Last Updated:
ಕೋರ್ಟ್ ವಿಚಾರಣೆ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ನಟಿ ರಮ್ಯಾ ಮಾಡಿದ್ದೇನು?
ಬೆಂಗಳೂರು (ಸೆ.06): ಸ್ಯಾಂಡಲ್ವುಡ್ ನಟಿ ರಮ್ಯಾ (Ramya) ಹಾಗೂ ದರ್ಶನ್ ಅಭಿಮಾನಿಗಳ ವಾರ್ ಕೋರ್ಟ್ ಮೆಟ್ಟಿಲೇರಿತ್ತು. ದರ್ಶನ್ ಅಭಿಮಾನಿಗಳು (Darshan Fans) ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಹಾಗೂ ಕೆಟ್ಟ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಬಗ್ಗೆ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ (Civil Court) ವಿಚಾರಣೆ ನಡೆದಿದ್ದು, ಆರೋಪಿಗಳು ನಟಿ ರಮ್ಯಾ ಕಾಲಿಗೆ ಬಿದ್ದು ಕ್ಷಮೆ ಕೇಳಲು ಮುಂದಾದ್ರೂ. ಆದ್ರೂ ನಟಿ ರಮ್ಯಾ ಅವರನ್ನ ಕ್ಷಮಿಸುವ ಮನಸ್ಸು ಮಾಡಿಲ್ಲ ಎಂದು ತಿಳಿದು ಬಂದಿದೆ.














