Last Updated:
ಪ್ರೇಮದ ಊರಲಿ ಸಿನಿಮಾದ ಆ ಕ್ರಿಕೆಟ್ ಆಟದ ಸೀನ್ ಸಖತ್ ಆಗಿದೆ. ಇದರಲ್ಲಿ ರಮಿಕಾ ಶಿವು ತುಂಬಾನೆ ಎನರ್ಜಿಟಿಕ್ ಆಗಿಯೇ ಅಭಿನಯಿಸಿದ್ದಾರೆ. ಆದರೆ, ಈ ದೃಶ್ಯದ ಹಿಂದಿನ ಡಬ್ಬಿಂಗ್ ಕತೆ ಬೇರೆ ಇದೆ. ಅದರ ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.
ಪ್ರೇಮದ ಊರಲಿ ಸಿನಿಮಾ (Premada Oorali Movie) ಓಡ್ತಾ ಇದೆ. ಈ ಸಿನಿಮಾ ನೋಡಿದವರಿಗೆ ಕುತೂಹಲವು ಇದೆ. ಈ ಚಿತ್ರದ ಹಿಂದಿನ ಕತೆಗಳೇನು ಅನ್ನುವ ಪ್ರಶ್ನೆಗಳೂ ಇವೆ. ಇದಕ್ಕೆ ಪೂರಕ ಅನ್ನುವ ಹಾಗೆ ಸಿನಿಮಾದ ನಾಯಕಿ ರಮಿಕಾ ಶಿವು (Ramika Shivu) ತಮ್ಮ ಕೆಲಸದ ಕೆಲವು ಇಂಟ್ರಸ್ಟಿಂಗ್ ವಿಡಿಯೋ (Interesting Video) ಕೂಡ ಹಂಚಿಕೊಳ್ಳುತ್ತಿದ್ದಾರೆ. ಆ ಸಾಲಿನಲ್ಲಿ ಡಬ್ಬಿಂಗ್ ವಿಡಿಯೋ (Dubbing Video) ಕೂಡ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹೈ ಎನರ್ಜಿ ಇರೋ ವಸಂತ
(ಚಿತ್ರ ಕೃಪೆ: ರಮಿಕಾ ಶಿವು ಇನ್ಸ್ಟಾಗ್ರಾಮ್)
ಈ ವರ್ಷದ ಅತಿ ದೊಡ್ಡ ಹಿಟ್ ಚಿತ್ರವೂ ಅನಿಸಿಕೊಳ್ಳುತ್ತಿದೆ. ಥಿಯೇಟರ್ ಕಡೆಗೆ ಸುಳಿದೆ ಇರೋ ಜನರು ಇದನ್ನ ನೋಡಿಕೆ ಬರ್ತಿದ್ದಾರೆ. ಹಳ್ಳಿಗಳಲ್ಲಿ ಥಿಯೇಟರ್‌ಗಳು ಹೌಸ್‌ಫುಲ್ ಆಗಿವೆ. ಆ ರೀತಿನೇ ಈ ಚಿತ್ರ ಓಡ್ತಾನೇ ಇದೆ.
ಈ ಚಿತ್ರ ನೋಡಿದವರಿಗೆ ಸಹಜವಾಗಿಯೇ ಕುತೂಹಲ ಇರುತ್ತದೆ. ಅದು ಮೇಕಿಂಗ್ ಮ್ಯಾಟರೇ ಆಗಿರುತ್ತದೆ. ಹಾಗಾಗಿಯೋ ಏನೊ? ಚಿತ್ರದ ವಸಂತ ಪಾತ್ರಧಾರಿ ರಮಿಕಾ ಶಿವು ತಮ್ಮ ಕೆಲವು ಮೇಕಿಂಗ್ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ಒಂದು ಕ್ರಿಕೆಟ್ ದೃಶ್ಯಕ್ಕಾಗಿ ರಮಿಕಾ ಶಿವು ಕೂಗಿ ಕೂಗಿಯೇ ಡಬ್ಬಿಂಗ್ ಮಾಡಿದ್ದಾರೆ. ಇದು ತೆರೆ ಮೇಲೆ ನೋಡುಗರಿಗೆ ಖುಷಿನೂ ಕೊಡುತ್ತದೆ. ವಸಂತ ಪಾತ್ರಕ್ಕೆ ಅದೆಷ್ಟು ಎನರ್ಜಿ ಇದೆ ಅಂತಲೂ ಅನಿಸುತ್ತದೆ.
ಕೂಗಿ ಕೂಗಿ ಡಬ್ಬಿಂಗ್
(ಚಿತ್ರ ಕೃಪೆ: ರಮಿಕಾ ಶಿವು ಇನ್ಸ್ಟಾಗ್ರಾಮ್)
ಆದರೆ, ಈ ಚಿತ್ರದ ಹಿಂದಿನ ಡಬ್ಬಿಂಗ್ ನೋವು ಬೇರೇನೆ ಇದೆ. ಅದೆಷ್ಟೋ ಸಲ ರಮಿಕಾ ಶಿವು ನೀರು ಕುಡಿದಿದ್ದಾರೋ? ಡಬ್ಬಿಂಗ್ ಮಾಡ್ತಾನೆ ಗಂಟಲು ಉರಿ ಬಂದಿರೋದು ಇದೆ. ಅದನ್ನ ರಮಿಕಾ ಹೇಳಿಕೊಂಡಿರೋದು ಇದೆ. ಅದು ಮೇಕಿಂಗ್ ವಿಡಿಯೋದಲ್ಲೂ ಇದೆ.
ಪ್ರೇಮದ ಊರಲಿ ಸಿನಿಮಾದಲ್ಲಿ ವಸಂತ ಪಾತ್ರಕ್ಕೆ ಹೈ ಎನರ್ಜಿ ಇದೆ. ಚಿತ್ರದ ನೋಡಿದವರಿಗೆ ಇದರ ಪರಿಚಯ ಇರುತ್ತದೆ. ಆ ಎನರ್ಜಿ ನಟಿ ರಮಿಕಾ ಶಿವು ಅವರಲ್ಲೂ ಇದೆ.
ರಮಿಕಾ ಶಿವು ನಿಜಕ್ಕೂ ಚೆನ್ನಾಗಿ ಮಾಡಿದ್ದಾರೆ. ಜಡೆಗೂ ಲವ್‌ಗೂ ಲಿಂಕ್ ಕೂಡ ಇದೆ. ಮದುವೆ ಸಮಯದ ಜಡೆ ಸೀನ್ ಚೆನ್ನಾಗಿದೆ. ಕೊನೆಯ ಸೀನ್ ಕೂಡ ಟಚ್ ಆಗುತ್ತದೆ. ಹೀಗೆ ರಮಿಕಾ ಶಿವು ಅದ್ಭುತವಾಗಿಯೇ ನಟಿಸಿದ್ದಾರೆ. ಇದರೊಟ್ಟಿಗೆ ಜಡೆ ಕೂಡ ಇಲ್ಲಿ ಚೆಂದದ ಸ್ಟೋರಿಯನ್ನ ಹೇಳುತ್ತದೆ ಅಂತಲೇ ಹೇಳಬಹುದು.














