೊಂಡಿದ್ದೆ ಎಂದು ತಿಳಿಸಿದ್ದಾರೆ.

ಬ್ಯಾಟಿಂಗ್​​ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೀನಾಯ ಪ್ರದರ್ಶನ

ಅದ್ಭುತ ಬೌಲಿಂಗ್ ಮೂಲಕ ಮಧ್ಯಪ್ರದೇಶ ತಂಡವನ್ನು 190ಕ್ಕೆ ಕಟ್ಟಿಹಾಕಿದ ಜಮ್ಮು ಮತ್ತು ಕಾಶ್ಮೀರ ಬ್ಯಾಟಿಂಗ್​​ನಲ್ಲಿ ದಯನೀಯ ವೈಫಲ್ಯ ಅನುಭವಿಸಿತು. ಮಧ್ಯಪ್ರದೇಶದ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 120 ರನ್​ಗಳಿಗೆ ನಿರ್ಗಮಿಸಿತು. ಇಡೀ ತಂಡದಲ್ಲಿ ನಾಲ್ವರು ಮಾತ್ರ ಎರಡಂಕಿ ಮೊತ್ತ ದಾಟಿಸಿದರು. ಕಮ್ರಾನ್ ಅಕ್ಮಲ್ 31, ಶುಭಮ್ ಪಂಡಿರ್ 20, ಅದ್ಬುಲ್ ಸಮದ್ 17 ಹಾಗೂ ಕನ್ಹಯ್ಯಾ ವಾಧವನ್ 35 ರನ್​ಗಳಿಸಿದರು. ಉಳಿದವರೆಲ್ಲಾ ಒಂದಂಕಿ ಮೊತ್ತಕ್ಕೆ ಸೀಮಿತವಾದರು.

ಮಧ್ಯಪ್ರದೇಶದ ಪರ ಆರ್ಯನ್ ಪಾಂಡೆ 29ಕ್ಕೆ 3, ಆವೇಶ್ ಖಾನ್ 44ಕ್ಕೆ 3, ಅಕ್ಷಯ್ ಶರ್ಮಾ 18ಕ್ಕೆ 2 ಹಾಗೂ ರವಿ ಖಾನ್ 23ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed