Last Updated:
ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಮ್ಯಾ ಕೃಷ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ಇದೀಗ ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಮ್ಯಾ ಕೃಷ್ಣನ್ (Ramya Krishna) ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ಇದೀಗ ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ರಮ್ಯಾ ಕೃಷ್ಣ, ನಂತರ ‘ಶಿವಗಾಮಿ’ ಪಾತ್ರದ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೀಗ ಅವರು ಡಿಜಿಟಲ್ ಜಗತ್ತಿನತ್ತ ಹೆಜ್ಜೆ ಇಟ್ಟಿದ್ದು, ಹೊಸ ರಿಯಾಲಿಟಿ ಶೋ ಮೂಲಕ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆ ಗಣನೀಯವಾಗಿ ಹೆಚ್ಚಿದೆ. ಸಿನಿಮಾ ಮತ್ತು ಕಿರುತೆರೆಯ ಅನೇಕ ಖ್ಯಾತ ಕಲಾವಿದರು ಡಿಜಿಟಲ್ ವೇದಿಕೆಯನ್ನು ಆಯ್ಕೆ ಮಾಡುತ್ತಿರುವ ಸಂದರ್ಭದಲ್ಲೇ ರಮ್ಯಾ ಕೃಷ್ಣ ಕೂಡ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವು ಸವಾಲಿನ ಪಾತ್ರಗಳನ್ನು ನಿರ್ವಹಿಸಿರುವ ಅವರು ಈಗ ರಿಯಾಲಿಟಿ ಶೋ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ರಮ್ಯಾ ಕೃಷ್ಣ ಅಭಿನಯದ ಹೊಸ ರಿಯಾಲಿಟಿ ಶೋಗೆ ‘ಸೆಕೆಂಡ್ ಲವ್’ ಎಂದು ಹೆಸರಿಡಲಾಗಿದೆ. ಶೀರ್ಷಿಕೆಯೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, ಇದರ ಕಥಾಹಂದರ ಕೂಡ ಅಷ್ಟೇ ವಿಶೇಷವಾಗಿದೆ.
ಈ ಕಾರ್ಯಕ್ರಮದಲ್ಲಿ ಈಗಾಗಲೇ ಪ್ರೀತಿಯಲ್ಲಿ ವಿಫಲರಾದ ಮತ್ತು ಬ್ರೇಕಪ್ ಅನುಭವಿಸಿದ 30 ವರ್ಷದೊಳಗಿನ 12 ಮಂದಿ ಯುವಕ-ಯುವತಿಯರನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ಅವರನ್ನು ಒಂದು ಐಷಾರಾಮಿ ವಿಲ್ಲಾದೊಳಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಜೀವನದ ಎರಡನೇ ಪ್ರೀತಿಯನ್ನು ಕಂಡುಕೊಳ್ಳಲು ಅನುಕೂಲಕರವಾದ ವಾತಾವರಣ ಮತ್ತು ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತದೆ.
‘ಸೆಕೆಂಡ್ ಲವ್’ ರಿಯಾಲಿಟಿ ಶೋ ಜನಪ್ರಿಯ ಒಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಕಾರ್ಯಕ್ರಮದ ಘೋಷಣೆ ಹೊರಬಿದ್ದಿದ್ದು, ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ನಿರ್ಮಾಪಕರು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಸೆಕೆಂಡ್ ಲವ್’ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೋಸ್ಟರ್‌ನಲ್ಲಿ ರಮ್ಯಾ ಕೃಷ್ಣ ಒಡೆದ ಹೃದಯದ ಚಿಹ್ನೆಯನ್ನು ಮತ್ತೆ ಜೋಡಿಸುವಂತೆ ಕಾಣಿಸಿಕೊಂಡಿದ್ದಾರೆ. ಈ
ಪ್ರೀತಿಯಲ್ಲಿ ನೋವು ಅನುಭವಿಸಿದವರ ಬದುಕಿನಲ್ಲಿ ಮತ್ತೊಮ್ಮೆ ಹೊಸ ಭರವಸೆ ಮೂಡಿಸುವ ಕಥೆಯನ್ನು ಈ ಶೋ ಹೇಳಲಿದೆ ಎಂಬ ಸುಳಿವನ್ನು ಪೋಸ್ಟರ್ ನೀಡಿದೆ.
ಪೋಸ್ಟರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಕೃಷ್ಣ ಅವರ ಲುಕ್ ಸಖತ್ ವೈರಲ್ ಆಗಿದೆ. 90ರ ದಶಕದಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಈಗಲೂ ಅದೇ ಉತ್ಸಾಹ ಮತ್ತು ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಹಲವು ವಿಭಿನ್ನ ಪಾತ್ರಗಳ ಮೂಲಕ ತಮ್ಮ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ರಮ್ಯಾ ಕೃಷ್ಣ ಈಗ ರಿಯಾಲಿಟಿ ಶೋ ಮೂಲಕ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಸದ್ಯಕ್ಕೆ ‘ಸೆಕೆಂಡ್ ಲವ್’ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಕಾರ್ಯಕ್ರಮ ಬಿಡುಗಡೆಯಾದ ಬಳಿಕ ಇನ್ನಷ್ಟು ಗಮನ ಸೆಳೆಯುವ ಸಾಧ್ಯತೆ ಇದೆ.
Bangalore [Bangalore],Bangalore,Karnataka













