Ranji Trophy: ಕಿವೀಸ್ ಪ್ರವಾಸಕ್ಕೆ ಕಡೆಗಣನೆ! ರಣಜಿ ಆರಂಭದ ದಿನವೇ 4 ವಿಕೆಟ್ ಪಡೆದು ಸೆಲೆಕ್ಟರ್ಸ್‌ಗೆ ಸಂದೇಶ ರವಾನಿಸಿದ ಸ್ಟಾರ್ ವೇಗಿ | ಕ್ರೀಡಾ ಸುದ್ದಿ | ACTPnews

ಮೊಹಮ್ಮದ್ ಶಮಿ


Last Updated:

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಬೆಂಗಾಲ್ ಪರ ಕಣಕ್ಕಿಳಿದ  ಟೀಮ್ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಕೇವಲ 30 ರನ್‌ಗಳಿಗೆ 4 ವಿಕೆಟ್ ಕಡಿಯುವ ಮೂಲಕ ದೆಹಲಿ ತಂಡವನ್ನು 240 ರನ್‌ಗಳಿಗೆ ಆಲೌಟ್ ಮಾಡಲು ಪ್ರಮುಖ ಕಾರಣರಾಗಿದ್ದಾರೆ.

 ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಭಾನುವಾರದಿಂದ ರಣಜಿ 2026-27ರ ಆವೃತ್ತಿಯ ಮೊದಲ ಸುತ್ತಿನ ಪಂದ್ಯಗಳು ಆರಂಭವಾಗಿದೆ. ಗ್ರೂಪ್ ಸಿ ರಣಜಿ ಪಂದ್ಯದಲ್ಲಿ ವೆಸ್ಟ್ ಬೆಂಗಾಲ್ ಹಾಗೂ ಡೆಲ್ಲಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬೆಂಗಾಲ್ ತಂಡ, ಪಿಚ್‌ನಲ್ಲಿದ್ದ ಸೀಮಿಂಗ್ ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡಿತು. ಬೆಂಗಾಲ್ ಪರ ಕಣಕ್ಕಿಳಿದ ವೇಗಿ ಮೊಹಮ್ಮದ್ ಶಮಿ 30 ರನ್‌ಗಳಿಗೆ 4 ವಿಕೆಟ್ ಕಡಿಯುವ ಮೂಲಕ ದೆಹಲಿ ತಂಡವನ್ನು 240 ರನ್‌ಗಳಿಗೆ ಆಲೌಟ್ ಮಾಡಲು ಪ್ರಮುಖ ಕಾರಣರಾಗಿದರು. ಶಮಿಗೆ ಸಾಥ್ ನೀಡಿದ ಆಕಾಶ್ ದೀಪ್ 74 ರನ್‌ಗಳಿಗೆ 2 ವಿಕೆಟ್ ಹಾಗೂ ಮುಖೇಶ್ ಕುಮಾರ್ 43 ರನ್‌ಗಳಿಗೆ 1 ವಿಕೆಟ್ ಪಡೆದರೆ, ಆಫ್-ಸ್ಪಿನ್ನರ್ ಅಮೀರ್ ಘನಿ 45 ರನ್‌ಗಳಿಗೆ 3 ವಿಕೆಟ್ ಪಡೆದು ಡೆಲ್ಲಿ ತಂಡವನ್ನ ಅಲ್ಪ ಮೊತ್ತಕ್ಕೆ ಕಡಿವಾಣ ಹಾಕಲು ನೆರವಾದರು.

4 ವಿಕೆಟ್ ಉಡಾಯಿಸಿದ ಶಮಿ

ಅನುಭವಿ ಬೌಲರ್  ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ದೆಹಲಿ ತಂಡದ ಪ್ರಮುಖ ಬ್ಯಾಟರ್‌ಗಳಾದ ಯಶ್ ಧುಲ್, ಆಯುಷ್ ದೋಸೇಜಾ, ಹೃತಿಕ್ ಶೋಕೀನ್ ಮತ್ತು ದಿವಿಜ್ ಮೆಹ್ರಾ ಅವರ ವಿಕೆಟ್ ಉರುಳಿಸಿದರು. ಇದರ ಪರಿಣಾಮವಾಗಿ ದೆಹಲಿ ತಂಡ 77.3 ಓವರ್‌ಗಳಲ್ಲಿ 240 ರನ್‌ಗಳಿಗೆ ಸರ್ವಪತನ ಕಂಡಿತು. ದೆಹಲಿ ಪರ ಹೃತಿಕ್ ಶೋಕೀನ್ (56 ರನ್) ಮತ್ತು ಆಯುಷ್ ದೋಸೇಜಾ (45 ರನ್) ಗರಿಷ್ಠ ಸ್ಕೋರ್ ಎನಿಸಿಕೊಂಡರು.

