[ad_1]
ರಮೇಶ್ ಅರವಿಂದ್ ಅವರು ಸುಮ್ನೆ ಹೊಗಳೋದಿಲ್ಲ. ಚೆನ್ನಾಗಿರೋದನ್ನ ಅಷ್ಟೆ ಪ್ರೀತಿಯಿಂದಲೆ ಹೊಗಳುತ್ತಾರೆ. ಪ್ರೇಮದ ಊರಲಿ ಸಿನಿಮಾ ನೋಡಿ ತುಂಬಾನೆ ಖುಷಿಪಟ್ಟಿದ್ದಾರೆ.
ನಿನ್ನೆ ತಾನೆ ಸಿನಿಮಾ ನೋಡಿದೆ
(ಚಿತ್ರ ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್)
ಡೈರೆಕ್ಟರ್ ಮನೋಜ್ ಕುಮಾರ್ ಅವರಿಗೆ ಕಾಲ್ ಮಾಡಿಯೇ ಹೇಳಿದ್ದಾರೆ. ಚಿತ್ರದ ಕ್ಯಾಮರಾವರ್ಕ್ ಕೊಂಡಾಡಿದ್ದಾರೆ. ಇಡೀ ಚಿತ್ರದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ಮನೋಜ್ ಕುಮಾರ್ ಅವರೇ ನಿಮ್ಮ ಡೈರೆಕ್ಷನ್ ತುಂಬಾನೆ ಚೆನ್ನಾಗಿದೆ. ಇಡೀ ಸಿನಿಮಾ ಚೆನ್ನಾಗಿ ಮಾಡಿದ್ದೀರಿ. ಇದು ಅಷ್ಟೆ ಚೆನ್ನಾಗಿ ಬಂದಿದೆ.
ಈ ಸಿನಿಮಾ ನೋಡಿದೆ. ಅದು ತುಂಬಾನೆ ತೃಪ್ತಿ ಕೊಟ್ಟಿದೆ. ಎಲ್ಲ ಕಲಾವಿದರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನನ್ನ ಈ ಒಂದು ವಿಶ್ ಅನ್ನ ಅವರಿಗೂ ತಿಳಿಸಿ ಅಂತಲೇ ರಮೇಶ್ ಅರವಿಂದ್ ಹೇಳಿದ್ದಾರೆ.
ನಿಮ್ಮ ಈ ಚಿತ್ರವನ್ನ ನಿನ್ನೆ ತಾನೆ ನೋಡಿದೆ. ಇದು ಚೆನ್ನಾಗಿದೆ. ಬಹಳ ತೃಪ್ತಿ ಕೊಟ್ಟಿದೆ. ನಿಮ್ಮ ಡೈರೆಕ್ಷನ್ ತುಂಬಾನೆ ಚೆನ್ನಾಗಿದೆ. ಇದು ನಿಜಕ್ಕೂ ಖುಷಿ ಕೊಟ್ಟಿದೆ ಅಂತಲೆ ರಮೇಶ್ ಅರವಿಂದ್ ಹೇಳಿದ್ದಾರೆ.
ಈ ಚಿತ್ರಕ್ಕೆ ಸುನಾದ್ ಗೌತಮ್ ಮ್ಯೂಸಿಕ್ ಮಾಡಿದ್ದಾರೆ. ಇವರ ಹಾಡುಗಳೂ ಜನಕ್ಕೆ ಇಷ್ಟ ಆಗುತ್ತಿವೆ. ಮಕ್ಕಳಿಂದ ಹಾಡಿಸಿರೋ ಟೈಟಲ್ ಸಾಂಗ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.
ಸೆಪ್ಟೆಂಬರ್-25 ರಿಲೀಸ್
(ಚಿತ್ರ ಕೃಪೆ: ಡೈರೆಕ್ಟರ್ ಮನೋಜ್ ಕುಮಾರ್ ಇನ್ಸ್ಟಾಗ್ರಾಮ್)
ಈ ಚಿತ್ರವನ್ನ ಜನ ಸ್ವೀಕರಿಸಿದ್ದಾರೆ. ಥಿಯೇಟರ್ಗೆ ಹೋಗಿಯೇ ಸಿನಿಮಾ ನೋಡಿದ್ದಾರೆ. ಹಳ್ಳಿಗಳಲ್ಲೂ ಈ ಚಿತ್ರವನ್ನ ಜನ ನೋಡ್ತಿದ್ದಾರೆ. ಪೊಲೀಸರು ಥಿಯೇಟರ್ಗೆ ಬಂದು ನಿಲ್ಲುವಷ್ಟು ಜನರ ಬರ್ತಿದ್ದಾರೆ ನೋಡಿ.
ಪ್ರೇಮದ ಊರಲಿ ಸಿನಿಮಾ ಕಳೆದ ತಿಂಗಳು ರಿಲೀಸ್ ಆಗಿದೆ. ಸೆಪ್ಟೆಂಬರ್-25 ರಂದು ಇದು ತೆರೆ ಕಂಡಿತ್ತು. ಈ ಚಿತ್ರ ರಿಲೀಸ್ ಆದ ದಿನ ಕನ್ನಡದ ಇನ್ನೂ ಐದು ಚಿತ್ರ ಬಂದಿದ್ದವು.
ಪ್ರೇಮದ ಊರಲಿ ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಉತ್ತಮ ಕಲೆಕ್ಷನ್ನೊಂದಿಗೆ ಈ ಚಿತ್ರ ಮುನ್ನುಗುತ್ತಿದೆ. ಈ ಚಿತ್ರ ಚೆನ್ನಾಗಿ ಹೋಗುತ್ತಿದೆ.
ಇನ್ನು ಚೆನ್ನಾಗಿ ಹೋಗಲಿ ಅಂತಲೇ ಗಣೇಶ್ ಅಭಿನಯದ ಬೃಂದಾವಿಹಾರಿ ಸಿನಿಮಾ ತನ್ನ ರಿಲೀಸ್ ಅನ್ನ ಮುಂದಕ್ಕೆ ಹಾಕಿದೆ ಅಂತಲೂ ಹೇಳಬಹುದು.
[ad_2]
Source link













