Last Updated:
Ramya: ನಟಿ ರಮ್ಯಾ ಅವರು ಸುಂದರವಾದ ಶಾರ್ಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ದೃಷ್ಟಿ ಹಾಕ್ಬೇಡ್ರಪ್ಪಾ ಅಂತ ಹೇಳಿದ್ದಾರೆ.
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟಿ ದಿವ್ಯಾ ಸ್ಪಂದನಾ (Divya Spandana) ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Ramya) ಆಗಾಗ ತಮ್ಮ ಲೈಫ್ ಅಪ್ಡೇಟ್ಗಳನ್ನು ಸೋಷಿಯಲ್ ಮೀಡಿಯಾ (Social Media) ಮೂಲಕ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ನನ್ನ ಕೂಲಿಗೆ ಕಣ್ಣು ಹಾಕ್ಬೆಡ್ರಪ್ಪಾ ಅಂತ ಕೇಳಿಕೊಂಡಿದ್ದಾರೆ.
ಇತ್ತೀಚೆಗೆ ಗೆಳತಿ ಶರ್ಮಿಳಾ ಮಾಂಡ್ರೆ ಅವರ ಮದುವೆಯಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದಾರೆ ನಟಿ ರಮ್ಯಾ. ಮದುವೆ ಮನೆಯಿಂದ ಗೆಳತಿಯ ಜೊತೆ ಲವ್ಲೀ ಫೋಟೋಗಳನ್ನು ಕೂಡಾ ಶೇರ್ ಮಾಡಿದ್ದಾರೆ. ಇದೀಗ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ವಿಡಿಯೋಗೆ ಕ್ಯಾಪ್ಶನ್ ಬರೆಯುವಾಗ ನನ್ನ ಕೂಲಿಗೆ ದೃಷ್ಟಿ ಹಾಕಬೇಡಿ ಎಂದು ಹೇಳಿದ್ದಾರೆ.
ರಮ್ಯಾ ಅವರು ಬ್ಲ್ಯಾಕ್ ಬ್ಲೌಸ್ ಧರಿಸಿದ್ದು, ಅದಕ್ಕೆ ಕಾಪರ್ ಹಾಗೂ ಬ್ಲ್ಯಾಕ್ ಕಾಂಬಿನೇಷನ್ನ ಸೀರೆ ಉಟ್ಟಿದ್ದಾರೆ. ಯಾವುದೇ ನೆಕ್ಲೆಸ್ ಧರಿಸಿರಲಿಲ್ಲ. ನಟಿ ಆಕರ್ಷಕವಾದ ಇಯರಿಂಗ್ಸ್ ಧರಿಸಿಕೊಂಡು ಫ್ರೀ ಹೇರ್ ಬಿಟ್ಟಿದ್ದಾರೆ. ಪುಟ್ಟದೊಂದು ಬಿಂದಿ ಹಣೆಗಿಟ್ಟು ನ್ಯೂಡ್ ಲಿಪ್ಸ್ಟಿಕ್ ಹಚ್ಚಿ ಮುದ್ದಾಗಿ ಕಾಣಿಸಿದ್ದಾರೆ. ನಟಿ ಸ್ಟೈಲಾಗಿ ಶಾರ್ಟ್ ವಿಡಿಯೋಗೆ ಪೋಸ್ ಕೊಟ್ಟಿದ್ದು ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಟಿ ರಮ್ಯಾ ಅವರು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಝಲಕ್ ತೋರಿಸುತ್ತಾ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಮಾರು ಮಿಲಿಯನ್ಸ್ ಫಾಲೋವರ್ಸ್ ಇರುವ ನಟಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.
ನನ್ನ ಮುದ್ದಿನ ಚಂಪಿ ಮದುವೆಯಾಗಿದ್ದಾಳೆ. ಇದನ್ನು ನಂಬೋಕೆ ಸಾಧ್ಯವಾಗಲ್ಲ – ಸಮಯ ಎಷ್ಟು ಬೇಗನೆ ಕಳೆದುಹೋಗುತ್ತದೆ. ನಾನು ಮದುವೆಯ ಬಗ್ಗೆ ಪರಿಣಿತಳಲ್ಲ. ಆದರೆ ಗಿಬ್ರಾನ್ ಆದರ್ಶಪ್ರಾಯವಾದದ್ದನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ.
Bangalore,Karnataka