ಸದ್ಯ ಬಿಸಿಸಿಐ (BCCI), ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ಹೊಸ ಮುಖ್ಯ ಆಯ್ಕೆಗಾರರ ಹುಡುಕಾಟ ನಡೆಸುತ್ತಿದ್ದು, ಪ್ರಸ್ತುತ ಸೌತ್ ಜೋನ್ ಆಯ್ಕೆಗಾರ ಪ್ರಗ್ಯಾನ್ ಓಜಾ ನೇತೃತ್ವದ ಆಯ್ಕೆ ಸಮಿತಿಗೆ ಶಮಿ ತಮ್ಮ ಈ ಪ್ರದರ್ಶನದ ಮೂಲಕ ಬಲವಾದ ಸಂದೇಶ ರವಾನಿಸಿದ್ದಾರೆ. ಇತ್ತೀಚಿನ ಪಿಟಿಐ (PTI) ವರದಿಯ ಪ್ರಕಾರ, ಈ ಹಿಂದೆ ಕೈಬಿಡಲಾದ ಹಿರಿಯ ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಅಗರ್ಕರ್ ಒಲವು ತೋರಿರಲಿಲ್ಲ. ಆದರೆ ಅವರ ನಿರ್ಗಮನದ ನಂತರ, ನಾರ್ತ್ ಜೋನ್ ಆಯ್ಕೆಗಾರ ಆರ್.ಪಿ. ಸಿಂಗ್ ಅವರು ಭುವನೇಶ್ವರ್ ಕುಮಾರ್ ಅವರ ಸೇರ್ಪಡೆಗೆ  ಕಾರಣರಾಗಿದ್ದರು. ಮತ್ತೊಂದೆಡೆ, “ನಾನು ಮತ್ತೊಮ್ಮೆ ಭಾರತ ಪರ ಆಡದಿದ್ದರೆ ಅದು ನನನಾಗುವ ನಷ್ಟವಲ್ಲ” ಎಂದು ಹೇಳುತ್ತಿದ್ದ ಶಮಿ ಇದೀಗ ಪ್ರದರ್ಶನದ ಮೂಲಕ ಪುನರುಚ್ಚರಿಸುತ್ತಿದ್ದಾರೆ.

ಶತಕ ಸಿಡಿಸಿದ ಬ್ಯಾಟರ್ಸ್ 

ಜಾರ್ಖಂಡ್ vs ಕೇರಳ: ಜಮ್ಶೆಡ್‌ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಾರ್ಖಂಡ್ ಆರಂಭಿಕ ಆಟಗಾರ ಶಿಖರ್ ಮೋಹನ್ 196 ಎಸೆತಗಳಲ್ಲಿ 143 ರನ್ (18 ಬೌಂಡರಿ, 2 ಸಿಕ್ಸರ್) ಚಚ್ಚಿ ತಂಡಕ್ಕೆ ನೆರವಾದರು. ಉತ್ಕರ್ಷ್ ಸಿಂಗ್ 71 ರನ್ ಕೊಡುಗೆ ನೀಡಿದರು. ಇದರ ನೆರವಿನಿಂದ ಜಾರ್ಖಂಡ್ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಕೇರಳ ಪರ ವೈಶಾಖ್ ಚಂದ್ರನ್ 3 ವಿಕೆಟ್ ಹಾಗೂ ಜಲಜ್ ಸಕ್ಸೇನಾ 2 ವಿಕೆಟ್ ಪಡೆದರು.

ಮಹಾರಾಷ್ಟ್ರ vs ಸರ್ವಿಸಸ್ 

ನವದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಅಂಕಿತ್ ಬಾವ್ನೆ 232 ಎಸೆತಗಳಲ್ಲಿ 105 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ನಾಯಕ ಪೃಥ್ವಿ ಶಾ 73 ಎಸೆತಗಳಲ್ಲಿ 70 ರನ್‌ಗಳ ಬಿರುಸಿನ ಆರಂಭ ನೀಡಿದರು. ಮೊದಲ ದಿನದ ಅಂತ್ಯಕ್ಕೆ ಮಹಾರಾಷ್ಟ್ರ 5 ವಿಕೆಟ್‌ಗೆ 287 ರನ್ ಗಳಿಸಿದೆ.  ಸರ್ವಿಸಸ್ ಪರ ಅರ್ಜುನ್ ಶರ್ಮಾ 3 ಮತ್ತು ರಾಜ್ ಬಹದ್ದೂರ್ 2 ವಿಕೆಟ್ ಪಡೆದಿದ್ದಾರೆ.

ಒಡಿಶಾ vs ಗುಜರಾತ್ 

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಒಡಿಶಾ ಆರಂಭಿಕ ಬ್ಯಾಟರ್ ಗೌರವ್ ಚೌಧರಿ ಅಜೇಯ 121 ರನ್ (263 ಎಸೆತ) ಗಳಿಸಿ ಮಿಂಚಿದ್ದಾರೆ. ಅವರಿಗೆ ಸಾಥ್ ನೀಡಿದ ಸಂದೀಪ್ ಪಟ್ನಾಯಕ್ ಅಜೇಯ 69 ರನ್ ಗಳಿಸಿದ್ದು, ದಿನದ ಅಂತ್ಯಕ್ಕೆ ಒಡಿಶಾ 3 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿದೆ. ಗುಜರಾತ್ ನಾಯಕ ಚಿಂತನ್ ಗಜಾ, ಅರ್ಜನ್ ನಾಗವಾಸ್ವಾಲಾ ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed